ಠಾಣೆಯಲ್ಲೇ ಮುಖ್ಯ ಪೇದೆ ಆತ್ಮಹತ್ಯೆ-Head constable commits suicide at police station

SHIVAMOGGA || SHIVAMOGGA

ಠಾಣೆಯಲ್ಲೇ ಮುಖ್ಯ ಪೇದೆ ಆತ್ಮಹತ್ಯೆ-Head constable commits suicide at police station  

Head, Constable


ಟ್ರಾಫಿಕ್ ಪೊಲೀಸ್ ಠಾಣೆಯಲ್ಲೇ ಮುಖ್ಯ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಜಕ್ರಿಯಾ(೫೫) ಎಂಬುವರು ನೇಣು ಹಾಕಿಕೊಂಡ ಮುಖ್ಯ ಪೇದೆಯಾಗಿದ್ದಾರೆ. 

ಕಳೆದ ರಾತ್ರಿ ಠಾಣೆಯಲ್ಲಿ ನೇಣು  ಹಾಕಿಕೊಂಡ ಜಕ್ರಿಯಾ, ಇತ್ತೀಚೆಗಷ್ಟೇ ಎಎಸ್ಐ ಆಗಿ ಬಡ್ತಿ ಹೊಂದಿದ್ದರು. ಬಡ್ತಿ ನಿರಾಕರಿಸಿ ಮುಖ್ಯ ಪೇದೆ ಹುದ್ದೆಯಲ್ಲೇ ಮುಂದುವರಿದಿದ್ದರು. ಕಳೆದ ನಾಲ್ಕೈದು ವರ್ಷದಿಂದ ಪಶ್ಚಿಮ ಟ್ರಾಫಿಕ್ ಠಾಣೆಯಲ್ಲಿ  ಜಕ್ರಿಯಾ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಎಸ್ಪಿ ನಿಖಿಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿನೀಡಿ ಪರಿಶೀಲಿಸಿದ್ದಾರೆ. 

ಮಂಡ್ಯದಲ್ಲೂ ಸಹ ರಮೇಶ್ ಎಂಬ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರ ಈ ಆತ್ಮಹತ್ತೆ ಆತಂಕ ಮೂಡಿಸಿದೆ. ಇಲಾಖೆಯಲ್ಲಿ ಯಾವುದೂ ಸರಿಯಿಲ್ಲವೇನೋ ಎಂಬ ಅನುಮಾನವನ್ನೂ ಹುಟ್ಟಿಸಿದೆ. 

Head constable commits suicide at police station

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close