SUDDILIVE || SHIVAMOGGA
ನಿವೃತ್ತ ರಕ್ಷಣಾ ಅಧಿಕಾರಿಗಳಿಗೆ ಒಪ್ಪಂದದ ಮೇರೆಗೆ ಕ್ಯಾಂಟೀನ್ ಮೇನೇಜರ್ ಹುದ್ದೆಗೆ ಅರ್ಜಿ ಆಹ್ವಾನ-Applications are invited for the post of Canteen Manager
ಮಿಲಿಟರಿ ಕ್ಯಾಂಟೀನ್ ಮತ್ತು ಲೆಕ್ಕಪತ್ರಗಳ ಅನುಭವವುಳ್ಳ 64 ವರ್ಷ ವಯಸ್ಸಿನೊಳಗಿನ ನಿವೃತ್ತ ರಕ್ಷಣಾ ಅಧಿಕಾರಿ (ಡಿಫೆನ್ಸ್ ಆಫೀರ‍್ಸ್) ಗಳಿಂದ ಒಪ್ಪಂದದ ಮೇರೆಗೆ ವಿರಾಜಪೇಟೆ ಮತ್ತು ಕೋಲಾರ ಈ ಸ್ಥಳಗಳಲ್ಲಿ ಕ್ಯಾಂಟೀನ್ ಮೇನೇಜರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಜ.20 ರೊಳಗಾಗಿ Canteen Officer, Golden Palm Canteen cell, c/o HQ K&K Sub Area, Cubbon Road, Bengaluru – 560001 ಎಂಬ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಮಿಂಚAಚೆ gpccellkksa@gmail.com ಮೂಲಕ ಕಳುಹಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಹತೆ, ಅರ್ಜಿ ನಮೂನೆಗಳಿಗಾಗಿ gpcscblr.co.in GPC ಎಂಬ ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ.
Applications are invited for the post of Canteen Manager

