ಭದ್ರಾವತಿಯಲ್ಲಿ ವೃದ್ಧ ದಂಪತಿಗಳಿಬ್ಬರು ದಿಡೀರ್ ಸಾವು-Elderly couple dies suddenly in Bhadravati

 SUDDILIVE || BHADRAVATHI

ಭದ್ರಾವತಿಯಲ್ಲಿ ವೃದ್ಧ ದಂಪತಿಗಳಿಬ್ಬರು ದಿಡೀರ್ ಸಾವು-Elderly couple dies suddenly in Bhadravati

Elderly, Bhadravathi

ಭದ್ರಾವತಿಯ 5 ನೇ ತಿರುವಿನಲ್ಲಿರುವ ಮನೆಯೊಂದರಲ್ಲಿ ವೃದ್ಧ ದಂಪತಿಗಳು ದಿಡೀರನೆ ಸಾವನ್ನಪ್ಪಿದ್ದು ಇಬ್ಬರ ಸಾವು ಅನುಮಾನಸ್ಪದ ಅಡಿ ದೂರು ದಾಖಲಾಗಿದೆ. 

ಭದ್ರಾವತಿಯ ಭೂತನಗುಡಿಯಲ್ಲಿ ಚಂದ್ರಪ್ಪ (80) ಮತ್ತು ಪತ್ನಿ ಜಯಮ್ಮ (70) ಸಾವನ್ನಪ್ಪಿರುವುದು ಅನುಮಾನಸ್ಪದಕ್ಕೆ ಕಾರಣವಾಗಿದೆ. ಇಬ್ಬರು ಅನೂನ್ಯವಾಗಿದ್ದು, ಇಬ್ಬರಿಗೆ ಮೂವರು ಗಂಡು ಮಕ್ಕಳ್ಳಿದ್ದಾರೆ. ಗಂಡು ಮಕ್ಕಳಲ್ಲಿ ಒಬ್ಬರು ಶಿಕ್ಷಕರಾಗಿದ್ದರೆ, ಮತ್ತೋರ್ವರು ದಾವಣಗೆರೆಯ ಶಿವಶಂಕರ್ ಅವರ ಸಂಸ್ಥೆಯಲ್ಲಿ ನೌಕರರಾಗಿದ್ದಾರೆ. 

ನಿನ್ನೆ ಊಟ ಮುಗಿಸಿ ಮಲಗಿದ್ದ ದಂಪತಿಗಳು ಇಂದು ಬೆಳಿಗ್ಗೆ ಮಕ್ಕಳು ಕರೆ ಮಾಡಿದ್ದಕ್ಕೆ  ದಂಪತಿಗಳಿಬ್ಬರು ಕರೆ ಸ್ವೀಕರಿಸಲಿಲ್ಲ ಎಂಬುದು ತಿಳಿದು ಬಂದಿದೆ. ಸ್ಥಳೀಯರು ಮನೆಗೆ ಹೋದಾಗ ದಂಪತಿ ಸಾವು ಧೃಢಪಟ್ಟಿದೆ. ಈ ದಂಪತಿಗಳು ಕನಕ ಮಂಟಪದಲ್ಲಿ ವಾಕ್ ಮಾಡುತ್ತಿದ್ದರು ಎಂಬುದು ಸ್ಥಳೀಯರ ಹೇಳಿಕೆಯಾಗಿದೆ.


ಪ್ರತಿದಿನ ಬಂದು ಶುಗರ್, ಬಿಪಿ ಕಾಯಿಲೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ನಿನ್ನೆ ವೈದ್ಯರು ಬಂದು ಇಂಜೆಕ್ಟ್ ಮಾಡಿ ಹೋದ ನಂತರ ಮಧ್ಯಾಹ್ನದಿಂದ ದಂಪತಿಗಳು ಏಳಲಿಲ್ಲ. ಇದು ವರೆಗೂ ವೈದ್ಯರು ಬಂದು ಹೋಗದ ಹಿನ್ನಲೆಯಲ್ಲಿ ಸ್ಥಳೀಯರು ವೈದ್ಯರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ವೈದ್ಯರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ವೃದ್ಧರ ಮೈಮೇಲೂ ಚಿನ್ನಾಭರಣ ಕಳುವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. 

ಮನೆಯ ರೂಮಿನಲ್ಲಿ ಚಂದ್ರಪ್ಪ ಶವವಾಗಿ ಪತ್ತೆಯಾದರೆ, ಪತ್ನಿ ಜಯಮ್ಮ ಹಾಲ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಧ್ಯಕ್ಕೆ ಪ್ರಕರಣವನ್ನ ಭದ್ರಾವತಿ ಓಲ್ಡ್ ಟೌನ್ ಪೊಲೀಸರು ಅನುಮಾನ ಸ್ಪದ ಸಾವೆಂದು ಯುಡಿಆರ್ ಮಾಡಿಕೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮನೆಯ ಮುಂದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. 

Elderly couple dies suddenly in Bhadravati

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close