ಸ್ವಾಗತ ಭಾಷಣಕ್ಕಿಂತ ಬೀಳ್ಕೊಡುಗೆ ಭಾಷಣವೇ ಜೋರು-The farewell speech is louder than the welcome speech

 SUDDILIVE || SHIVAMOGGA

ಸ್ವಾಗತ ಭಾಷಣಕ್ಕಿಂತ ಬೀಳ್ಕೊಡುಗೆ ಭಾಷಣವೇ ಜೋರು-The farewell speech is louder than the welcome speech

Farewell, speach


ಇಂದು ಸರ್ಕಾರಿ ನೌಕರರ ಭವನದಲ್ಲಿ ನಿರ್ಗಮಿತ ಡಿಸಿ ಗುರುದತ್ತ ಹೆಗಡೆಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ನೂತನ ಡಿಸಿ, ಎಸ್ಪಿಗಳಾದ ಪ್ರಭುಲಿಂಗ ಕವಲಿಕಟ್ಟಿ,  ಬಿ.ನಿಖಿಲ್ ಅವರಿಗೆ ಸ್ವಾಗತ ಕಾರ್ಯಕ್ರಮ ನಡೆದಿದೆ. ಸ್ವಾಗತ ಕಾರ್ಯಕ್ರಮಕ್ಕಿಂತ ಬೀಳ್ಕೊಡುಗೆ ಭಾಷಣಕ್ಕೆ ಕಾರ್ಯಕ್ರಮದಲ್ಲಿ ಹೆಚ್ಚು ಒತ್ತುನೀಡಲಾಗಿರುವುದರು ವಿಶೇಷವಾಗಿತ್ತು. 

ಕಾರ್ಯಮದಲ್ಲಿ ಸ್ವಾಗತ ಸ್ವೀಕರಿಸಿ ಮಾತನಾಡಿದ ನೂತನ ಎಸ್ಪಿ ಬಿ.ನಿಖಿಲ್ ನಿರ್ಗಮಿತ ಡಿಸಿ ಗುರುದತ್ತಹೆಗಡೆಯವರನ್ನ ಹೊಗಳುತ್ತಾ ನಾನು ಮೆಕಾನಿಕಲ್ ಇಂಜಿನಿಯರ್ ಆದರೂ  ಐಪಿಎಸ್ ಎಕ್ಸಾಮ್ ನಲ್ಲಿ  ಕನ್ನಡ ಸಾಹಿತ್ಯವನ್ನ ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಲು ಹೆಗಡೆಯವರೆ ಸ್ಪೂರ್ತಿಯಾಗಿದ್ದರು. ಹೆಗಡೆ ಅವರ ಜೊತೆ ಒಂದು ದಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದನ್ನ ನೆನಪಿಸಿಕೊಂಡರು.  

ಎಲ್ಲಾರನ್ನ ವಿಶ್ವಾಸಕ್ಕೆ ಪಡೆದು ಆಡಳಿತ ನಡೆಸಿದ್ದಕ್ಕೆ ಹೆಗಡೆ ಸಾಹೆಬರು ಯಶಸ್ವಿಯಾಗಿದ್ದಾರೆ. ಅವರ ಮಾರ್ಗವನ್ನೇ ಅನುಸರಿಸೋಣ,  ಐದು ಬೆರಳು ಸೇರಿಸಿ ಮುಷ್ಠಿ ಕಟ್ಟಿದ ರೀತಿಯಲ್ಲಿ ಸರ್ಕಾರಿ ನೌಕರರು ಮತ್ತು ಪೊಲೀಸ್ ಇಲಾಖೆ ಒಟ್ಟಿಗೆ ಕೆಲಸ ಮಾಡೋಣ ಎಂದು ಕರೆನೀಡಿದರು. 

ಬೀಳ್ಕೊಡುಗೆ ಸ್ವೀಕರಿಸಿದ ಮತ್ತೋರ್ವ ಜಿಲ್ಲೆಯ ವರಿಷ್ಠಾಧಿಕಾರಿ ಡಿಸಿ ಪ್ರಭುಲಿಂಗ ಕವಲಿಕಟ್ಟಿ ಅವರು ಮಾತನಾಡಿ, ಬೀಳ್ಕೊಡುಗೆ ಮತ್ತು ಸ್ವಾಗತ ಕಾರ್ಯಕ್ರಮ ಒಟ್ಟಿಗೆ ನಡೆದಾಗ ಬೀಳ್ಕೊಡುಗೆ ಭಾಷಣವೇ ಕೇಂದ್ರ ಬಿಂದುವಾಗಿರುತ್ತದೆ. ಮಾತು ಕಡಿಮೆ ಕೆಲಸ ಜಾಸ್ತಿ ನನ್ನ ಸಿದ್ದಾಂತವಾಗಿದೆ. ಹಿಂದಿನ ಡಿಸಿಯ ಕಾರ್ಯವೈಖರಿಯನ್ನ ಅನುಸರಿಸಿಯೇ ಮುಂದು ಸಾಗೋಣ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಪತ್ರಕರ್ತರ ಜೊತೆ ಮುಂದೆ ಸಾಗೋಣ ಎಂದರು. 

ಡಿಸಿಯವರ ಭಾಷಣಕ್ಕಿಂತ ಮೊದಲು ಪ್ರವಾಸೋದ್ಯಮ ಇಲಾಖೆಯ ಧರ್ಮಪ್ಪನವರ ಭಾಷಣವನ್ನ ಉಲ್ಲೇಖಿಸಿದ ನೂತನ ಡಿಸಿ ಹಿಂದಿನ ಡಿಸಿಯ ಕಾರ್ಯವೈಖರಿಯನ್ನ ಅನುಸರಿಸಿ ಇಲಾಖೆಗಳ ನಡುವೆ ಇಟ್ಟಿಗೆಯ ರೀತಿಯಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಹೆಗಡೆ ಸಾಹೇಬರು  ಕೆಲಸವನ್ನ ಮಾಡಿದ್ದರು ಅದನ್ನೇ ಮುಂದಿನ ಡಿಸಿ ಅನುಸರಿಸಲಿ ಎಂದು ಆಶಿಸಿದ್ದನ್ನ ಉಲ್ಲೇಖೆಸಿ ಮಾತನಾಡಿದ ಕವಲಕಟ್ಟಿಯವರು, ಜಿಲ್ಲೆಗೆ ನೂತನ ಡಿಸಿ ಆಗಿ ಬಂದಿರುವ ನಾನು ಇಟ್ಟಿಗೆ ಬೇಡ ಕಳಸವಿಡುವಂತಹ ರೀತಿಯಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವೆ ಎಂದು ಹಾಸ್ಯಭರಿತ ಭಾಷಣ ಮಾಡಿದರು. 

ನಿರ್ಗಮಿತ ಡಿಸಿ ಗುರುದತ್ತ ಹೆಗಡೆ ಮಾತನಾಡಿ, ಸೆಕ್ಷನ್ 75 ಅಡಿಯಲ್ಲಿ 7000 ಎಕರೆ ಅರಣ್ಯ ಭೂಮಿ ಜಾಗ ಮತ್ತು ಶರಾವತಿ ಸಂತ್ರಸ್ತರಿಗೆ 9100 ಎಕರೆ ವರದಿ ತಯಾರಿಗೆ ಅಂತಿಮ ಹಂತದಲ್ಲಿದೆ. 6-7 ಇಲಾಖೆಯಲ್ಲಿ ಕೆಲಸ ಮಾಡಿರುವೆ  ಶಿವಮೊಗ್ಗದಲ್ಲಿ ಇರುವ ಅರಣ್ಯ ಅಧಿಕಾರಿಗಳ ತರಹ ಅತ್ಯುತ್ತಮ ಅರಣ್ಯ ಇಲಾಖೆ ಅಧಿಕಾರಿಗಳಿದ್ದಾರೆ ಎಂದರು.

ಕೆಲಸ ಜಿಲ್ಲೆಗಳಲ್ಲಿ ಎಸ್ಪಿಗಳು ಮಾತನಾಡುತ್ತಾರೆ. ಆದರೆ ಕೆಲಸ ಮಾಡೊಲ್ಲ. ಆದರೆ ಮಿಥುನ್ ಕುಮಾರ್ ಅವರ ಕಾರ್ಯ ಕ್ಷಮತೆಯನ್ನ ನೆನಪಿಸಿಕೊಳ್ಳವೇಕು. ರೌಡಿ, ಡ್ರಗ್ಸ್ ವಿಚಾರದಲ್ಲಿ ಅವರು ಕ್ರಮ ಕೈಗೊಂಡಿರುವುದನ್ನ ಮೆಚ್ಚಲೆಬೇಕಿದೆ.  ವರ್ಗಾವಣೆ ಆಗುತ್ತದೆ ಎಂದು ಮೊದಲೆ ಇಬ್ವರಿಗೂ ಗೊತ್ತಿತ್ತು. ಇಬ್ಬರೂ ಹೊಸವರ್ಷವನ್ನ ಬೆಂಗಳೂರಿನಲ್ಲಿ ಆಚರಿಸೋಣ ಎಂದುಕೊಂಡಿದ್ವಿ. ಹಾಗೆ ಆಯಿತು. ಎಲ್ಲಾ ಇಲಾಖೆಯ  ಅಧಿಕಾರಿಗಳನ್ನ ಈ ವೇಳೆ ಹೊಗಳುವುದನ್ನ ಅವರು ಮರೆಯಲಿಲ್ಲ.

ಎಲ್ಲರೂ ಹೇಳುವಂತೆ ನಾನು ಶಿವಮೊಗ್ಗದಲ್ಲಿ ಒತ್ತಡದಲ್ಲಿ ಕೆಲಸ ಮಾಡಲೇ ಇಲ್ಲ. ಮಿಥುನ್ ಕುಮಾರ್ ವರ್ಗವಾದಾಗ ಯಾರಪ್ಪ ಎಸ್ಪಿ ಶಿವಮೊಗ್ಗಕ್ಕೆ ಬರ್ತಾರೆ ಎಂದು ಕುತೂಹಲದಲ್ಲಿದ್ದೆ.  ನಿಖಿಲ್ ವರ್ಗವಾದಾಗ ಒಳ್ಳೆ ಅಧಿಕಾರಿ ಎಂದುಕೊಂಡೆ, ಕವಲಕಟ್ಟಿಯವರು  ನಾನು ಧಾರವಾಡ ಡಿಸಿ ಆಗಿದ್ದಾಗ ಅವರು ಕಾರವಾರದ ಡಿಸಿ ಆಗಿದ್ದರು. ಉತ್ತಮ ಆಡಳಿತ ನೀಡಿದ್ದಾರೆ. ನಮ್ಮ ತಂದೆ ತಾಯಿ ಸಾಗರದ ವರದಾಶ್ರಾಮದ ಅನುನಾಯಿಗಳಾಗಿದ್ದರು. ದತ್ತಜಯಂತಿ ದಿನ ನಾನು ಹುಟ್ಟಿರೋದು. ಹಾಗಾಗಿ ಗುರುದತ್ತ ಹೆಗಡೆ ಎಂದು ಹೆಸರು ಬಂದಿದೆ ಎಂದರು.

The farewell speech is louder than the welcome speech

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close