ಐಪಿಎಲ್ ಬೆಂಗಳೂರಿನಿಂದ ಶಿಫ್ಟ್ ಆದರೆ ರಾಜ್ಯ ಸರ್ಕಾರವೇ ನೇರ ಕಾರಣ-ಡಿ.ಎಸ್.ಅರುಣ್- IPL shifted from Bengaluru but the state government is the direct reason - D.S. Arun

 SUDDILIVE || SHIVAMOGGA

ಐಪಿಎಲ್ ಬೆಂಗಳೂರಿನಿಂದ ಶಿಫ್ಟ್ ಆದರೆ ರಾಜ್ಯ ಸರ್ಕಾರವೇ ನೇರ ಕಾರಣ-ಡಿ.ಎಸ್.ಅರುಣ್- IPL shifted from Bengaluru but the state government is the direct reason - D.S. Arun    

IPL, Banglore


2008 ನೇ ಇಸವಿ ಐಪಿಎಲ್ ಆರಂಭವಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನೆ ಪಂದ್ಯವನ್ನ ಆಡಲಾಗಿತ್ತು. ಒಂದು ವೇಳೆ ಐಪಿಎಲ್ ಬೆಂಗಳೂರಿನಲ್ಲಿ ಆಡಿಸದಿದ್ದರೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಎಂಎಲ್ ಸಿ ಡಿ.ಎಸ್ ಅರುಣ್ ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 101 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ನಾಲ್ಕು ಬಾರಿ ಫೈನಲ್ ತಲುಪಿದೆ. ಮೂರು ಬಾರಿ ಸೋತು ಪಂಜಾಬ್ ವಿರುದ್ಧ ಆರ್ ಸಿಬಿ  17 ವರ್ಷದ ನಂತರ ಐಪಿಎಲ್ ಗೆದ್ದತ್ತು. ಇಡೀ ರಾತ್ರಿ ಸಂಭ್ರಮಾಚರಣೆ ನಡೆದಿತ್ತು. 

ಮರುದಿನ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಸಲಾಗಿತ್ತು. ಜೂ.4 ರಂದು ಸಂಭ್ರಮಾಚರಣೆಯ ವೇಳೆ ಕರ್ನಾಟಕ ಸರ್ಕಾರ ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲುತುಫಿತ ನಡೆದಿತ್ತು. ಅಂಬ್ಯುಲೆನ್ಸ್ ಮತ್ತು ಪೊಲೀಸ್ ಇಲ್ಲದೆ ಕೆಎಸ್ ಸಿಎ ಮೈದಾನದಲ್ಲಿ 11 ಜನ ಸಾವು ಸಂಭವಿಸುತ್ತದೆ. ಸಾವನ್ನಪ್ಪಿದ ಸ್ಥಳದಲ್ಲಿಯೇ ಡಿಸಿಎಂ ಹೋಗಿ ಕಪ್ ನೀಡುತ್ತಾರೆ ಎಂದು ದೂರಿದರು. 

ನಿವೃತ್ತ ನ್ಯಾಯಾಧೀಶ ಡಿ.ಕುನ್ಹ ಅವರ ನೇತೃತ್ವದಲ್ಲಿ ತನಿಖೆ ನಡೆದಿದೆ ಎಳು ತಿಂಗಳು ಕಳೆದರೂ ವರದಿ ಬಿಡುಗಡೆಯಾಗಿಲ್ಲ. ಮೊದಲು DNA ಎರನೇ ಆರೋಪಿ ಆರ್ ಸಿ ಬಿ ಮತ್ತು  ಮೂರು KSCA ಮೇಲೆ ಆರೋಪಿಸಲಾಗಿದೆ. ಆರ್ ಸಿಬಿಯ ಮುಖ್ಯಸ್ಥರನ್ನ ಬಂಧಿಸಲಾಗುತ್ತದೆ. ಸರ್ಕಾರ ಸತ್ತುಹೋಗಿದೆ ಐಪಿಎಲ್ ನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡದಂತೆ ನೋಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ನಡುವಳಿಕೆ ಇಂದ ಐಪಿಎಲ್ ಪುಣೆಗೆ ಹೋಗುತ್ತಿದೆ. ಸಿಎಂಗೆ ಅರ್ಥವಾಗುತ್ತಿಲ್ಲ ಎಂದರು. 

745 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನ ಚಿನ್ನಸ್ವಾಮಿಯಲ್ಲಿ ನಡೆದಿದೆ. 40 ಸಾವಿರ ಅಭಿಮಾನಿಗಳು ಮಾತ್ರ ಸ್ಟೇಡಿಯಂ ನಲ್ಲಿ ಕೂರಲು ಅವಕಾಶವಿರುತ್ತದೆ. 4 ಲಕ್ಷ ಜನ ಸೇರಿದರೆ ಏನಾಗುತ್ತದೆ ಎಂದು ಸರ್ಕಾರ ಯೋಚಿಸಿಲ್ಲ.ಬೆಂಗಳೂರಿನಿಂದ ಐಪಿಎಲ್ ಬೇರೆಡೆ ಶಿಫ್ಟ್ ಆದರೆ ಲಾಸು ಯಾರಿಗೆ ಅನುಭವಿಸುತ್ತದೆ ಎಂದು ಸರ್ಕಾರ ಕಳೆದುಕೊಳ್ಳುತ್ತದೆ. ವ್ಯವಸ್ಥೆ ಮತ್ತು ಆದಾಯವನ್ನ ಸರ್ಕಾರ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಲಾರ್ಡ್ ಕ್ರೀಡಾಂಗಣಕ್ಕಿಂತ ಚಿನ್ನಸ್ವಾಮಿ ಏನೂ ಕೆಇಮೆಯಿಲ್ಲ. ಧರ್ಮಶಾಲಾಕ್ಕಿಂತ ಉತ್ತಮವಾಗಿದೆ ಚಿನ್ನಸ್ವಾಮಿಯೇನು ಕಡಿಮೆಯಿಲ್ಲ. ಪುಣೆಗೆ ಆರ್ ಸಿಬಿ ಹೋದರೆ ಮತ್ತೆ ವಾಪಾಸ್ ಬರೋದಿಲ್ಲ.  ಚುನಾವಣೆ ಕಳೆಯಿತು. ಬೇರೆ ತಂಡದಲ್ಲಿದ್ದೆ. ನಾವೆಲ್ಲ ಸೇರಿ ಕ್ರಿಕೆಟ್ ವೆಳೆಸಬೇಕು. ಸರ್ಕಾರ ಮಾತ್ರ ದೈರ್ಯಕೊಡಲು ಸಾಧ್ಯವೆಂದು ತಿಳಿಸಿದರು. 

KSCA ಗೆ ಸಿಎಂ‌ಮತ್ತು ಡಿಸಿಎಂ ಲೈಫ್ ಮೆಂಬರ್ ಆಗಿದ್ದಾರೆ. ಡಿಸಿಎಂ ಐಪಿಎಲ್ ನ್ನ ಬೇರೆಡೆ ಬಿಡಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಬಾಯಿಬಿಡುತ್ತಿಲ್ಲ. ಡಿಸಿಎಂ‌ಮಾತು ನಡೆಯಲ್ಲ. ಕುನ್ಹ ವರದಿಯಲ್ಲಿ ನೂನ್ಯತೆಯಿದೆ ಎಂದು ಬರೆದಿರುವ ಕಾರಣ ಸರ್ಕಾರ ಏಳು ತಿಂಗಳಾದರೂ ವರದಿ ಬಿಡುಗಡೆ ಮಾಡಿಲ್ಲ. ಬಹಿರಂಗ ಪಡಿಸಿದರೆ ಅವರ ಕುತ್ತಿಗೆಗೆ ಬರಲಿದೆ ಎಂದರು. 

IPL shifted from Bengaluru but the state government is the direct reason - D.S. Arun

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close