ಜ.24 ರಿಂದ ಫ್ರೀಡಂಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ- Flower show at Freedom Park from Jan. 24

 SUDDILIVE || SHIVAMOGGA

ಜ.24 ರಿಂದ ಫ್ರೀಡಂಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ-  Flower show at Freedom Park from Jan. 24  

Flower, show


ಜಿಲ್ಲಾ ಪಂಚಾಯತ್, ತೋಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜ.24 ರಿಂದ 27 ರವರೆಗೆ ಫ್ರೀಡಂ ಪಾರ್ಕ್ ನಲ್ಲಿ ಪುಷ್ಪ ಸಿರಿ 63 ನೇ ಫಲಪುಷ್ಪ ಪ್ರದರ್ಶನ ಮಲೆನಾಡು ಕರಕುಶಲ ಉತ್ಸವ ಸಿರಿಧಾನ್ಯ ಮೇಳ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಿಪಂ ಸಿಇಒಹೇಮಂತ್ ಕುಮಾರ್, ಈ ಬಾರಿ ಜೋಗ ಜಲಪಾತ, 16 ಅಡಿಯ ಎತ್ತರದ ಕೋಟೆ ಹಾಗೂ ಶಿವಪ್ಪ ನಾಯಕ ಪ್ರತಿಮೆ, 15 ಅಡಿ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ 60 ಅಡಿ ಅಗಲ 22 ಅಡಿ ಎತ್ತರದ ಜೋಗವನ್ನ ನಿರ್ಮಿಸಲಾಗುವುದು ಎಂದರು. 

I Love Shivamogga ಸೆಲ್ಫಿ ಪಾಯಿಂಟ್,  ಕುಬ್ಜಗಿಡಗಳ ಪ್ರದರ್ಶನ ನಡೆಯಲಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಂಜೀವಿನಿ ಯೋಜನೆಯಡಿ ಸ್ವಸಹಾಯ ಗುಂಪಿನ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ ಎಂದರು.

ಮೇಳದ ವೈಶಿಷ್ಟತೆಗಳು- ಶಿವಮೊಗ್ಗದ ಮೇಳದ ಮಳಿಗೆಗಳಲ್ಲಿ ರಾಜ್ಯ ಹೊರ ರಾಜ್ಯ ವಿವಿಧ ಜಿಲ್ಲೆಯ ಗ್ರಾಮೀಣ ಪ್ರದೇಶದ ಸ್ವಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಾದ ಮಣ್ಣಿನ ಅಲಂಕಾರ ಉತ್ಪನ್ನಗಳು, ಮ್ಯಾಕ್ರನ್ ಉತ್ಪನ್ನಗಳು, ಹಸೆ ಚಿತ್ತಾರ, ಭತ್ತದ ತೋರಣ, ಈಚಲು ಚಾಪೆ, ಮಣ್ಣಿನ ಆಭರಣ, ಮರದ ಕೆತ್ತೆನೆ ಅಕ್ಕ ಕೆಫೆ ಸದಸ್ಯರಿಂದ ಮತ್ತು ಸಹಾಯ ಗುಂಪಿನ ಸದಸ್ಯರಿಂದ ಮತ್ತು ಇತರೆ ಸ್ವಸಹಾಯ ಸಂಘದಿಂದ ತಯಾರಿಯಾದ ಉತ್ಪನ್ನಗಳ ಪ್ರದರ್ಶನ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಎಂದರು. 


ಸಿರಿಧಾನ್ಯಗಳ ಮೇಳ ನಡೆಯಲಿದೆ. 70 ಸಾವಿರ ಜನ ಕಳೆದ ಬಾರಿ ವಿಸಿಟ್ ಮಾಡಿದ್ದರು. ಪಾರ್ಕಿಂಗ್ ವ್ಯವಸ್ಥೆಯ ಹಿನ್ನಲೆಯಲ್ಲಿ ಬೇಟಿ ನೀಡಿದ್ದರು. 8495876466 ಲತಾರನ್ನ ಸ್ಪರ್ಧೆಗಾಗಿ ಸಂಪರ್ಕಿಸಬಹುದಾಗಿದೆ ಜ.23 ರ ಒಳಗೆ ಹೆಸರು ನೋಂದಣಿಕೆ ಮಾಡಿಕೊಳ್ಳಬೇಕಿದೆ. ಈ ಬಾರಿ ಪ್ರವೇಶ ಶುಲ್ಕ ವಿಧಿಸುವ ಯೋಜನೆಯಿದ್ದು 10 ರೂ ಪ್ರವೇಶ ಶುಲ್ಕ ನಿಗದಿಪಡಿಸುವ ಸಾಧ್ಯತೆಯಿದೆ ಎಂದರು. ಇದೇವೇಳೆ ಪೋಸ್ಟರ್ ಸಹ ಬಿಡುಗಡೆ ಮಾಡಲಾಯಿತು. 

ಶನಿವಾರ ನಡೆಯುವ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ, ಶಾಸಕರಾದ ಚೆನ್ನಬಸಪ್ಪ, ಬಿ.ಕೆ ಸಂಗಮೇಶ್ವರ್, ಬಿ.ಕೆ. ಗೋಪಾಲಕೃಷ್ಣ ಬೇಳೂರು ಸಣ್ಣ ತೋಟಗಾರಿಕೆ ಇಲಾಖೆಯ ಎಸ್ ಎಸ್ ಮಲ್ಲಿಕಾರ್ಜುನ್, ಸಂಸದರು, ಶಾಸಕರಾದ ಆರಗ ಜ್ಞಾನೇಂದ್ರ, ಶಾರದಾ ಪೂರ್ಯನಾಯ್ಕ, ಬಿ.ವೈ ವಿಜೇಂದ್ರ ಮೊದಲಾದವರು ಆಗಮಿಸುವ ನಿರೀಕ್ಷೆಯಿದೆ ಎಂದರು. 

ವಿಬಿಜಿ ರಾಮ್ ಜಿ ಮುಂದಿನ ಆರ್ಥಿಕ ವರ್ಷದಿಂದ ಆರಂಭ

ಮನರೇಗಾದಲ್ಲಿ ಮಲೆನಾಡಿನಲ್ಲಿ ಮಹಿಳೆಯರ ಭಾಗಿತ್ವ ಹೆಚ್ಚಿತ್ತು. ಆಕ್ಟಿವ್ ಜಾಬ್ ಕಾರ್ಡ್ 1.6 ಲಕ್ಷ ಜನರಿದ್ದಾರೆ. ಬಳಸಿಕೊಳ್ಳುವುದು ಕಡಿಮೆಯಿದೆ. ಮುಂದಿನ ಆರ್ಥಿಕ ವರ್ಷದಿಂದ ವಿಬಿಜಿ ರಾಮ್ ಜಿ ಯೋಜನೆ ಜಾರಿಯಾಗಲಿದೆ.  ಮಾರ್ಚ್ ಗೆ 162 ಗ್ರಾಪಂ ಅವಧಿ ಮುಕ್ತಾಯವಾಗಲಿದೆ. ಆಡಳಿತಾಧಿಕಾರಿ ನೇಮಕಕ್ಕೆ ತಯಾರಿ ನಡೆಯುತ್ತಿದೆ. ಜಿಪಂ ನಲ್ಲಿ ಹಣ ಇರಲ್ಲ ಗ್ರಾಪಂಗೆ ಇದೆ. ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹಿಸುತ್ತವೆ. ಚರಂಡಿ, ನೀರು ರಸ್ತೆ ನಿರ್ಮಾಣಕ್ಕೆ ಗ್ರಾಮೀಣ ಭಾಗದಲ್ಲಿ ಸಹಾಯವಾಗುತ್ತೆ.  ಎಂದರು. 

Flower show at Freedom Park from Jan. 24 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close