ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ ಪ್ರಕರಣ, ನ್ಯಾಯಾಲಯದ ತೀರ್ಪು- Court verdict in dispute between brothers over land irrigation

SUDDILIVE || SHIVAMOGGA

ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ ಪ್ರಕರಣ, ನ್ಯಾಯಾಲಯದ ತೀರ್ಪು-Court verdict in dispute between brothers over land irrigation

Court, Verdict

ಜಮೀನಿಗೆ ನೀರು ಹಾಯಿಸುವ ವಿಷಯದಲ್ಲಿ ಸಹೋದನನ್ನ ಕಟ್ಟಿಹಾಕಿ ಮಚ್ಚಿನಲ್ಲಿ ಹಲ್ಲೆ ನಡೆಸಿದ ಪತಿ ಪತ್ನಿಯರಿಗೆ ನ್ಯಾಯಾಲಯ 3 ವರ್ಷ ಸಜೆ, ಮತ್ತು ತಲಾ 40 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ. 

ದಿನಾಂಕ: 30-11-2021 ರಂದು  ಬಸವರಾಜ್  ರವರು ಶಿವಮೊಗ್ಗದಿಂದ ಭದ್ರಾವತಿ ಹಿರಿಯೂರು ಗ್ರಾಮದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಬಂದಾಗ ,ರಾತ್ರಿ 10.00 ಗಂಟೆಯ ವೇಳೆಗೆ ಆರೋಪಿತರುಗಳು ಜಮೀನಿನಲ್ಲಿ ಬೆಳೆದ ಭತ್ತವನ್ನು ಮೆಷಿನ್ ಮುಖಾಂತರ ಕಟಾವು ಮಾಡಿಸುತ್ತಿದ್ದು, ದೂರುದಾರರಿಗೂ ಮತ್ತು ಆರೋಪಿತರಿಗೂ ಇರುವ ಜಮೀನಿನ ವ್ಯಾಜ್ಯದಲ್ಲಿ ಈ ಹಿಂದೆ ಹಲವು ಗಲಾಟೆಗಳು ನಡೆದಿದ್ದು, ಆರೋಪಿತನಾದ ನಾಗರಾಜ್ ಈತನು ಬಸವರಾಜ್ ರವರಿಗೆ ನೀನು ಪ್ರತಿ ಬಾರಿಯೂ ಜಮೀನಿನ ಕೆಲಸಕ್ಕೆ ತೊಂದರೆ ಮಾಡುತ್ತಾ ನಮಗೆ ಸಮಸ್ಯೆಯಾಗಿದ್ದೀಯಾ? ನಿನ್ನನ್ನು ಬದುಕಲು ಬಿಡಬಾರದು, ನೀನು ಸತ್ತರೆ ನಾವುಗಳು ನೆಮ್ಮದಿಯಾಗಿ ಇರಬಹುದು ಎಂದು , ಅವ್ಯಾಚ್ಯ ಶಬ್ದಗಳಿಂದ ಬೈದು ಇವತ್ತು ಬದುಕಲು ಬಿಡಬಾರದು ಎಂದು ಹೇಳಿ ದೊಣ್ಣೆಯಿಂದ ಮೈ ಕೈಗೆ ಬೆನ್ನಿಗೆ ಹೊಡೆದಿದ್ದು, ಚಿದಾನಂದ ಈತನು ದೊಣ್ಣೆಯಿಂದ ಬಸವರಾಜ್ ರವರ ತಲೆಗೆ ಹೊಡಿದ್ದು ತಲೆಯಿಂದ ರಕ್ತ ಬಂದಿರುತ್ತದೆ. 

ನಂತರ ಅಲ್ಲೇ ಜಮೀನಿನ ಬಳಿಯಲ್ಲಿ ಇಟ್ಟುಕೊಂಡಿದ್ದ ಹಗ್ಗವನ್ನು ತಂದು ಕೈಗೆ ಕಟ್ಟಿ ಅಡಿಕೆ ಮರಕ್ಕೆ ಕಟ್ಟಿ ಹಾಕಿರುತ್ತಾರೆ. ನಂತರ ಆರೋಪಿಯಾದ ಶೀಲಾ ತಂದುಕೊಟ್ಟ ಮಚ್ಚಿನಿಂದ ಸೂಳೆಮಗನೆ ಸಾಯಿ ನೀನು ಎನ್ನುತ್ತಾ ಮಚ್ಚಿನಿಂದ ತಲೆಗೆ ಮತ್ತು ಮುಖಕ್ಕೆ ಹೊಡೆದು ತೀವ್ರ ಸ್ವರೂಪದ ಗಾಯಗೊಳಿಸಿ ರಕ್ತ ಬಂದಿದ್ದು, ಬಸವರಾಜ್ ರವರಿಗೆ ಇವತ್ತು ಬದುಕಿಕೊಂಡೆ ಇನ್ನೊಮ್ಮೆ ನಮ್ಮ ತಂಟೆಗೆ ಹಾಗೂ ನಮ್ಮ ಜಮೀನಿನ ತಂಟೆಗೆ ಬಂದರೆ ನಮ್ಮ ಅಣ್ಣ ಎಂಬುವುದನ್ನು ನೋಡದೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವ ಬೆದರಿಕೆ ಹಾಕಿದ್ದು, ಸದರಿಯವರ ವಿರುದ್ಧ ನೀಡಿದ ದೂರಿನ ಮೇರೆಗೆ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಡುವೈಎಸ್ಪಿ ಶ್ರೀಮತಿ ಶಿಲ್ಪಾ ನಾಯನೇಗಲಿ ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದೆ. 

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ:05-01-2026 ರಂದು  ಆರೋಪಿತರಾದ 1 ) ನಾಗರಾಜ್ ಹೆಚ್, 48 ವರ್ಷ ವಾಸ ದುರ್ಗಮ್ಮ ಬೀದಿ, ಹಿರಿಯೂರು ಭದ್ರಾವತಿ,  ಮತ್ತು 2 ) ಶೀಲಾ, 32 ವರ್ಷ, ವಾಸ ವಾಸ ದುರ್ಗಮ್ಮ ಬೀದಿ, ಹಿರಿಯೂರು ಭದ್ರಾವತಿ, ಶಿವಮೊಗ್ಗ. ಇವರಿಗೆ ಕಲಂ 326, 307, 504, 506 ಸಹಿತ 34 ಐಪಿಸಿ ಕಾಯಿದೆಗಳಿಗೆ 3 ವರ್ಷ ಕಠಿಣ ಸಜೆ ಮತ್ತು ತಲಾ 40,000 ರೂ ದಂಡ ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸಜೆಯನ್ನು ಅನುಭವಿಸತಕ್ಕದ್ದು ಎಂದು ಆದೇಶಿಸಿರುತ್ತದೆ.

Court verdict in dispute between brothers over land irrigation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close