ಹಿಂಸೆಯಿಂದ ದೂರ ಇರುವವನೆ ಹಿಂದೂ-ಡಾ.ರವಿಕಿರಣ್-A Hindu is one who abstains from violence - Dr. Ravikiran

 SUDDILIVE || SHIVAMOGGA

ಹಿಂಸೆಯಿಂದ ದೂರ ಇರುವವನೆ ಹಿಂದೂ-ಡಾ.ರವಿಕಿರಣ್-A Hindu is one who abstains from violence - Dr. Ravikiran 

Drravikiran, hindu


ಮಿಳಘಟ್ಟ, ಬುದ್ದನಗರ, ಮಂಜುನಾಥ ಬಡಾವಣೆ ಅಣ್ಣಾನಗರದ ತಿರುವಳ್ಳವರ್ ವಸತಿ (ಬುದ್ದನಗರದಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಪ್ರವೇಶದ್ವಾರ)ದಲ್ಲಿ ಹಿಂದೂ ಸಂಗಮ ನಡೆದಿದೆ.ಇದರ ಅಂಗವಾಗಿ ಅಶೋಕ ವೃತ್ತದ ಸಿಗ್ನಲ್ ನಿಂದ ವೇದಿಕೆ ಕಾರ್ಯಕ್ರಮದ ವರೆಗೆ ಡೊಳ್ಳು ಸಮೇತ ಶೋಭಾಯಾತ್ರೆ ನಡೆದಿದೆ.

ಶೋಭಯಾತ್ರೆಯಲ್ಲಿ ಭಾಗಿಯಾಗಬೇಕಿದ್ದ  ಆರ್ ಎಸ್ ಎಸ್ ದಕ್ಷಿಣ ಪ್ರಾತ್ಯ ಸಹ ಕಾರ್ಯವಾಹಕ್ ಕಲ್ಲಡ್ಕ ಪ್ರಭಾಕರ ಭಟ್ಟರು ಗೈರಾಗಿದ್ದರು. ನಂತರ ನಡೆದ  ವೇದಿಕೆ ಕಾರ್ಯಕ್ರಮದಲ್ಲಿ ಲೊಕೇಶ್ವರ ಕಾಳೆ ಉದ್ಘಾಟಿಸಿದರು. ಶೋಭಾಯಾತ್ರೆ ಇಂದು ಶಿವಮೊಗ್ಗದಲ್ಲಿ ಹಲವೆಡೆ ನಡೆಯಲಿದೆ. ತಿರುವುಳ್ಳವರ್ ವಸತಿಯ ಶೋಭಾತ್ರೆಯಲ್ಲಿ ಶಾಸಕ ಚೆನ್ನಬಸಪ್ಪ ಹೆಜ್ಜೆಯಿಟ್ಟಿದ್ದು ವಿಶೇಷವಾಗಿತ್ತು. 

ಪ್ರಾಸ್ತಾವಿಕ ಭಾಷಣ ಮಾಡಿದ ಡಾ.ರವಿಕಿರಣ್1 ಲಕ್ಷದ 5 ಸಾವಿರ ದೇಶದಲ್ಲಿ ಹಿಂದೂ ಸಂಗಮ ನಡೆದರೆ, ಶಿವಮೊಗ್ಗದಲ್ಲಿ 30 ಕಾರ್ಯಕ್ರಮಗಳು ನಡೆದಿದೆ.  ಅದರಲ್ಲಿ ತಿರುವಳ್ಳವರ್ ವಸತಿ ಕಾರ್ಯಕ್ರಮ ನಡೆದಿದೆ. ರಾಜ್ಯದಲ್ಲಿ 3000 ಹಿಂದೂ ಸಂಗಮ ನಡೆದಿದೆ.  ಹಿಂದೂ ಸಂಸ್ಕೃತಿ ಮತ್ತು ಜಾಗೃತಿ ಹಿನ್ನಲೆ ಯಲ್ಲಿ ನಡೆದಿದೆ. ಯಾವುದೇ ಸನಾಜವನ್ನ ತೆಗಳುವ ದ್ವೇಷದ ಬಗ್ಗೆ ನಡೆಯುತ್ತಿಲ್ಲ ಎಂದರು. 

ಹಿಂದೂತ್ವ ಎಂದರೆ ಕುಂಕುಮ, ಪಂಚೆ, ಸೀರೆ ಉಟ್ಟುಕೊಳ್ಳುವುದೇ ಹಿಂದುತ್ವನಾ ಎಂದರೆ ಹಿಂದುತ್ವದ ಭಾಗ ಅದು, ಪೂಜಾಪದ್ದತಿಯೂ ಇದೆ. ಸರ್ವೇಜ‌ಸುಖನೋ ಭವಂತು ಎನ್ನುವುದೇ ಹಿಂದೂತ್ವ ಎಂದು ಡಾ.ರವಿಕಿರಣ್ ಹೇಳಿದರು‌ 



ಹಿಂಸೆಯಿಂದದೂರು ಇರುವವನೇ ಅಥವಾ ಪಾಪಕರ್ಮಗಳನ್ನ ಮಾಡದೆ ಇರುವುವನನ್ನ ಹಿಂದೂ ಎಂದು ಕರೆಯಬಹುದು. ಹಿಂದೂ ಧರ್ಮದಲ್ಲಿ ಕರ್ತವ್ಯಗಳನ್ನ ಹೇಳಿಕೊಡಲಾಗಿದೆ. 100 ವರ್ಷದ ಹಿಂದೆ ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಜಾತಿ ಸಮಾವೇಶವಿದ್ದಿದ್ದರೆ ಜನ ಇಂದು ತುಂಬಿ ತುಳುಕುತ್ತಿದ್ದರು. ಹಿಂದೂ ಎಂದು ಇದ್ದರೆ ಮಾತ್ರ ಉಳಿವು ಸಾಧ್ಯ ಎಂಬುದನ್ನ ಅರಿಯಬೇಕಿದೆ ಎಂದರು. 

ಮೂರು ತಿಂಗಳ ಹಿಂದೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯಿತು. ಯಾವ ಹಿಂದೂ ಪ್ರತಿರೋಧಿಸಲಿಲ್ಲ. ತಮಿಳುನಾಡಿನಲ್ಲಿ ಹಿಂದೂಧರಗಮವನ್ನೇ ಮುಗಿಸುತ್ತೇನೆ ಎಂದರೂ ಹಿಂದೂ ಸುಮ್ಮನಿದ್ದ. ಇವೆಲ್ಲದರ ಬಗ್ಗೆ ಎಚ್ಚರದಿಂದ ಇರುವುದೇ ಹಿಂದೂ ಸಂಗಮವಾಗಿದೆ. ಜಾತಿ ಹೊಸ್ತಲಿನಿಂದ ಹೊರಗಿರಬೇಕು. ಹೊಸ್ತಿಲಿನಿಂದ ಹಿರಗೆ ಬಂದರೆ ಜಾತಿ ಎಂದರೆ ಹಿಂದೂ ಆಗಬೇಕು. ಇಷ್ಟದೇವತೆ, ಗ್ರಾಮದೇವತೆ, ರಾಷ್ಟ್ರದೇವತೆ ಔಅರತ ಮಾತೆಯಾಗಬೇಕು. ಹಿಂದೂ ಒಂದಾದರೆ ಎಲ್ಲರಿಗೂ ನ್ಯಾಯಸಿಗುತ್ತೆ ಎಂದರು. ಲೋಹೀತಾಶ್ವ ಕೇದಿಗೆರೆ ದಿಕ್ಸೂಚಿ ಭಾಷಣ ಮಾಡಿದರು.

Hindu is one who abstains from violence - Dr. Ravikiran

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close