ಮೂವರು ಮಕ್ಕಳು ಮಿಸ್ಸಿಂಗ್ ಸುಳಿವು ಸಿಕ್ಕರೆ ಮಾಹಿತಿಕೊಡಿ-If you find any clues about the three missing children, please provide information

SUDDILIVE || SHIVAMOGGA

ಮೂವರು ಮಕ್ಕಳು ಮಿಸ್ಸಿಂಗ್ ಸುಳಿವು ಸಿಕ್ಕರೆ ಮಾಹಿತಿಕೊಡಿ-If you find any clues about the three missing children, please provide information     

Children, Missing

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಬಾಲಕರು ಕಾಣೆಯಾಗಿದ್ದು, ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

 ಭದ್ರಾಪುರ ಹತ್ತಿರ ಇರುವ ಶ್ರೀಧರ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶಿಕಾರಿಪುರ ತಾಲೂಕು, ಪುನೇದಹಳ್ಳಿ ವಾಸಿ ಹೇಮರಾಜ್ ಎಂಬುವವರ ಮಕ್ಕಳಾದ 13 ವರ್ಷದ ಲಿಖಿತ್ ಹಾಗೂ 12 ವರ್ಷದ ಪ್ರಥಮ್ ಎಂಬ ಇಬ್ಬರು ಬಾಲಕರು ಹಾಗೂ ಪುನೇದಹಳ್ಳಿ ವಾಸಿ ಪೆದ್ದಪ್ಪ ಎಂಬುವವರ ಮಗ ಅಂಬಾರಗೊಪ್ಪ ಸರ್ಕಾರಿಶಾಲೆಯಲ್ಲಿ 09ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದೀಪ್ ಎಂಬ 15 ವರ್ಷದ ಜ 21 ರಂದು ರಂದು ಬೆಳಿಗ್ಗೆ 09.00 ಗಂಟೆಗೆ ಈ ಮೂರು ಜನರು ಶಾಲೆಗೆ ಹೋಗುತ್ತೇವೆಂದು ಮನೆಯಿಂದ ಹೋಗಿದ್ದು ಈವರೆಗೂ ವಾಪಾಸ್ಸಾಗಿರುವುದಿಲ್ಲ .

 ಲಿಖಿತ್‌ನ ಚಹರೆ: 5.2 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಸ್ಕೂಲ್ ಯೂನಿಫಾರಂ ಹಳದಿ ಬಣ್ಣದ ಟೀಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. 

 ಪ್ರಥಮ್‌ನ ಚಹರೆ: 5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಸ್ಕೂಲ್ ಯೂನಿಫಾರಂ ಹಳದಿ ಬಣ್ಣದ ಟೀಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. 

 ಸಂದೀಪ್‌ನ ಚಹರೆ: 5.2 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಸ್ಕೂಲ್ ಯೂನಿಫಾರಂ ಕೇಸರಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಮೂರು ಜನರು ಸ್ಕೂಲ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾರೆ. 

ಈ ಮೂರು ಬಾಲಕರ ಬಗ್ಗೆ ಸುಳಿವು ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿ, ಶಿವಮೊಗ್ಗ ನಂ:-08182- 261413, ಡಿ.ಎಸ್.ಪಿ ಶಿಕಾರಿಪುರ ಉಪ ವಿಭಾಗ ಶಿಕಾರಿಪುರ:-08187-222443, 9480803323, ಪಿ..ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ. 08187-222443, 9480803366 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

If you find any clues about the three missing children, please provide information 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close