SUDDILIVE || SHIVAMOGGA
ರಾಮನನ್ನ ರಾಜಕೀಯಗೊಳಿಸುವುದು ಬೇಡ, ವಿಬಿ-ಜಿ ರಾಮ್ ಜಿ ಹೆಸರು ಹಿಂಪಡೆಯಲು ಆಯನೂರು ಆಗ್ರಹ-Don't politicize Ram, VB-G demands withdrawal of Ram Ji's name
ಮನರೆಗಾ ಯೋಜನೆಯನ್ನ ಬದಲಿಸಿ ಹೊಸ ಮಸೂದೆಯನ್ನ ಕೇಂದ್ರ ಜಾರಿಗೆ ತಂದಿದೆ. ಮಸೂದೆಯ ಉಚ್ಚಾರಣೆ ಬದಲಿಸಿ ಧಾರ್ಮಿಕ ಲೇಪನ ಬಳಿಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಲೇಪನ ಬಳಸಿ ಲಾಭ ಪಡೆದುಕೊಳ್ಳಲು ಕೇಂದ್ರ ಹೊರಟಿದೆ. ಯೋಜನೆಯಿಂದ ಬಡವರಿಗೆ ಅನುಕೂಲವಾಗುವ ಬದಲು ಧಾರ್ಮಿಕ ಲೇಪನ ಬಳಿಯಲಾಗಿದೆ. ಮಹಾತ್ಮ ಗಾಂಧಿಜೀಯವರ ಹೆಸರನ್ನ ಕೈ ಬಿಡಲು ರಾಮನ ಹೆಸರು ಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಮ್ ಎನ್ನುವ ಹೆಸರು ಆ ಮಸೂದೆಯಲ್ಲಿ ಇಲ್ಲವೇ ಇಲ್ಲ. ರಾಮ್ ನನ್ನ ಈ ಮಸೂದೆಯಲ್ಲಿ ಹುಟ್ಟು ಹಾಕಿದ್ದಾರೆ. ಬಡವರಿಗೆ ಅನುಕೂಲವಾಗಿದ್ದ ಮನರೇಗಾ ವನ್ನು ಬದಲಿಸಿದ್ದಾರೆ. ಯೋಜನೆಯ ಪೂರ್ಣ ವೆಚ್ಚವನ್ನು ಕೇಂದ್ರವೇ ಕೊಡಬೇಕಿತ್ತು. ಈಗ ರಾಜ್ಯದ ಮೇಲೆ ಆರ್ಥಿಕ ಹೊರೆ ಹಾಕಲು ಹೊರಟಿದೆ ಎಂದು ದೂರಿದರು.
ಗ್ರಾಮ ಪಂಚಾಯತಿಯಗಳ ಅಧಿಕಾರವನ್ನ ಈ ಮಸೂದೆ ಕಸಿದುಕೊಂಡಿದೆ. ಗ್ರಾಮೀಣ ನಿರೋದ್ಯೋಗಿ ಕಾರ್ಮಿಕರಿಗೆ ಆಶ್ರಯವಾಗಿದ್ದ ಯೋಜನೆ ಉದ್ಯೋಗ ಕಿತ್ತುಕೊಂಡಿದೆ. ಕಾರ್ಮಿಕರಿಗೆ ಕೂಲಿಯಲ್ಲಿ ವಂಚನೆ ಆಗಲಿದೆ ಈ ಮಸೂದೆಯಿಂದ ಕೇಂದ್ರದ ಯೋಜನೆಗೆ ರಾಜ್ಯದ ಮೇಲೆ ಹಣಕಾಸಿನ ಭಾರ ಹಾಕಿದೆ ಎಂದು ದೂರಿದರು.
ಹಣದ ಹೊರೆಯನ್ನ ಸಹ ಪಂಚಾಯತಿಗಳಿಗೆ ಹಾಕಿದ್ದಾರೆ. ಸುಳ್ಳು ಪ್ರಚಾರ ಮಾಡಿ ಯೋಜನೆಯನ್ನ ಜಾರಿ ಮಾಡಿದ್ದಾರೆ. ರಾಮನನ್ನ ಎಲ್ಲಿ ಸಿಕ್ಕರು ಬಿಡದೆ ರಾಮನ ಹೆಸರನ್ನ ದುರ್ಬಳಕೆ ಮಾಡುತ್ತಿದ್ದಾರೆ. ವಿಬಿ-ಜಿ ರಾಮ್ ಜಿ ಮಸೂದೆ ಕೂಡಲೇ ರದ್ದು ಮಾಡಬೇಕಿದೆ. ಮನರೇಗಾ ಯೋಜನೆಯನ್ನ ಮುಂದುವರಿಸಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದರು.
ರಾಮನ ಹೆಸರು ಹೇಳಿ ಭಾವನಾತ್ಮಕವಾಗಿ ಜನರನ್ನ ತಪ್ಪು ದಾರಿಗೆ ತರುವುದು ಬೇಡ, ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹಾಕುವ ಕೆಲಸ ಕೇಂದ್ರ ಮಾಡ್ತಿದೆ. ರಾಮನ ಹೆಸರನ್ನ ದುರ್ಬಳಕೆ ಮಾಡಿಕೊಳ್ಳಬೇಡಿ. ರಾಮನನ್ನ ರಾಜಕೀಯಗೊಳಿಸುವುದು ಬೇಡ ಎಂದ ಆಯನೂರು ಮಂಜುನಾಥ್ ಆಗ್ರಹಿಸಿದರು.
Don't politicize Ram, VB-G demands withdrawal of Ram Ji's name

