ಉಪನಿಬಂಧಕರ ಕಚೇರಿ ಮುಂದೆ ಹೊಸನಗರ ಸಹಕಾರ ಸಂಘದ ಪ್ರತಿಭಟನೆ-Hosanagara Cooperative Society protest in front of the Deputy Registrar's office

 SUDDILIVE || SHIVAMOGGA

ಉಪನಿಬಂಧಕರ ಕಚೇರಿ ಮುಂದೆ ಹೊಸನಗರ ಸಹಕಾರ ಸಂಘದ ಪ್ರತಿಭಟನೆ-Hosanagara Cooperative Society protest in front of the Deputy Registrar's office    

Hosanagara, protest

ಮುಖ್ಯ ಕಾರ್ಯನಿರ್ವಹಣಾಧೀಕಾರಿಗಳನ್ನ ಬದಲಿಸಿ ಪ್ರಭಾರಿ ಲೋಕೇಶ್ ಅವರಿಗೆ ಅಧಿಕಾರ ನೀಡಬೇಕು.‌ ಕಚೇರಿಗೆ ಜಡೆದಿರುವ ಬೀಗ ತೆಗೆಯಿಸುವಂತೆ ಹೊಸನಗರ ವೀರಶೈವ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇಂದು‌ ಶಿವಮೊಗ್ಗದ ಸಹಕಾರ ಸಂಘದ ಉಪನಿಬಂಧಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. 

ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿಗಳಾದ ಗೀತ ಗಿರೀಶ್ ಅನೇಕ ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದು ಭ್ರಷ್ಠಾಚಾರದಲ್ಲಿ ತೊಡಗಿದ್ದಾರೆ. ಈಗಿನ ಸಂಘದ ಅಧ್ಯಕ್ಷರು ಬದಲಾದ ಕಾರಣ ಹೊಂದಿಕೊಂಡು ಕೆಲಸ ಮಾಡುವುದನ್ನ‌ಬಿಟ್ಟು ನಿರ್ಲಕ್ಷತನ, ಅಸಡ್ಡೆತನವನ್ಮ ತೋರಲು ಆರಂಭಿಸಿದ್ದಾರೆ. ಇವರನ್ನ ಬದಲಿಸಿ ಪ್ರೌಅರಿ ಲೋಕೇಶ್ ಅವರಿಗೆ ಸಿಇಒ ಪೊಸ್ಟ್ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು. 

ಈ ಬಗ್ಗೆ ಶಿವಮೊಗ್ಗ ಉಪನಿಬಂಧಕರ ಕಚೇರಿಗೆ ಐದು ಬಾರಿ ಪತ್ರ ಬರೆದರೂ ಯಾವ ಕ್ರಮ ಜರುಗಿಲ್ಲ. ಸಂಘದ ಸಭೆ ನಡೆಸಿ ನಡವಳಿ ಬಗ್ಗೆ ತಿಳಿಸಿದರು ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿರುವ ಸಂಘದ ಪದಾಧಿಕಾರಿಗಳು ಇಂದು ಶಿವಮೊಗ್ಗಕ್ಕೆ ಬಂದು ಪ್ರತಿಭಟಿಸಲಾಗಿದೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ. 

ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಣದುರುಪಯೋಗ  ಮತ್ತು ನಿಯಮಬಾಹಿರ ವ್ಯವಹಾರ ಮೇಲ್ನೀಟಕ್ಕೆ ಕಂಡು ಬಂದಿದೆ. ಹಿಂದಿನ ಸಂಘದ ಅಧ್ಯಕ್ಷರು ಮತ್ತು ಸಿಇಒಗಳ  ಅಸಹಾಕಾರದಿಂದ ಸಂಘದ ದೈನಂದಿನ ಚಟುವಟಿಕೆಗೆ ಅಡ್ಡಿಯಾಗುತ್ತಿದೆ. ಸಿಇಒ ಅವರೆ ಹಾಲಿ ಇರುವ ಅಧ್ಯಕ್ಷರಿಗೆ ಮಾಹಿತಿ ನೀಡದೆ ಅವರೆ‌ಸಂಘದ ಹಣಕಾಸು ವ್ಯವಹಾರಗಳನ್ನ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸಂಘದ ಅಧ್ಯಕ್ಷರು ಸೂಚನೆ ನೀಡಿದರೂ ತಮ್ಮ‌ವರ್ತನೆಯನ್ನ ತೋರುತ್ತಿರುವುದಾಗಿ ಮನವಿಯಲ್ಲಿ ಆರೋಪಿಸಲಾಗಿದೆ. 

ಅಸಹಕಾರ ಮತ್ತು ದುರ್ನಡತೆಯಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನ ಕರ್ತವ್ಯದಿಂದ ಅಮಾನತು ಗೊಳಿಸಿದರೂ ತಮ್ಮ ಅಧಿಕಾರವನ್ನ ಮುಂದುವರೆಸಿದ್ದಾರೆ. ಹಾಗಾಗಿ ಯಾವುದೇ ಆದೇಶವನ್ನ ಪಾಲಿಸದ ಸಿಇಒರನ್ನ ತೆಗೆದು ಪ್ರಭಾರವನ್ನ‌ಲೋಕೇಶ್ ಗೆ ನೀಡುವಂತೆ ಒತ್ತಾಯಿಸಲಾಗಿದೆ. 

Hosanagara Cooperative Society protest in front of the Deputy Registrar's office

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close