Rastra Bhakthara Balaga questions MLA |ಇಷ್ಟು ದಿನ ಕೂರದ ಕಾಗೆ ಈಗಲೇ ಏಕೆ ಕೂತಿತು-ಶಾಸಕರಿಗೆ ರಾಷ್ಟ್ರಭಕ್ತರ ಬಳಗ ಪ್ರಶ್ನೆ-

SUDDILIVE. || SHIVAMOGGA

ಇಷ್ಟು ದಿನ ಕೂರದ ಕಾಗೆ ಈಗಲೇ ಏಕೆ ಕೂತಿತು-ಶಾಸಕರಿಗೆ ರಾಷ್ಟ್ರಭಕ್ತರ ಬಳಗ ಪ್ರಶ್ನೆ-Why did the crow, which had not been sitting for so long, sit down now? Rastra Bhakthara Balaga questions MLA

RastraBhaktha, Balaga

ಹಳೆಯ ಶಿವಪ್ಪನಾಯಕ ಮಾರುಕಟ್ಟೆಯಲ್ಲಿದ್ದ ೧೧೭ ಹೂವಿನ ವ್ಯಾಪಾರಿಗಳಿಗೆ ನೂತನ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡಕ್ಕೆ ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು ಮಾಡಿರುವ ಆದೇಶದ ಶ್ರೇಯಸ್ಸು ರಾಷ್ಟ್ರಭಕ್ತರ ಬಳಗಕ್ಕೆ ಸಲ್ಲುತ್ತದೆ ಎಂದು ರಾಷ್ಟçಭಕ್ತ ಬಳಗದ ಪ್ರಮುಖ ಈ. ವಿಶ್ವಾಸ್ ತಿಳಿಸಿದರು.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ಕಾಮಗಾರಿ ಮುಗಿದು ಪಾಲಿಕೆಗೆ ಹಸ್ತಾಂತರಗೊಂಡಿದ್ದರೂ ಕಳೆದ ೨ ವರ್ಷಗಳಿಂದ ಫಲಾನುಭವಿಗಳಿಗೆ ಹಂಚಿಕೆ ಮಾಡದೆ ಮಹಾನಗರ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿರುವುದನ್ನು ಖಂಡಿಸಿ ಇತ್ತೀಚೆಗೆ ರಾಷ್ಟçಭಕ್ತರ ಬಳಗ ಕೆ.ಈ. ಕಾಂತೇಶ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪಾಲಿಕೆ ಆಯುಕ್ತರ ಗಮನ ಸೆಳೆದು ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಲಾಗಿತ್ತು. ಅಲ್ಲದೆ ಜನವರಿ ಎರಡರ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ  ಜನವರಿ ೩ರಂದು ಪಾಲಿಕೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಸದ್ಯಕ್ಕೆ ಒಂದು ಸಮಸ್ಯೆಗೆ ಪರಿಹಾರ ದೊರಕಿದ್ದು, ಉಳಿದ ಸಮಸ್ಯೆ ಪರಿಹಾರಕ್ಕೆ ಸಂಬAಧಿಸಿದAತೆ ನಾಳೆ ರಾಮಣ್ಣಶ್ರೇಷ್ಠಿ ಪಾರ್ಕಿನಿಂದ ಬೆಳಿಗ್ಗೆ ೧೦ಗಂಟೆಗೆ ಬೃಹತ್ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕುವ ಪ್ರತಿಭಟನೆ ನಡೆಯಲಿದೆ ಎಂದರು.

ಗುರುವಾರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ರಾಷ್ಟçಭಕ್ತರ ಬಳಗದ ಹೋರಾಟವನ್ನು `ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿಯಾಗಿದೆ ಅಷ್ಟೇ’ ಎಂದು ವ್ಯಂಗ್ಯವಾಡಿದ್ದಾರೆ. ಇಷ್ಟು ದಿನ ಕೂರದ ಕಾಗೆ ಈಗಲೇ ಏಕೆ ಕೂತಿತು? ಕೊಂಬೆ ಏಕೆ ಮುರಿಯಿತು? ಎಂದು ತಿರುಗೇಟು ನೀಡಿದ ಅವರು, ಇನ್ನುಳಿದ ಗಾರ್ಡನ್ ಏರಿಯಾದ ವಾಣಿಜ್ಯ ಸಂಕಿರ್ಣ, ಗಾಂಧಿನಗರ ವಾಣಿಜ್ಯ ಸಂಕಿರ್ಣದ ಮಳಿಗೆಗಳ ಸಮಸ್ಯೆಗಳ ಪರಿಹಾರಕ್ಕೆ ಕಾಗೇ ಏಕೆ ಕೂತಿಲ್ಲ? ಕೊಂಬೆ ಏಕೆ ಮುರಿದಿಲ್ಲ ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. 

ನಗರದ ಅಭಿವೃದ್ಧಿ ವಿಷಯ ಮಾತನಾಡುವಾಗ ಶಿವಮೊಗ್ಗದ ಅಂದಿನ ಶಾಸಕರು ಹಾಗೂ ಸಚಿವರೂ ಆಗಿದ್ದ ಕೆ.ಎಸ್. ಈಶ್ವರಪ್ಪನವರ ಹೆಸರನ್ನೂ ಹೇಳದೆ ಕೇವಲ `ಆಗಿನ ಶಾಸಕರು’ ಎಂದು ಸಂಭೋದಿಸಿದ್ದು ಶಾಸಕ ಚನ್ನಬಸಪ್ಪನವರ ಮನೋದೌರ್ಬಲ್ಯ ಎಂದು ತಿಳಿಯಬೇಕಾಗುತ್ತದೆ. ಈಶ್ವರಪ್ಪನವರ ಹೆಸರು ಹೇಳಲಿಕ್ಕೆ ಶಾಸಕರಿಗೆ ಮುಜುಗರ ಆಗಿದ್ದಾದರೂ ಏಕೆ? ಎಂದು ಪ್ರಶ್ನಿಸಿದ ಅವರು, ಹೂವಿನ ವ್ಯಾಪಾರಿಗಳ ಜೊತೆ ಅಂದು ಮಾತನಾಡಿ ಅವರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಗೊಳಿಸಲು ಮನವೊಲಿಸಿ ಸರ್ಕಾರದಿಂದ ಅನುದಾನ ತರುವುದರಿಂದ ಹಿಡಿದು ಈಗಿನ ಎಲ್ಲಾ ಬೆಳವಣಿಗೆಗಳ ಹಿಂದೆ ಈಶ್ವರಪ್ಪನವರ ಶ್ರಮ ಇರುವುದನ್ನು ಹಾಲಿ ಶಾಸಕರು ಮರೆಯಬಾರದು ಎಂದು ಸಲಹೆ ನೀಡಿದರು. 

ಜಿಲ್ಲಾಧಿಕಾರಿ ಕಛೇರಿ ಎದುರಿನ ಆಟದ ಮೈದಾನದ ವಿವಾದ, ಕೋರ್ಟ್ ಆದೇಶ ನೀಡಿ ೪ ತಿಂಗಳಾದರೂ ಪಾಲಿಕೆ ಇನ್ನೂ ಕೋರ್ಟಿಗೆ ದಾಖಲೆ ಒದಗಿಸಿಲ್ಲ. ಆಶ್ರಯ ಯೋಜನೆಗಳ ಮನೆಗಳಿಗಾಗಿ ಬಡವರು ಮುಂಗಡ ಹಣ ಪಾವತಿಸಿ, ಹಲವು ವರ್ಷಗಳು ಕಳೆದರೂ ಅವರಿಗೆ ಮನೆ ಹಂಚಿಕೆಯಾಗದಿರುವ ಬಗ್ಗೆ, ಇ-ಸ್ವತ್ತು ನೋಂದಣಿಯಲ್ಲಿ ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ, ೨೪/೭ ನೀರಿನ ಸರಬರಾಜಿನಲ್ಲಾಗುತ್ತಿರುವ ವ್ಯತ್ಯಯದ ಬಗ್ಗೆ, ಅಸಮರ್ಪಕ ಬೀದಿ ದೀಪಗಳ ಬಗ್ಗೆ, ಅನಿಲ ಚಿತಾಗಾರದ ಅವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿರುವುದು ರಾಷ್ಟçಭಕ್ತರ ಬಳಗವೇ ಆಗಿದ್ದು, ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೀತಾಲಕ್ಷ್ಮೀ, ಅನಿತಾ ಮಂಜುನಾಥ್, ಆರತಿ ಅ.ಮ.ಪ್ರಕಾಶ್, ರಾಜು, ಇಂದಿರಾನಗರ ರಾಜು, ಕುಬೇರಪ್ಪ, ನಾಗವೇಣಿ, ಶಂಕರ್‌ನಾಯ್ಕ, ಶ್ರೀಕಾಂತ್, ಎಸ್.ಪಿ. ಶಿವಾಜಿ, ಮೊದಲಾದವರಿದ್ದರು. 

Rastra Bhakthara Balaga questions MLA

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close