SUDDILIVE || SHIVAMOGGA
ಗಲೀಜಾಗಿದ್ದ ಬಸ್ ನಿಲ್ದಾಣ ಈಗ ಲಕಲಕ ಎಂದು ಹೊಳೆಯುತ್ತಿರುವುದು ಹೇಗೆ?The once-messy bus stop is now gleaming like a beacon
ರಾಗಿಗುಡ್ಡ ಎಲ್ಲಾದರಲ್ಲೂ ಸದ್ದುಮಾಡುವ ಪ್ರದೇಶವಾಗಿದೆ. ರಾಗಿಗುಡ್ಡದಲ್ಲಿ ಇಷ್ಟುದಿನ ಕೋಮುಗಲಭೆಯ ವಿಷಯದಲ್ಲಿ ಪ್ರಖ್ಯಾತಿ ಪಡೆದಿತ್ತು. ಈಗ ರಾಗಿಗುಡ್ಡದ ಬಸ್ ನಿಲ್ದಾಣಕ್ಕೆ ಸುಣ್ಣಬಣ್ಣ ಹೊಡೆಸುವ ಮೂಲಕ ಪೊಲೀಸರೇ ಸಮಾಜ ಸೇವೆಯ ಹೆಸರಿನಲ್ಲಿ ಮುಂಚೂಣಿಗೆ ಬಂದಿದ್ದಾರೆ.
ಗುಟ್ಕಾ ಹಾಕೊಂಡು ಕಂಡಕಂಡಲ್ಲಿ ಉಗಿಯುವ ಕಿಡಿಗೇಡಿಗಳಿಗೆ ಈ ಜಗತ್ತಿನಲ್ಲಿ ಕಡಿಮೆಯಿಲ್ಲ. ಆದರೆ ಆ ಗಲೀಜನ್ನ ತೊಳೆದುಹಾಕುವ ಸಾಮಾಜಿಕ ಕೆಲಸ ಮಾಡೋಕೆ ಇರುವರ ಸಂಖ್ಯೆ ಕಡಿಮೆನೆ. ಈ ಸಾಮಾಜಿಕ ಕಾರ್ಯಕ್ಕೆ ಗ್ರಾಮಾಂತರ ಪೊಲೀಸರು ಕೈಹಾಕಿ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾರೆ.
ರಾಗಿಗುಡ್ಡ ಮಹಾತ್ಮ ಗಾಂಧಿ ಸರ್ಕಲ್ ನಲ್ಲಿರುವ ಬಸ್ ನಿಲ್ದಾಣವನ್ನು ಕಿಡಿಗೇಡಿಗಳು ಗುಟ್ಕಾ ತಿಂದು ಉಗಿದು ಬಹಳ ಗಲೀಜು ಮಾಡಿರುವುದನ್ನು ಗಮನಿಸಿದ ಶಿವಮೊಗ್ಗ ಗ್ರಾಮಾಂತರ ಠಾಣೆಯ ಸಿಬ್ಬಂದಿಯಾದ ಶಿವರಾಜ್ ರವರು ಈ ದಿನ ತಮ್ಮ ಸ್ವಂತ ಖರ್ಚಿನಲ್ಲಿ ಸ್ವಚ್ಛ ಗೊಳಿಸಿ ಹೊಸದಾಗಿ ಬಣ್ಣ ಹೊಡೆಸಿದ್ದಾರೆ. ಅವರಿಗೆ ಶಾಂತಿನಗರದ ಸಮಸ್ತ ಸಭ್ಯಸ್ತರ ಪರವಾಗಿ ಅಭಿನಂದನೆಗಳನ್ನ ಸಲ್ಲಿಸಲಾಗಿದೆ.
The once-messy bus stop is now gleaming like a beacon


