ಚುನಾವಣೆ ಆಯೋಗ ಮತ್ತು ಲೋಕಾಯುಕ್ತರನ್ನ‌ ನಂಬದಿರುವ ಸ್ಥಿತಿಗೆ ತಲುಪಿದ್ದೇವೆ-ಈಶ್ವರಪ್ಪ ಈ ರೀತಿ ಆರೋಪ ಮಾಡಿದ್ದೇಕೆ? why did Eshwarappa make such allegations?

 SUDDILIVE || SHIVAMOGGA

ಚುನಾವಣೆ ಆಯೋಗ ಮತ್ತು ಲೋಕಾಯುಕ್ತರನ್ನ‌ ನಂಬದಿರುವ ಸ್ಥಿತಿಗೆ ತಲುಪಿದ್ದೇವೆ-ಈಶ್ವರಪ್ಪ ಈ ರೀತಿ ಆರೋಪ ಮಾಡಿದ್ದೇಕೆ?We have reached a point where we do not trust the Election Commission and the Lokayukta - why did Eshwarappa make such allegations?

Eshwarappa, allegation

ಮಹಾನಗರ ಪಾಲಿಕೆ ಚುನಾವಣೆ ನಡೆಸಲು ರಾಷ್ಟ್ರಭಕ್ತರ ಬಳಗ ನ್ಯಾಯಾಲಯಕ್ಕೆ ಹೋಗಲಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಾಲಿಕೆಗಳ ಚುನಾವಣೆ ನಡೆಸದಿರಲು ತೀರ್ಮಾನಿಸಿದಂತಿದೆ. ಎಲ್ಲವನ್ನೂ ನ್ಯಾಯಾಲಯಕ್ಕೆ ಹೋಗುವ ಸ್ಥಿತಿಯಿರುವುದರಿಂದ ನಾವು ಸಹ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ ಎಂದರು.  

ಈ ಸ್ಥಿತಿ ನಿರ್ಮಾಣಕ್ಕೆ ಕಾಂಗ್ರೆಸ್ ನೇರ ಕಾರಣವಾಗಿದೆ.  ಪ್ರಜಾಪ್ರಭುತ್ವದ ವ್ಯವಸ್ಥೆ ಕಗ್ಗೊಲೆ ಮಾಡುತ್ತಿದೆ ಹಾಗಾಗಿ ನ್ಯಾಯಾಲಯದ ಮೊರೆಹೋಗುತ್ತಿದ್ದೇವೆ. ಚುನಾವಣೆ ಆಯೋಗ ಯಾಕೆ ಸುಮ್ಮನಿದೆ. ಶಕ್ತಿಯಲ್ಲದ ಕಾರಣ ಹಾಗಾಗಿದೆ. ಚುನಾಯಿತ ಪ್ರತಿನಿಧಿಯಿಂದ ಪಾಲಿಕೆ ಆಡಳಿತ ನಡೆಸಬೇಕಿದೆ ಎಂದರು.

ಚುನಾವಣೆ ಆಯುಕ್ತ ಸಂಗ್ರೇಶಿ ಶಿವಮೊಗ್ಗಕ್ಕೆ ಬಂದಾಗ ಮೀಸಲಾತಿ ಮತ್ತು ಡಿಲಿಮಿಟ್ ಮಾಡಲಾಗುತ್ತಿದೆ ಎಂದಿದ್ದರು.  ಬೆಂಗಳೂರಿನ ಎಂಎಲ್ ಎ ಗಳಿಗೆ ಬಿಬಿಎಂಪಿ ಚುನಾವಣೆ ಬೇಡ. ಇತರೆಡೆ ಎಂಎಲ್ ಎಗಳು ಪಸಲಿಕೆ ಸದಸ್ಯರ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ. ಬೆಂಗಳೂರಿನಲ್ಲಿ ಬಿಬಿಎಂಪಿ ಸದಸ್ಯರು ಶಾಸಕರಿಗಿಂತ ಪ್ರಬಲರಾಗುತ್ತಾರೆ ಎಂದು ಆ ಶಾಸಕರಿಗೆ ಚುನಾವಣೆ ಬೇಡ. 200 ಕೋಟಿ ರೂ. ಹಣವನ್ನ ಪ್ರತಿ ಪಾಲಿಕೆಗೆ ಕೊಡುವುದಾಗಿ ನಗರಾಭಿವೃದ್ಧಿ ಸಚಿವರಾದ ಬೈರತಿ ಸತೀಶ್ ಹೇಳಿದ್ದರು. ಹೇಳಿ ಒಂದೂವರೆ ವರ್ಷವೇ ಕಳೆದಿದೆ ಇನ್ನೂ ಹಣ ಪಾಲಿಕೆಗೆ ಬರಬೇಕಿದೆ ಎಂದು ವ್ಯಂಗ್ಯವಾಡಿದರು.

ನಮ್ಮ ಮೂಗಿಗೆ ತುಪ್ಪ ಹಚ್ಚಿದ್ದಾರೆ. ಹಲವು ಅಭಿವೃದ್ಧಿ ವಿಚಾರದಲ್ಲಿ ಸರಿಪೆಇಸಲಾಗುವುದು ಎಂದು ಅಧಿಕಾರಿಗಳು ಮತ್ತು ಸಚಿವರು ನಮ್ಮ ಮೂಗಿಗೆ ತುಪ್ಪ ಸವರಿದಿದ್ದಾರೆ. ಆಶ್ರಯ ಮನೆಗಳಿಗೆ 12 ಕೋಟಿ ರೂ ಹಣ ಬಿಡುಗಡೆ ಮಾಡುವುದಾಗಿ ಸಚಿವ  ಜಮೀರ್ ಶಿವಮೊಗ್ಗಕ್ಕೆ ಬಂದಾಗ ಹೇಳಿದ್ದರು. 12 ಕೋಟಿ ರೂ ಬಿಡುಗಡೆ ಮಾಡದ ಜಮೀರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ತಾಪಂ ಮತ್ತು ಜಿಪಂ ಚುನಾವಣೆ ನಡೆಸುವುದಾಗಿ ನ್ಯಸಯಾಲಯಕ್ಕೆ ಭರವಸೆ ನೀಡಿದ ಕಾರಣ ಅದರ ಬಗ್ಗೆ ಮಾತನಾಡಲ್ಲ. ಪಾಲಿಕೆ ಚುನಾವಣೆ ಬಗ್ಗೆ ಮಾತನಾಡದ ಕಾರಣ ನ್ಯಾಯಾಲಯದ ಮೊರೆಹೋಗುತ್ತಿದ್ದೇವೆ. ಲೋಕಾಯುಕ್ತರ ವಿರುದ್ಧವೂ ಕೆಂಡಕಾರಿದ ಮಾಜಿ ಡಿಸಿಎಂ ಪಾಲಿಕೆ ಮೇಲೆ ಪದೇ ಪದೇ ದಾಳಿ ನಡೆಸುತ್ತಾರೆ. ಅಲ್ಲಿ ಟೀ ಕುಡಿದುಕೊಂಡು ಹೋಗುತ್ತಾರೆ.  ಮಾಧ್ಯಮಗಳು ಸಹ ಲೋಕಾಯುಕ್ತರ ದಾಳಿಯನ್ನ ಪ್ರಚಾರ ಕೊಡ್ತಾವೆ. ಆದರೆ ಯಾವುದನ್ನ ಗಟ್ಟಿಯಾಗಿ ದಡ ಸೇರಿಸಿದ್ದಾರೆ. ಚುನಾವಣೆ ಆಯುಕ್ತರನ್ನ ಮತ್ತು ಲೋಕಾಯುಕ್ತರನ್ನ ನಂಬದಿರುವ ಸ್ಥಿತಿಗೆ ತಲುಪಿದ್ದೇವೆ ಎಂದು ದೂರಿದರು. 

why did Eshwarappa make such allegations?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close