ಕರವೇ ಜನಮನದ ಲಾಂಛನ ಬಿಡುಗಡೆ, ವಿಷಪೂರಿತ ಆಹಾರ ತಯಡರಿ ವಿರುದ್ಧ ಸಂಘಟನೆ ಗುಡುಗು- Karave Janaman logo released, organization thunders against poisonous food production

SUDDILIVE || SHIVAMOGGA

ಕರವೇ ಜನಮನದ ಲಾಂಛನ ಬಿಡುಗಡೆ, ವಿಷಪೂರಿತ ಆಹಾರ ತಯಡರಿ ವಿರುದ್ಧ ಸಂಘಟನೆ ಗುಡುಗು- Karave Janaman logo released, organization thunders against poisonous food production   


Karave, janamana


ಇಂದು ಕರವೇ ಜನಮನ ರಾಜ್ಯ ಸಂಘಟನೆಯ ಪತ್ರಿಕಾ ಭವನದಲ್ಲಿ ಲಾಂಛನ ಬಿಡುಗಡೆ               ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆ ಪ್ರಧಾನ ಕಚೇರಿ ಶಿವಮೊಗ್ಗ ಇದರ ರಾಜ್ಯಾಧ್ಯಕ್ಷರಾದ ಕೆ ಜನಾರ್ಧನ್ ಸಾಲಿಯನ್ ರವರು ಇಂದು ಸಮಯ ಬೆಳಗ್ಗೆ 11:30ಕ್ಕೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಸಲ್ಲಿಸಿ  ಸಂಘಟನೆಯ ಲಾಂಛನವನ್ನು  ಪತ್ರಕರ್ತರ ಸಮ್ಮುಖದಲ್ಲಿ ತಮ್ಮ ಸದಸ್ಯರು ಪದಾಧಿಕಾರಿಗಳೊಂದಿಗೆ ಬಿಡುಗಡೆ ಮಾಡಿ, ಮುಂದಿನ ಭಾಗವಾದ ಹೋರಾಟದ ವಿಷಯವಾಗಿ ರಾಜ್ಯಾದ್ಯಂತ 

 ಕಲಬೆರಕೆ ನಿಷೇಧಿತ ಬಣ್ಣ ರುಚಿಕರ ರಾಸಾಯನಿಕ ವನ್ನು ಬೆರೆಸಿ ವಿಷಪೂರಿತ ಆಹಾರ ಪದಾರ್ಥಗಳನ್ನು ತಯಾರಿಸಿ ಮುಗ್ಧ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸರಬರಾಜು ಮಾಡಿ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಸಣ್ಣಪುಟ್ಟ ಕ್ಯಾಂಟೀನ್ ಗೂಡಂಗಡಿಗಳು  ಹಾಗೂ ಚಾಟ್ಸ್ ಕೇಂದ್ರಗಳು, ಹೋಟೆಲ್ಗಳಲ್ಲೂ ಕೂಡ ಮಾರಾಟ ಮಾಡುತ್ತಿರುವುದು ತುಂಬಾ ಖೇದಕರ ಸಂಗತಿಯಾಗಿದೆ ಇದರ ವಿರುದ್ಧ ರಾಜ್ಯಾದ್ಯಂತ ಎಲ್ಲಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತೆಯನ್ನು ಖಂಡಿಸಿ ಅವರನ್ನು ಎಚ್ಚರಿಸಿ ಈ ರೀತಿಯ ಕಳಪೆ ಆಹಾರಗಳನ್ನು ತಯಾರಿಸಿ ಮಾರಾಟ ಮಾಡುವ ಎಲ್ಲರ ವಿರುದ್ಧವೂ ಕ್ಷಿಪ್ರವಾಗಿ ಕಾರ್ಯಚರಣೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಮುಂದೆ ಈ ರೀತಿಯ ಯಾವುದೇ ಘಟನೆಗಳ ನಡೆಯದಾಗಿ ಎಚ್ಚರಿಕೆವಹಿಸುವ ಸಲುವಾಗಿ ನಾವು ನಮ್ಮ ಸಂಘಟನೆಯ ಎಲ್ಲಾ ಸದಸ್ಯ ಪದಾಧಿಕಾರಿಗಳು ಹೋರಾಟವನ್ನು ನಡೆಸುವುದಾಗಿ ಮತ್ತು ಈ ರೀತಿಯ ವಿಷಪೂರಿತ ರಾಸಾಯನಿಕಗಳನ್ನು ತಯಾರು  ಮಾಡುವ ಕೇಂದ್ರಗಳನ್ನು ಮುಚ್ಚಿಸಿ  ಮತ್ತು ಇವುಗಳನ್ನು ಸರಬರಾಜು ಮಾಡುವ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗುವುದು ಎಂದು   ಘೋಷಣೆ ಮಾಡಿರುತ್ತಾರೆ ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ,ಮಾಲತೇಶ್, ಖಜಾಂಚಿಗಳಾದ ಸಿದ್ದಣ್ಣಯ್ಯ, ಜಿಲ್ಲಾ ಪ್ರಮುಖರಾದ ಕಿರಣ್ ಕೆ, ಮಲ್ಲಯ್ಯ ಹಿರೇಮಠ, ವೀಣಾ ಹೆಚ್, ಶೋಭಾ, ವಿ ರಾಮು, ರಾಮಣ್ಣ ರಾಗಿಗುಡ್ಡ, ಅಶೋಕ್, ಮತ್ತಿತರರು ಭಾಗವಹಿಸಿದ್ದರು.

Karave Janaman logo released, organization thunders against poisonous food production

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close