ಮೆಗ್ಗಾನ್ ಗೆ ನೂತನ ಡಿಸಿ ಭೇಟಿ ಪರಿಶೀಲನೆ-New DC visits Megan for inspection

 SUDDILIVE || SHIVAMOGGA

ಮೆಗ್ಗಾನ್ ಗೆ ನೂತನ ಡಿಸಿ ಭೇಟಿ ಪರಿಶೀಲನೆ-New DC visits Megan for inspection    

Dc, Visit


ಶಿವಮೊಗ್ಗದ ಮೆಗ್ಗಾನ್ ಗೆ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಕಟ್ಟಿ ದಿಡೀರ್ ಭೇಟಿ ನೀಡಿ ಮೆಗ್ಗಾನ್ ನ ಹಲವು ವಿಭಾಗಗಳಿಗೆ ಭೇಟಿ ನೀಡಿದ್ದಾರೆ. 

ಮೊದಲಿಗೆ ನವಜಾತ ಶಿಶುವಿನ ವಾರ್ಡ್ ಗೆ ಭೇಟಿ ನೀಡಿದ ಡಿಸಿಗೆ ಕೆಲವು ಉಪಕರಣಗಳ ಅಗತ್ಯತೆ ಕಂಡುಬಂದಿದ್ದು ಈ ಬಗ್ಗೆ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. ಇಲ್ಲಿ ಸಾರ್ವಜನಿಕರನ್ನೂ ಮಾತನಾಡಿಸಿದ ಡಿಸಿಗೆ ಸಾರ್ವಜನಿಕರು ಗಂಜಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಡಿಸಿ ಪ್ರಭುಲಿಂಗ ಕವಲಿಕಟ್ಟ ಅವರು ಸಹ ಸಾರ್ವಜನಿಕರ ಬೇಡಿಕೆಗೆ ಸಮ್ಮತಿಸಿದಂತೆ ಕಂಡು ಬಂದಿದೆ. 

ಸಂಜೆ ಮೇಲೆ ಮೆಗ್ಗಾನ್ ಗೆ ಭೇಟಿ ನೀಡಿದ ಡಿಸಿ ಅವರು ತುರ್ತು ಚಿಕಿತ್ಸಾ ಘಟಕ, ಮಹಿಳ ಮತ್ತು ಪುರುಷರ ವಾರ್ಡ್ ವಿಭಾಗ, ಮೆಗ್ಗಾನ್ ಅಡುಗೆ ಮನೆ, ಹೆರಿಗೆ ವಾರ್ಡ್ ಗೆ ಭೇಟಿ ನೀಡಿದ್ದು ತಪಾಸಣೆ ನಡಸಿದ್ದಾರೆ. ನೂತನ ಡಿಸಿ ಅವರ ಭೇಟಿ ಸಂಚಲನ ಮೂಡಿಸಿದೆ. 

ಮೆಗ್ಗಾನ್ ಗೆ ಉಪಲೋಕಾಯುಕ್ತ, ಲೋಕಲ್ ಲೋಕಾಯುಕ್ತರು, ಮಹಿಳಾ ಆಯೋಗದ ಅಧ್ಯಕ್ಷೆ  ನಾಗಲಕ್ಷ್ಮಿ ಚೌಧರಿ, ಹಳೆ ಡಿಸಿ ಗುರುದತ್ತ ಹೆಗಡೆ ಭೇಟಿ ನೀಡಿದರೂ ಸಹ ಸುಧಾರಣ ಗೊಳ್ಳದ ಕೆಲ‌ಸಮಸ್ಯೆಗಳು ನೂತನ ಡಿಸಿ ಕವಲಕಟ್ಟಿಯಿಂದ ಸರಹೋಗ ಬಹುದೆ ಎಂಬ ನಿರೀಕ್ಷೆಯಿಂದಲೇ ಈ ಸುದ್ದಿಯನ್ನ ನೋಡುವಂತಾಗಿದೆ. 

ಮೆಡಿಸಿನ್ ವಿಭಾಗ ಸರಿಹೋಗಬೇಕಿದೆ.  ಹೆರಿಗೆ ವಿಭಾಗದಲ್ಲಿ ಇತ್ತೀಚೆಗೆ ಸಂಘಟನೆಯೊಂದು ಸರಿಪಡಿಸುವಂತೆ ಆಗ್ರಹಿಸಿತ್ತು. ಇದಲ್ಲದೆ ಮೆಗ್ಗಾನ್ ಆಸ್ಪತ್ರೆ ಹಲವು ಸುಧಾರಣೆಯಾಗಬೇಕಿದೆ ಎಂಬುದು ನಿರಂತರ ಆರೋಪವಾಗಿದೆ. ಬದಲಾಗುವ ನಿರೀಕ್ಷೆ ಮಾತ್ರ ಕಾಣದಾಗಿದೆ. 

New DC visits Megan for inspection

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close