ಯುವತಿ ನಾಪತ್ತೆ : ಸುಳಿವು ಪತ್ತೆಗೆ ಮನವಿ- Young woman missing: Appeal for clues

SUDDILIVE || SHIVAMOGGA

ಯುವತಿ ನಾಪತ್ತೆ : ಸುಳಿವು ಪತ್ತೆಗೆ ಮನವಿ- Young woman missing: Appeal for clues   

Missing, Apoeal


ಅಲ್ಮಾಸ್ ಪರ್ವೀನ್ ಎನ್ ಆರ್, 25 ವರ್ಷ ವಯಸ್ಸು ಈಕೆಯು ಭದ್ರಾವತಿಯ ಸಿಗೇಬಾಗಿಯಲ್ಲಿರುವ ರಾಜೀವ್‌ಗಾಂಧಿ ಬಿ.ಎಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಜ.06 ರಂದು ಸ್ನೇಹಿತೆಯನ್ನು ಭೇಟಿ ಮಾಡಿ ಬರುವುದಾಗಿ ಮನೆಯಿಂದ ಹೋದವಳು ಹಿಂದುರುಗಿ ಬಂದಿರುವುದಿಲ್ಲ. 

 ಕಾಣೆಯಾದ ಅಲ್ಮಾಸ್ ಪರ್ವೀನ್ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಉರ್ದು, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆ ಮಾತಾನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್, ಪಿಂಕ್ ಬಣ್ಣದ ಲೆಗಿನ್ಸ್ ಪ್ಯಾಂಟು, ಬಿಳಿ ಗೆರೆಗಳಿರುವ ಕಪ್ಪು ಬಣ್ಣದ ಬುರ್ಖಾ, ಕಾಫಿ ಬಣ್ಣದ ವೇಲ್ ಧರಿಸಿರುತ್ತಾಳೆ.

 ಈಕೆಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಹಳೇನಗರ ಪೊಲೀಸ್ ಠಾಣೆ, ಭದ್ರಾವತಿ ಇಲ್ಲಿಗೆ ಮಾಹಿತಿ ನೀಡಬೇಕೆಂದು ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

ಕಾಣೆಯಾಗಿದ್ದಾರೆ

ಮತ್ತೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕು ಶೀರಿಹಳ್ಳಿ ಗ್ರಾಮ ವಾಸಿ ಲಲಿತಾ ಬಾಯಿ ಎಂಬುವವರ ಪತಿ ಹಾಲಾ ನಾಯ್ಕ ಬಿನ್ ಸೋಮ್ಲಾ ನಾಯ್ಕ ಎಂಬ 47 ವರ್ಷದ ವ್ಯಕ್ತಿ ಡಿ. 15 ರಂದು ತನ್ನ ಅತ್ತೆ ಮನೆಯಿಂದ ಕಾಣೆಯಾದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. 

ಈ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಹಾಗೂ ಹಸಿರು ಜರ್ಕಿನ್ ಧರಿಸಿರುತ್ತಾರೆ.

ಈ ವ್ಯಕ್ತಿಯ ಕುರಿತು ಸುಳಿವು ಸಿಕ್ಕಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 9480803367 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Young woman missing: Appeal for clues   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close