ನಾಪತ್ತೆಯಾಗಿದ್ದ ಮೂವರು ಮಕ್ಕಳಪ್ರಕರಣ ಸುಖಾಂತ್ಯ- Happy ending to the case of three missing children

 SUDDILIVE || SHIVAMOGGA

ನಾಪತ್ತೆಯಾಗಿದ್ದ ಮೂವರು ಮಕ್ಕಳಪ್ರಕರಣ ಸುಖಾಂತ್ಯ-  Happy ending to the case of three missing children 

Happy, ending


ಶಿಕಾರಿಪುರದಿಂದ ನಾಪತ್ತೆಯಾಗಿದ್ದ ಮೂವರು ಶಾಲಾ ಬಾಲಾಕರು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.

ಭದ್ರಾಪುರ ಹತ್ತಿರ ಇರುವ ಶ್ರೀಧರ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶಿಕಾರಿಪುರ ತಾಲೂಕು, ಪುನೇದಹಳ್ಳಿ ವಾಸಿ ಹೇಮರಾಜ್ ಎಂಬುವವರ ಮಕ್ಕಳಾದ 13 ವರ್ಷದ ಲಿಖಿತ್ ಹಾಗೂ 12 ವರ್ಷದ ಪ್ರಥಮ್ ಎಂಬ ಇಬ್ಬರು ಬಾಲಕರು ಹಾಗೂ ಪುನೇದಹಳ್ಳಿ ವಾಸಿ ಪೆದ್ದಪ್ಪ ಎಂಬುವವರ ಮಗ ಅಂಬಾರಗೊಪ್ಪ ಸರ್ಕಾರಿಶಾಲೆಯಲ್ಲಿ 09ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದೀಪ್ ಎಂಬ 15 ವರ್ಷದ ಜ 21 ರಂದು ರಂದು ಬೆಳಿಗ್ಗೆ 09.00 ಗಂಟೆಗೆ ಈ ಮೂರು ಬಾಲಕರು ಶಾಲೆಗೆ ಹೋಗುತ್ತೇವೆಂದು ಮನೆಯಿಂದ ಹೋಗಿದ್ದು ನಾಪತ್ತೆಯಾಗಿದ್ದರು.

ಮಾಹಿತಿ ಪ್ರಕಾರ ಈ ಮೂವರು ಮಕ್ಕಳು ಶಿಕಾರಿಪುರದಲ್ಲಿ ಆರಂಭಗೊಂಡಿರುವ ಹೋರಿಹಬ್ಬವನ್ನು ನೋಡಲು ಹೋದಾಗ ಸಮಯ ಹೆಚ್ಚಾದ ಪರಿಣಾಮ ಪೋಷಕರಿಗೆ ಹೆದರಿ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ. 

ಆದರೆ ಶಿವಮೊಗ್ಗಕ್ಕೆ ಬಂದ ಮಕ್ಕಳು ಮನೆಗೆ ಕರೆ ಮಾಡಿ ದ ನಂತರ ಪೋಷಕರು ದೊಡ್ಡಪೇಟೆ ಪೊಲೀಸರಿಗೆ ತಿಳಿಸಿದಾಗ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಬಾಲಕರು ಪತ್ತೆಯಾಗಿದ್ದಾರೆ. 

Happy ending to the case of three missing children

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close