ಭದ್ರಾವತಿ ಪ್ರಕರಣದ ಬೆನ್ನಲ್ಲೇ ಶಿವಮೊಗ್ಗದಲ್ಲಿಯೂ ವಸತಿ ಶಾಲೆ ಮಕ್ಕಳು ಆಸ್ಪತ್ರೆಗೆ ದಾಖಲು-In the wake of the Bhadravati incident, residential school children in Shivamogga were also admitted to the hospital

SUDDILIVE || SHIVAMOGGA

ಭದ್ರಾವತಿ ಪ್ರಕರಣದ ಬೆನ್ನಲ್ಲೇ ಶಿವಮೊಗ್ಗದಲ್ಲಿಯೂ ವಸತಿ ಶಾಲೆ ಮಕ್ಕಳು ಆಸ್ಪತ್ರೆಗೆ ದಾಖಲು-In the wake of the Bhadravati incident, residential school children in Shivamogga were also admitted to the hospital     

Children, school

ಶಿವಮೊಗ್ಗದ ರಾಗಿಗುಡ್ಡದಲ್ಲಿರುವ  ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಲೆಯಲ್ಲಿರುವ 14 ವಿದ್ಯಾರ್ಥಿಗಳಲ್ಲಿ ಕೆಮ್ಮು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಕಳೆದ 3 ದಿನಗಳಿಂದ  ವಿದ್ಯಾರ್ಥಿಗಳಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ನಿರಂತರ ಕೆಮ್ಮಿನ ಹಿನ್ನೆಲೆ  ವಿದ್ಯಾರ್ಥಿಗಳನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು,  ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. 

6 ರಿಂದ 10 ತರಗತಿ ವಿದ್ಯಾರ್ಥಿಗಳಲ್ಲಿ  ಕೆಮ್ಮು ಕಂಡು ಬಂದಿದೆ. ನಿರಂತರ ಕೆಮ್ಮಿಗೆ ಆತಂಕಗೊಂಡಿರುವ ವಸತಿ ಶಾಲೆ ವಾರ್ಡನ್ ಮಕ್ಕಳನ್ನ ನೇರವಾಗಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಜಿಲ್ಲಾಧಿಕಾರಿ, ಜಿ.ಪಂ. ಸಿ.ಇ.ಓ., ಟಿ ಹೆಚ್ ಓ, ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಇಂದು ಸಂಜೆಯ ವೇಳೆಗೆ ಭದ್ರಾವತಿಯ ಅರಳಹಳ್ಳಿ ಶಾಲೆ ಮಕ್ಕಳು ವಿಟಮಿನ್ ಸಿರಪ್ ಸ್ವೀಕರಿಸಿದ ನಂತರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಈ ನಿಗೂಢ ಕೆಮ್ಮನಿಂದ ಮಕ್ಕಳು ಮೆಗ್ಗಾನ್ ಗೆ ದಾಖಲಾಗಿದ್ದಾರೆ. 

In the wake of the Bhadravati incident, residential school children in Shivamogga were also admitted to the hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close