ಅನುದಾನ ರಹಿತ ಕನ್ನಡ ಶಾಲೆಗಳಿಗೆ ಬಜೆಟ್ನಲ್ಲಿ ಅನುದಾನ ಕೇಳಿದ್ದೇನೆ-ಸಚಿವ ಮಧುಬಂಗಾರಪ್ಪ-I have requested funds in the budget for unaided Kannada schools - Minister Madhubangarappa

SUDDILIVE || SHIVAMOGGA

ಅನುದಾನ ರಹಿತ ಕನ್ನಡ ಶಾಲೆಗಳಿಗೆ ಬಜೆಟ್ನಲ್ಲಿ ಅನುದಾನ ಕೇಳಿದ್ದೇನೆ-ಸಚಿವ ಮಧುಬಂಗಾರಪ್ಪ-I have requested funds in the budget for unaided Kannada schools - Minister Madhubangarappa    

Madhu, bangarappa



1995ರಿಂದ ಹತ್ತು ವರ್ಷಗಳ ಅನುದಾನ ರಹಿತ ಕನ್ನಡ ಶಾಲೆಗಳಿಗೆ ಬಜೆಟ್ನಲ್ಲಿ ಅನುದಾನ ಕೇಳಿದ್ದೇನೆ,. ಫೆಬ್ರವರಿ ಎರಡರಂದು ಬಜೆಟ್ ಪೂರ್ವ ಸಭೆ ಕರೆಯಲಾಗಿದೆ ಎಂದು ಸಚಿವ ಮದು ಬಂಗಾರಪ್ಪ ತಿಳಿಸಿದರು. 

ಮಾಧ್ಯಮಗಳ ಜೊತೆ ಮಾತಬಾಡಿದ ಅವರು, ಕೆಪಿಎಸ್ ಶಾಲೆಗಳಿಗೆ ಆಹಾ ಸಂಗೀತ ಶಿಕ್ಷಕರು ದೈಹಿಕ ಶಿಕ್ಷಕರು ಜೊತೆಗೆ ಕಲಾ ಶಿಕ್ಷಕರನ್ನು ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಕೆಪಿಎಸ್ ಶಾಲೆಗಳಿಗೆ ಶಿವಮೊಗ್ಗದಿಂದಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. 

1995 ರಿಂದ 25 ರವರೆಗೆ 10 ವರ್ಷಗಳ ಕಾಲ ಅನುದಾನ ರಹಿತ ಶಾಲೆಗಳಿಗೆ ಅನುದಾನ ನೀಡಲು ಕೋರಿದ್ದೇನೆ. ಶಿಕ್ಷಣ ಇಲಾಖೆಗೆ ಸಿಗುವ ಅನುದಾನ ಬಜೆಟ್ ಅಧಿವೇಶನದಲ್ಲಿ ಗೊತ್ತಾಗಲಿದೆ. ಬೀದರ್ನಲ್ಲಿ ಸರ್ಕಾರಿ ಶಾಲೆಯ ಒಂದುವರೆ ಕೋಟಿ ಅನುದಾನ ದುರ್ಬಳಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು. 46 ಸಾವಿರ ಶಾಲೆಗಳು ಇದ್ದಾಗ ಚಿಕ್ಕ ಪುಟ್ಟ ಈ ರೀತಿ ಅದು ನಡೆಯುತ್ತದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ತರೀಕೆರೆಯಲ್ಲಿ ದ್ವೇಷ ಭಾಷಣ ಕಾಯ್ದೆ ಆಗದೆ ಪೊಲೀಸರು ನೋಟಿಸ್ ನೀಡಿರುವ ವಿಚಾರದ ಬಗ್ಗೆನೂ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಯಾರೇ ದ್ವೇಷ ಭಾಷಣ ಮಾಡಿದರೆ ಹೇಗೆ ಅನುಮತಿ ಕೊಡಲು ಬರುತ್ತೆ. ಹೊಸ ಕಾನೂನು ಬಂದಿದೆ ಸರ್ಕಾರಿ ಆದೇಶ  ಆಗಿದ್ಯೋ ಇಲ್ಲವೋ ಗೊತ್ತಿಲ್ಲ. ಎಷ್ಟರಮಟ್ಟಿಗೆ ಅನುಷ್ಠಾನ ಮಾಡಲು ಪೊಲೀಸರಿಗೆ ಮಾಹಿತಿಯ ಕೊರತೆ ಆಗಬಹುದು ಎಂದರು. 

ತರೀಕೆರೆ ವಿಷಯ ಆಗಿರುವ ಹಿನ್ನಲೆ ಗಮನಿಸುತ್ತೇನೆ. ಹೊಸ ಕಾನೂನು ರೂಪಿಸಿದ ಹಿನ್ನೆಲೆ ಕಾನೂನು ಯಾವಾಗಲೂ ಮೇಲಾಗಬೇಕು ಕಾನೂನಿನಿಂದ ಹದ್ದುಬಸ್ತಿನಲ್ಲಿ ಇಡಲಾಗುತ್ತದೆ. ಜಿಲ್ಲೆಯ ಕಲಾ ವಸ್ತುಗಳ ಪ್ರದರ್ಶನ ಕುರಿತು ವೆಬ್ಸೈಟ್ ಗೆ ಚಾಲನೆ ನೀಡಲಾಗುತ್ತದೆ. ಕ್ಯೂಆರ್ ಕೋಡ್ ಮೂಲಕ ವೆಬ್ಸೈಟ್ ಗೆ ಹೋಗಬೇಕು. ಒಂದೊಂದು ಲೈನ್ ಒಂದೊಂದು ಸ್ಟೋರಿ ಇರುತ್ತದೆ ಅದನ್ನು ವಿವರಣೆ ಮಾಡುವ ವಿಷಯ ಆಕರ್ಷಣೆಯಾಗುತ್ತದೆ ಎಂದರು. 

ತಲೆಗೆ ಎಷ್ಟೆಲ್ಲಾ ಶ್ರಮ ಇದೆ, ಇನ್ನೂರ ಮೇಲೆ ಮೌಲ್ಯ ಸಿಗುತ್ತದೆ. ಡಿಜಿಟಲ್ ಫ್ಲಾಟ್ ಫಾರ್ಮ್ ಅಲ್ಲಿ ಎಲ್ಲೆಡೆ ಕ್ರಾಪ್ಸ್ ಆಫ್ ಮಲ್ನಾಡ್ ರಾಯಬಾರಿ ಯಾಗಲಿದೆ. ಕಲಾವಿದರ ಕಲೆ ಜೀವನಕ್ಕೂ ಸಹಕಾರಿಯಾಗುತ್ತದೆ. ಶಿವಮೊಗ್ಗ ನಗರದಲ್ಲಿ ಕಲಾ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ. ಕೆಲವು ವಸ್ತುಗಳ ಪ್ರದರ್ಶನ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಂದರೆ ಒಳ್ಳೆಯದಾಗುತ್ತದೆ. ದೇಶ ವಿದೇಶದಲ್ಲಿ ಮಾರಾಟವಾಗುವ ಕಲಾ ವಸ್ತುಗಳ ಪ್ರದರ್ಶನ ಇಲ್ಲಿದೆ. ಶಾಲಾ ಮಕ್ಕಳಿಗೆ ರಜೆಯ ವೇಳೆ ಇಂತಹ ಪ್ರದರ್ಶನಗಳು ನಡೆದರೆ ತುಂಬಾ ಒಳ್ಳೆಯದು ಎಂದರು.  

ಇಂತಹ ಕಲೆಗಳು ಮುಂದಿನ ಪೀಳಿಗೆಗೆ ವರ್ಗಾವಣೆಯಾಗಲು ಶಾಲೆಗಳಿಂದ ಮಾತ್ರ ಸಾಧ್ಯ, ನಮ್ಮ ಸಂಸ್ಕೃತಿಯಲ್ಲಿ ಕಾರ ಕುಶಲ ಕಲೆ ಒಂದು ಸಂಸ್ಕೃತಿಯಾಗಿದೆ ಎಂದರು. 

I have requested funds in the budget for unaided Kannada schools - Minister Madhubangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close