ಮಾತೃ ವಾತ್ಸಲ್ಯ ಆಸ್ಪತ್ರೆ ವತಿಯಿಂದ “ಉಚಿತ ಮಾತೃ ಗರ್ಭ ಸಂಸ್ಕಾರ" ಕಾರ್ಯಕ್ರಮ-"Free Matru Garbh Sanskar" program by Matru Vatsalya Hospital

SUDDILIVE || SHIVAMOGGA

ಮಾತೃ ವಾತ್ಸಲ್ಯ ಆಸ್ಪತ್ರೆ ವತಿಯಿಂದ “ಉಚಿತ ಮಾತೃ ಗರ್ಭ ಸಂಸ್ಕಾರ" ಕಾರ್ಯಕ್ರಮ-"Free Matru Garbh Sanskar" program by Matru Vatsalya Hospital    

ಮಾತೃ ವಾತ್ಸಲ್ಯ ಆಸ್ಪತ್ರೆಯ ವತಿಯಿಂದ ದಿನಾಂಕ 19-01-2026ನೇ ಸೋಮವಾರ ಮಧ್ಯಾಹ್ನ 12-00ರಿಂದ 1-00ರವರೆಗೆ ನಮ್ಮ ಆಸ್ಪತ್ರೆಯಲ್ಲಿ “ಉಚಿತ ಮಾತೃ ಗರ್ಭ ಸಂಸ್ಕಾರ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದ ಪೂರ್ಯನಾಯ್ಕ್, ಶಾಸಕರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಹಾಗೂ ಶ್ರೀಮತಿ ಬಲ್ಕಿಶ್ ಬಾನು, ಶಾಸಕರು, ವಿಧಾನ ಪರಿಷತ್, ಭದ್ರಾವತಿ ಕ್ಷೇತ್ರ, ಇವರುಗಳು ಅತಿಥಿಗಳಾಗಿ ಆಗಮಿಸಿ, ಉತ್ತಮ ಸಲಹೆಗಳನ್ನು ನೀಡಿದರು.

ಮಾತೃ ವಾತ್ಸಲ್ಯದ ವೈದ್ಯರುಗಳು ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನದ ಬಗ್ಗೆ ವಿಶೇಷ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಡಾ| ಪೃಥ್ವಿ ಬಿ. ಸಿ., ನಿರ್ದೇಶಕರು, , ಮಾತೃ ವಾತ್ಸಲ್ಯ ಆಸ್ಪತ್ರೆ, ಹಾಗೂ ಸ್ತ್ರೀರೋಗ ತಜ್ಞರುಗಳಾದ ಡಾ. ಗೀತಾ ರವಿ, ಡಾ. ಅಮಿತಾ ಹೆಗ್ಡೆ, ಡಾ. ನಾಗಮಣಿ ಎಂ. ಸಿ., ಮತ್ತು ಮಕ್ಕಳ ತಜ್ಞರಾದ ಡಾ.ಶ್ವೇತಾ, ಡಾ. ನಿತಿನ್ ಇವರುಗಳು ಉಪಸ್ಥಿತರಿದ್ದರು.

ಪ್ರತಿ ತಿಂಗಳ ಮೂರನೇ ಸೋಮವಾರ ಉಚಿತ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಆಸಕ್ತರು ನೋಂದಾಯಿಸಿಕೊಂಡು ಸೇವೆ ಪಡೆಯಬಹುದಾಗಿದೆ ಎಂದು ಮಾತೃವಾತ್ಸಲ್ಯ ಆಸ್ಪತ್ರೆಯ ನಿರ್ದೇಶಕರಾದ ಡಾ. ಪೃಥ್ವಿ ಬಿ. ಸಿ. ಕೋರಿದ್ದಾರೆ. 

"Free Matri Garbh Sanskar" program by Matru Vatsalya Hospital 

.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close