ಪ್ರಾಮಾಣಿಕತೆ ಮೆರೆದ ಸ್ನೇಹಿತರು- Honest friends

 SUDDILIVE || SHIVAMOGGA

ಪ್ರಾಮಾಣಿಕತೆ ಮೆರೆದ ಸ್ನೇಹಿತರು- Honest friends    

Honest, friends

10 ರೂ. ಸಿಕ್ಕರೂ ಬಿಡದ ಈ ಜಮಾನದಲ್ಲಿ 10 ಸಾವಿರ ರೂ. ಗಳಿರುವ ಪರ್ಸ್ ಸಿಕ್ಕಿದೆ. ಅದನ್ನ ಪ್ರಾಮಾಣಿಕರಾಗಿ ಇಬ್ಬರು ಸ್ನೇಹಿತರು ಪೊಲೀಸ್ ಠಾಣೆಯ ಮೂಲಕ ವಾರಸುದಾರರಿಗೆ ವಾಪಾಸ್ ಮಾಡಿದ್ದಾರೆ. 

ದಿನಾಂಕ 17-01-2026 ರಂದು ಬೆಳಿಗ್ಗೆ ಆಯನೂರಿನ ವಾಸಿಗಳಾದ ದಾಮೋದರ, ನಾಗರಾಜ್ ಮತ್ತು ಸತೀಶ್ ರವರು ಒಟ್ಟಿಗೆ ಇದ್ದಾಗ ಆಯನೂರು ಸರ್ಕಲ್ ನಲ್ಲಿರುವ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ  ಒಂದು ಪರ್ಸ್ ಸಿಕ್ಕಿದ್ದು, ಅದರಲ್ಲಿ 10,000 ಹಣ ಮತ್ತು ಇತರೆ ದಾಖಲಾತಿಗಳು ಸಿಕ್ಕಿತ್ತು.   

ಇಬ್ಬರು ಪರ್ಸ್ ಹಾಗೂ ಹಣದೊಂದಿಗೆ ಕುಂಸಿ ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದಾರೆ.  ನಂತರ ಪರ್ಸ್ ನಲ್ಲಿದ್ದ ಫೋನ್ ನಂಬರ್ ಮತ್ತು ಫೋಟೋವನ್ನು ನೋಡಿ ವಾಸುದಾರರಾದ ಚಿಕ್ಕಮತಲಿ ಗ್ರಾಮದ ವಾಸಿ ಬಲರಾಮ್ ರನ್ನ ಠಾಣೆಗೆ ಕರೆಯಿಸಿ  ಹಸ್ತಾಂತರಿಸಲಾಗಿದೆ. 

ದಾಮೋದರ, ನಾಗರಾಜ್ ಮತ್ತು ಸತೀಶ್ ರವರ ಪ್ರಾಮಾಣಿಕತೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಿ ಅಭಿನಂದಿಸಿದ್ದಾರೆ. 

Honest friends

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close