4000 ಕೋಟಿ ರೂ. ಟನಲ್ ಮೇಲೆ ಕಣ್ಣು!Eyes on Rs 4000 crore tunnel

 SUDDILIVE || SHIVAMOGGA

4000 ಕೋಟಿ ರೂ. ಟನಲ್ ಮೇಲೆ ಕಣ್ಣು!Eyes on Rs 4000 crore tunnel   

Agumbe, tunnel


ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯ ಅಧಿಕಾರಿಗಳ ಜೊತೆ ನೂತನ ಡಿಸಿ ಮತ್ತು ಎಸ್ಪಿಯವರ ಜೊತೆ ಸಂದರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಆಗುಂಬೆಯ ಘಾಟಿಯಲ್ಲಿ ಟನಲ್ ಮಾರ್ಗದ ಬಗ್ಗೆ ಗಂಭೀರ ಚರ್ಚೆ ನಡೆದಿದೆ. 

ಆಗುಂಬೆ ಮಾರ್ಗಕ್ಕೆ ಎರಡು ರೀತಿಯಲ್ಲಿ ಮಾರ್ಗ ನಿರ್ಮಿಸಲು ಡಿಪಿಆರ್ ಮಾಡಲಾಗಿತ್ತು‌. ಇರುವ ಮಾರ್ಗದಲ್ಲಿಯೇ ರಸ್ತೆ ಅಗಲೀ ಕರಣಕ್ಕೆ 8-10 ಕಿಮಿಗೆ 400 ಕೋಟಿ ಮತ್ತೊಂದು 3500-4000 ಕೋಟಿ ಹಣದ ವೆಚ್ಚದಲ್ಲಿ ಟನಲ್ ನಿರ್ಮಿಸಲು ಡಿಪಿಆರ್ ರೆಡಿಯಾಗಿತ್ತು. ಈಗ ರಸ್ತೆ ಅಗಲೀಕರಣದ ಹಣ 400 ಕೋಟಿ ಬಂದಿದೆ. ಹಾಗಾಗಿ ಟನಲ್ ನಿರ್ಮಾಣಕ್ಕೆ ಅಡ್ಡಿ ಉಂಟಾಗಿದೆ. 

ಈ ಹಿಂದೆ ಸಂಸದರೆ ಆಗುಂಬೆ ಅಗಲೀಕರಣವೂ ಆಗಲಿದೆ ಟನಲ್ಲೂ ನಿರ್ಮಿಸಲಾಗಲಾಗುವುದಾಗಿ ಭರವಸೆ ನೀಡಿದ್ದರು. ಈಗ ಅವರ ನಿರೀಕ್ಷಗೂ ಹಿನ್ನಡೆಯಾದಂತಾಗಿದೆ. ಈ ಹಿನ್ನಲೆಯಲ್ಲಿ 400 ಕೋಟಿ ವೆಚ್ಚದಲ್ಲಿ ಆಗುಂಬೆ ಅಗಲೀಕರಣಕ್ಕೆ ನೆಪ ಹುಡುಕಲಾಗುತ್ತಿದೆಯಾ ಎಂಬ ಅನುಮಾನವೂ ಆರಂಭವಾಗಿದೆ. 


ಅಗಲೀಕರಣಕ್ಕೆ ಅರಣ್ಯ ಮತ್ತು ವನ್ಯಜೀವಿ ಇಲಾಖೆಯಿಂದ ಅನುಮತಿ ಸಿಗಬೇಕಿದೆ. ಅದು ಸಿಗದಿದ್ದರೂ 'ಬಿ' ಪ್ಲಾನ್ ರೆಡಿ ಮಾಡಿಕೊಳ್ಳಲಾಗಿದೆ. ಅದೇ ಟನಲ್ ಯೋಜನೆ. ಘಾಟಿ ರಸ್ತೆ ಅಗಲೀಕರಣಕ್ಕೆ ಅನುಮತಿ ಸಿಗದಿರುವ ಹಾಗೆ ಮಾಡಿ 3500-4000 ಕೋಟಿಯ ಟನಲ್ ಗೆ ಕೇಂದ್ರ ಒಪ್ಪಿಗೆ ಪಡೆಯುವುದೆ ಬಿಪ್ಲಾನ್. 400 ಕೋಟಿ ಹಣ ತಿರಸ್ಕಾರದ ಹಿಂದೆ 3500-4000 ರೂ. ಹಣದ ಮೇಲೆ ಕಣ್ಣಿಡಲಾಗಿದೆ. ಟನಲ್ ಭೂಮಿಯ ಒಳಭಾಗದಲ್ಲಿ ಹೋಗುವುದರಿಂದ ವನ್ಯಜೀವಿ ಮತ್ತು ಅರಣ್ಯ ಇಲಾಖೆ ಒಪ್ಪಿಗೆ ನೀಡುವ ಭರವಸೆ ಹೆಚ್ಚಾಗಿದೆ.

ಏಕೆಂದರೆ ಬೇರೆಡೆ ಇದೇ ಪಶ್ಚಿಮ ಘಟ್ಟದಲ್ಲಿ ಟನಲ್ ನಿರ್ಮಿಸಲಾಗಿದೆ. ಆದರೆ ಇಂದು ನಡೆದ ಸಭೆಯಲ್ಲಿ ಆಗುಂಬೆ ಅಗಲೀಕರಣಕ್ಕಿಂತ ಟನಲ್ ಬಗ್ಗೆ ಸಂಸದರು ಹೆಚ್ಚು ಒತ್ತುನೀಡಿರುವುದು ಕಂಡುಬಂದಿದೆ. ಪಶ್ಚಿಮ ಘಟ್ಟಗಳಲ್ಲಿ ಜನಪ್ರತಿನಿಧಿಗಳಿಗೆ ಈ ರೀತಿ ಅಭಿವೃದ್ಧಿಯ ಒಲವು ಏಕೆ ಎಂಬುದು ಕುತೂಹಲ ಮೂಡಿಸಿದೆ. 

ಸ್ಕೈವಾಕ್, ಅಂಡರ್ ಪಾಸ್ ಮಾಡಲು ಸೂಚನೆ

ಅದರಂತೆ ಶಿವಮೊಗ್ಗದ ಹರಿಗೆಯ ಬಳಿ ಸ್ಮಶಾನ ಜಾಗವನ್ನ ಹಸ್ತಾಂತರಿಸದೆ ಇರುವುದರಿಂದ ಚಿತ್ರದುರ್ಗ ರಸ್ತೆಯ ರಿಂಗ್ ರಸ್ತೆ ನಿರ್ಮಾಣಕ್ಕೆ ಬ್ರೇಕ್ ಬಿದ್ದಿದೆ. ನಗರದಲ್ಲಿ ಮೂರು ನಾಲ್ಕು ವೃತ್ತದ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ಎನ್ ಹೆಚ್ ಅಧಿಕಾರಿಗಳಿ್ಎ ಸೂಚಿಸಲಾಯಿತು‌. ಇನ್ನೂ ಎಎ ವೃತ್ತ ಮತ್ತು ಎಸ್ ಎನ್ ವೃತ್ತದಲ್ಲಿ ಅಂಡರ್ ಪಾಸ್ ಇದ್ದರೂ ಸೀಪೇಜ್ ವಾಟರ್ ನಿಲ್ಲುವುದರಿಂದ ರಿಪೇರಿಗೆ ಹಣ ಜೋಡಿಸಿಕೊಳ್ಳಬೇಕಿದೆ. ಒಂದು ಕೋಟಿಯಲ್ಲಿ ರಿಪೇರಿಯಾಗುವುದಾದರೆ ಹಣ ಒದಗಿಸುವ ಭರವಸೆಯನ್ನ ಸಂಸದರು ನೀಡಿದ್ದಾರೆ. 

ಮಲವಗೊಪ್ಪದಲ್ಲಿ ಭೂಸ್ವಾಧೀನ ಸಮಸ್ಯೆ 

ಮಲವಗೊಪ್ಪದಲ್ಲಿ ಭೂಸ್ವಾಧೀನ ಸಮಸ್ಯೆಯಾಗಿದ್ದು, 206 ರಾ.ಹೆ ಕಾಮಗಾರಿ ನೆನಗುದಿಗೆ ಬಿದ್ದಿದೆ. ಭೂಮಿ ಗೋಮಾಳದ ಹೆಸರಲ್ಲಿದೆ. ಈಗಾಗಲೇ ಮನೆಗೆ ಪರಿಹಾರ ನೀಡಲಾಗಿದೆ.  ಭೂಮಿಗೆ ಪರಿಹಾರ ನೀಡಲಾಗುತ್ತಿಲ್ಲ. ಜನ ಭೂಮಿಗೆ ಹಣ ನೀಡಬೇಕು.ಇದಕ್ಕೆ ರಾಜ್ಯ ಸರ್ಕಾರ ಕೈಜೋಡಿಸಬೇಕು‌ ಎಂದು ಸಂಸದರೆ ಹೇಳಿದರು. 

Eyes on Rs 4000 crore tunnel

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close