SUDDILIVE || SHIVAMOGGA
ದ್ವೇಷ ಭಾಷಣ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳಲ್ಲ, ನಾಳೆ ಸಿದ್ದರಾಮಯ್ಯನವರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ-ಹೆಚ್ ಕೆ ಪಾಟೀಲ್-Hate speech does not take away freedom of expression under the Constitution, Siddaramaiah will witness a historic moment tomorrow - H K Patil
ದೇವರಾಜ್ ಅರಸು ಅವರ ದಾಖಲೆಗಳನ್ನ ಮುರಿಯುವ ಮೂಲಕ ಸಿಎಂ ಸಿದ್ದರಾಮಯ್ಯ ನಾಳೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವುದಾಗಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು.
ಅವರು ನಗರದ ಬೆಕ್ಕಿನ ಕಲ್ಮಠದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಶರಣ ಸಾಹಿತ್ಯ ಸಮ್ನೇಳನದಲ್ಲಿ ಭ ಭಾಗಿಯಾಗಿ ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಬಡತನವನ್ನ ನಿರ್ಮೂಲನೆ ಮಾಡಲು ವರ್ಷಕ್ಕೆ 60 ಸಾವಿರ ಕೋಟಿಯ ಗ್ಯಾರೆಂಟಿ ಯೋಜನೆ ನಿಡಿದರು.
ಶಕ್ತಿ, ಯುವ ನಿಧಿ ಗೃಹ ಲಕ್ಷ್ಮೀ, ಗೃಹಜ್ಯೋತಿ ಮೂಲಕ ಬಡತನ ನಿರ್ಮೂಲನೆ ಮಾಡಲು ಸಿದ್ದರಾಮಯ್ಯನವರು ಗಮನಾರ್ಹ ಆಡಳಿತ ನೀಡಿದ್ದಾರೆ. ಕೇಂದ್ರ ಸರ್ಕಾರ ದ ಅಸಹಯಕಾರದ ನಡುವೆಯೂ ಆರ್ಥಿಕ ವ್ಯವಸ್ಥೆಯನ್ನ ಸಿದ್ದರಾಮಯ್ಯ ನಾಳೆ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದಾರೆ ಎಂದರು.
ದ್ವೇಷ ಭಾಷಣದ ಬಗ್ಗೆ ವಿರೋಧ ಯಾಕೆ ಬೇಕು. ದ್ವೇಷ ಭಾಷಣ ಸಂವಿಧಾನದಲ್ಲಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಕಿತ್ತುಕೊಳ್ಳಲ್ಲ. ಆರೋಗ್ಯ ಕರ ಸಮಾಜ ನಿರ್ಮಾಣಕ್ಕೆ ದ್ವೇಷ ಭಾಷಣಕ್ಕೆ ಬ್ರೇಕ್ ಹಾಕಬೇಕಿದೆ. ಬಿಜೆಪಿ ಯಾಕೆ ಭಯಭೀತಿಯಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮರ್ಯಾದೆ ಹತ್ಯೆಗೆ ಇವ ನಮ್ಮವ ಇವ ನಮ್ಮವ ಕಾನೂನು ತರುವ ನಿರೀಕ್ಷೆಯಿದೆ. ಇದಕ್ಕೆ ಕಠಿಣ ಕ್ರಮ ಜಾರಿಯಾಗಬೇಕು. ಬಸವಣ್ಣನ ನಾಡಿನವರಾದ ನಾವು ಅಂತರ್ಜಾತಿ ವಿವಾಹ ಮಾಡಿದಾಗ ಮರ್ಯಾದೆ ಹತ್ಯಯಾದರೆ ತಲೆತಗ್ಗಿಸುವಂತಾಗಿದೆ. ಇದಕ್ಕೆ ಬ್ರೇಕ್ ಹಾಕಬೇಕು. ಬಸವಣ್ಣನನ್ನ ಸಾಂಸ್ಕೃತಿಕ ನಾಯಕ ಎಂದು ಮಾಡಿಕೊಂಡಿದ್ದೇವೆ. ಹಾಗಾಗಿ ರಚನಾತ್ಮಕ ಕಾನೂನು ತರಲಾಗುತ್ತಿದೆ ಎಂದರು.
ಬಳ್ಳಾರಿಯಿಂದ ಬೆಂಗಳೂರಿನ ವರೆಗೆ ಪಾದಯಾತ್ರೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಾದಯಾತ್ರೆ ನಡೆಸುವ ಬಗ್ಗೆ ಸರ್ಕಾರ ಗಮನ ಹರಿಸಲಿದೆ. ಸಿಎಂ ನಿರ್ಧರಿಸಲಿದ್ದಾರೆ. ಕೋಗಿಲು ಬಡಾವಣೆಯಲ್ಲಿ ಬಿಜೆಪಿ ರಾಜಕಾರಣ ನಡೆಸಲಿದೆ ಎಂದರು.
Hate speech does not take away freedom of expression under the Constitution

