ದೋರನಾಳು ಬಳಿ ನಿಂತಿದ್ದ ಬೋರ್ ಲಾರಿಗೆ ಬೊಲೆರೋ ಡಿಕ್ಕಿ-ಓರ್ವ ಸಾವು- Bolero collides with a lorry parked near Doranalu - one dead

SUDDILIVE || TARIKERE

ದೋರನಾಳು ಬಳಿ ನಿಂತಿದ್ದ ಬೋರ್ ಲಾರಿಗೆ ಬೊಲೆರೋ ಡಿಕ್ಕಿ-ಓರ್ವ ಸಾವು-  Bolero collides with a lorry parked near Doranalu - one dead    

Road, accident


ನಿಂತಿದ್ದ ಬೋರ್ ಕೊರೆಯುವ ಲಾರಿಗೆ  ಬೊಲೇರೋ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲಿಯೇ ಓರ್ವ ಸ್ಥಳದಲ್ಲಿಯೇ  ಸಾವನ್ನಪ್ಪಿದ್ದಾನೆ. ಉಳಿದ 7 ಜನ ಬಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬೋಲೇರೋ ಜೀಪ್‌ನಲ್ಲಿದ್ದ 8 ಜನರಲ್ಲಿ ಓರ್ವ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆತನನ್ನ ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದ ಚಂದ್ರು(31) ಎಂಬಾತ ಸಾವುಕಂಡಿರುವ ದುರ್ದೈವಿ, ಈತ ಬೊಲೆರೋ ವಾಹನದ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ 7 ಜನರನ್ನ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತರೀಕೆರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಎಲ್ಲರೂ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ. 

ಎಂ.ಸಿ.ಹಳ್ಳಿಯ ಪಕ್ಕದಲ್ಲಿರುವ ಗೋಪಾಲ ಎಂಬ ಹಳ್ಳಿಯ ಯುವಕರು ಕಲ್ಲತ್ತಗಿರಿಯ ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ. ಕಲ್ಲತ್ತಿಗಿರಿಯಿಂದ  ಎಂ.ಸಿ.ಹಳ್ಳಿಗೆ ಹೋಗುವಾಗ ದಾರಿ ಮಧ್ಯೆ ಬೋರ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ತರೀಕೆರೆ ತಾಲೂಕಿನ ದೋರನಾಳು ಗ್ರಾಮದಲ್ಲಿ ಘಟನೆ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ತರೀಕೆರೆ, ಲಿಂಗದಹಳ್ಳಿ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನ 1)ಮರೇಗೌಡ s/0 ಸಿದ್ಧಪ್ಪ, 2)ಜಗದೇಶ್ s/o ಮನೋಜ್ 3)ಕುಮಾರ್ s/o ಲಿಂಗಯ 4)ಶಂಕರ S/o ದೇವಾಕರ್, 5)ಅಂಜನಪ್ಪ s/o ದೇವಾಕರ್ 6)ಜಗದೇಶ್ s/o ಭೈರಪ್ಪ 7)ಮಂಜುನಾಥ್ s/o ಜೈರಾಮ್ ಎಂದು ಗುರುತಿಸಲಾಗಿದೆ.

Bolero collides with a lorry parked near Doranalu - one dead 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close