ಗವರ್ನರ್ ಭಾಷಣಕ್ಕೆ ಕಾಂಗ್ರೆಸ್ ವಿರೋಧ, ಬಿಎಸ್ ವೈ ಕೆಂಡಮಂಡಲ-Congress opposes Governor's speech, BSY Kendamandala

SUDDILIVE || SHIVAMOGGA

ಗವರ್ನರ್ ಭಾಷಣಕ್ಕೆ ಕಾಂಗ್ರೆಸ್ ವಿರೋಧ, ಬಿಎಸ್ ವೈ ಕೆಂಡಮಂಡಲ-Congress opposes Governor's speech, BSY Kendamandala  

Bsy, Kendamandala


ಗವರ್ನರ್ ಭಾಷಣ ವಿರೋಧಿಸಿದ ಕಾಂಗ್ರೆಸ್ ನಡೆ ವಿಚಾರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದು, ನಮ್ಮ ಗವರ್ನರ್ ಜೊತೆ ಕಾಂಗ್ರೆಸ್ ನವರ ವರ್ತನೆ ಅಪರಾಧವಾಗಿದೆ. ಅದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ಮುಂದೆ ಬರುವ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಕಾಂಗ್ರೆಸ್ನ ಗೂಂಡಾಗಿರಿ ರಾಜ್ಯದ ಉದ್ದಗಲಕ್ಕೂ ನಡೆಯುತ್ತಿದೆ. ರಾಜ್ಯಪಾಲರ ಜೊತೆಗೂ ದುರ್ವರ್ತನೆ ಮಾಡಿರುವುದು ಯಾರು ಕ್ಷಮಿಸಲು ಸಾಧ್ಯವಿಲ್ಲ. ಈ ನಡೆಯನ್ನ ನಾನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ನವರು ಮನ ಬಂದಂತೆ ವರ್ತನೆ ಮಾಡುತ್ತಿರುವುದು ಇದೇ ಮೊದಲಲ್ಲ. ರಾಜ್ಯಪಾಲರ ಮೇಲೆ ಹಲ್ಲೆ ಮಾಡುವುದರ ಜೊತೆಗೆ ಟೀಕೆ ಮಾಡುವುದು ಅಪರಾಧವಾಗಿದೆ. ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ನ ವಿರೋಧ ಸಹ ಅರ್ಥವಿಲ್ಲದ್ದು, 

ವಾಸ್ತವವಾಗಿ ಜನರಿಗೆ ಅನುಕೂಲವಾಗುತ್ತದೆ ಎಂಬುದು ಗೊತ್ತಿದ್ದರೂ ಸಹ ವಿರೋಧ ಮಾಡುತ್ತಿದ್ದಾರೆ. ದುರುದ್ದೇಶಪೂರ್ವಕವಾಗಿ ಈ ವಿಚಾರವನ್ನು ಎತ್ತಿಕೊಂಡಿದ್ದಾರೆ. ಅದರಿಂದ ಯಾವುದೇ ಉಪಯೋಗ ಇಲ್ಲ. ಮೊದಲಿಗಿಂತ ಈಗ ಹೆಚ್ಚು ಒಳ್ಳೆಯದನ್ನ ಮಾಡಿಕೊಟ್ಟಿದ್ದಕ್ಕೆ ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಗ್ರಾಮೀಣ ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಕೆಂಡಮಂಡಲವಾದರು. 

Congress opposes Governor's speech, BSY Kendamandala

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close