ವಾಣಿಜ್ಯ ಬೆಳೆಯ ಕೃಷಿಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹ-Demand to provide basic facilities to commercial crop agricultural workers

 SUDDILIVE || SHIVAMOGGA

ವಾಣಿಜ್ಯ ಬೆಳೆಯ ಕೃಷಿಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹ-Demand to provide basic facilities to commercial crop agricultural workers    

Demand, commercial


ಅಡಿಕೆ ಮತ್ತು ಕಾಫಿ ಬೆಳೆ ಉದ್ಯಮದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಅಂಬೇಡ್ಕರ್ ಶ್ರಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸಲು ಹಾಗೂ ಸಂಪನ್ಮೂಲ ಕ್ರೂಡೀಕರಣಕ್ಕೆ ಅಡಿಕೆ ಮತ್ತು ಕಾಫಿ ಬೆಳೆ ಮಾರಾಟ ವಹಿವಾಟಿನ ಮೇಲೆ ಶೇಕಡ ಒಂದರಷ್ಟು ಕಾರ್ಮಿಕರ ಸೇಸ್ ಹಾಕಲು ಒತ್ತಾಯಿಸಿ ಇಂದು ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. 

ಸಾವಿರಾರು ಕೋಟಿಗಳ ವಾರ್ಷಿಕ ವಹಿವಾಟು ನಡೆಯುವ ಈ ವಾಣಿಜ್ಯ ಕೃಷಿ ಬೆಳೆಯ ಕಾರ್ಯದಲ್ಲಿ ಬೆಳೆಗಳನ್ನು ಆರೈಕೆ ಕಟಾವು ಮತ್ತು ಅಡಿಕೆ ಮತ್ತು ಕಾಫಿ ಮಾರಾಟ ಮತ್ತು ಖರೀದಿ ಮಂಡಿಗಳಲ್ಲಿ ಕಾರ್ಯನಿರ್ವಹಿಸುವ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ದಿಗ್ ಕಾರ್ಮಿಕರ ಮಾದರಿಯಲ್ಲಿ ಅಡಿಕೆ ಮತ್ತು ಕಾಫಿ ಮಾರಾಟ ಮತ್ತು ಖರೀದಿ ಮಂಡಿಗಳಲ್ಲಿ ನಡೆಯುವ ವ್ಯವಹಾರ ವಹಿವಾಟಿನ ಮೇಲೆ ಶೇಕಡ ಒಂದರಷ್ಟು ಅಸಂಗಡಿತ ಕಾರ್ಮಿಕರ ಸಸ್ಸನ್ನು ಹಾಕಬೇಕೆಂದು ಸಂಘ ಆಗ್ರಹಿಸಿದೆ.

ಅಂಬೇಡ್ಕರ್ ಶ್ರಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಇದರ ಮೂಲಕ ನಿರ್ಗತಿಕ ಬಡ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ ಅವರನ್ನು ಸಾರ್ವಜನಿಕ ಜೀವನದಲ್ಲಿ ಸಿಗುವ ಶಿಕ್ಷಣ ಆರೋಗ್ಯ ಜೀವ ವಿಮೆ ಇತರೆ ಸೌಲಭ್ಯಗಳನ್ನು ನೀಡಬೇಕಾಗಿ ಸಂಘಟನೆ ಆಗ್ರಹಿಸಿದೆ.

ರಾಜ್ಯ ಸಂಘಟಿತ ಕಾರ್ಮಿಕ ಸಂಘದ ಸಂಸ್ಥಾಪಕರಾದ ಉಪೇಂದ್ರ 500 ರಾಜ್ಯ ಅಧ್ಯಕ್ಷ ಪ್ರದೀಪ್ ಹೊನ್ನಪ್ಪ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀಮತಿ ಇಂದು ಬಿ ಗೌಡ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಮಮತಾ ರೆಡ್ಡಿ ರಾಜ್ಯ ಕಾನೂನು ಸಲಹೆಗಾರರಾದ ಚೈತನ್ ಲಕ್ಕಪ್ಪ ರಾಜ್ಯ ಕಾರ್ಯದರ್ಶಿ ಶ್ರೀಮತಿ ಸುರೇಖಾ ಪಾಲಾಕ್ಷಪ್ಪ ಜಿಲ್ಲಾಧ್ಯಕ್ಷರಾದ ರಮೇಶ್ ಮಡಿವಾಳ ಬಂದಗದ್ದೆ ಮೊದಲಾದವರು ಭಾಗಿಯಾಗಿದ್ದರು.

Demand to provide basic facilities to commercial crop agricultural workers 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close