SUDDILIVE || SHIVAMOGGA
ಕುಮಾರ ಸ್ವಾಮಿ ಅವರೆ ಮುಂದಿನ ಸಿಎಂ-ಕೆಬಿಪಿ- Kumaraswamy is the next CM-KBP
ಆಶ್ರಯ ಮನೆಗಳು ಬಂಗಾರಪ್ಪನವರ ಕಾಲದಲ್ಲಿ ಕೊಡುತ್ತಿದ್ದ ಪುಕ್ಕಟ್ಟೆ ಮನೆಗಳಾಗಿಲ್ಲ. ಜಿಲ್ಲಾ ಉಸ್ತುವರಿ ಸಚಿವರು ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾಪುರ ಮನೆಗಳ ಹಂಚಿಕೆ ಆಗಿಲ್ಲ. ಸಚಿವರು ವಿಫಲರಾಗಿದ್ದಾರೆ ಎಂದು ಜೆಡಿಎಸ್ ಉಪಾಧ್ಯಕ್ಷ ಕೆ.ಬಿ ಪ್ರಸನ್ನ ಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇ-ಖಾತಗಳಿಲ್ಲ. ಆಯುಕ್ತರಿಗೆ ಹೆಚ್ಚು ಬಾರಿ ಮಾತನಾಡಿದರೂ ಉಪಯೋಗವಾಗಿಲ್ಲ. ಇದರ ಜವಬ್ದಾರಿಯಾರದ್ದು? ಭೂಮಿಯ ಮಾಲಿಕತ್ವ ಕೊಡಿಸಿದರೆ ಇ-ಖಾತಗಳಾಗಲಿವೆ. ಭೂಮಿ ಮಾಲಿಕತ್ವ ಗ್ರಾಪಂ ಇದೆ. ಪಾಲಿಕೆಗೆ ಬಂದಿಲ್ಲ. 13 ಕೋಟಿ ಹಣ ಬಾಕಿ ಇದೆ. ಯಾರು ಕೆಲಸ ಮಾಡಲಿದ್ದಾರೆ ಎಂದು ಪ್ರಶ್ನಿಸಿದರು.
ಸಚಿವರು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳ ಜೊತೆ ಮಾತನಾಡಬೇಕು. ಸ್ಲಂ ಅನೇಕ ವರ್ಷಗಳಿಂದ ಇದೆ. ಕೊಳಚೆ ನಿರ್ಮೂಲನ ಮಂಡಳಿ ಅಭಿವೃದ್ಧಿ ಮಂಡಳಿ ಆಯಿತು. ಈ ಹಿಂದಿನಿಂದ ಹಕ್ಕುಪತ್ರ ಮತ್ತು ಪರಿಚಯ ಪತ್ರವನ್ನ ನೀಡಲಾಗಿತ್ತು. ಅವರಿಗೂ ಇ-ಖಾತ ನೀಡಬೇಕಿದೆ. ಇ-ಖಾತ ಇಲ್ಲವೆಂದರೆ ಆಸ್ತಿಗೆ ಬೆಲೆಯಿಲ್ಲದಂತಾಗಿದೆ ಎಂದು ದೂರಿದರು.
ಎರಡೂವರೆ ವರ್ಷದಿಂದ ಸ್ಲಂ ಡೆವೆಲಪ್ ಮೆಂಟ್ ಕಚೇರಿಗೆ ಅನುದಾನ ಬಂದಿಲ್ಲ. ಏನು ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದ ಮಾಜಿ ಶಾಸಕರು ಸಚಿವರು ಕಾರ್ಯಪ್ರವೃತ್ತಿಯಲ್ಲಿ ತಮ್ಮ ಶಕ್ತಿ ತೋರಬೇಕಿದೆ. ಬಡವರ ಕೆಲಸ ಮಾಡಿಕೊಂಡೆ ಅಧಿಕಾರಕ್ಕೆ ಬಂದವರು ಕಾಗೋಡು, ಬಿಎಸ್ವೈ ಆಗಿದ್ದಾರೆ. ಅವರ ಹೆಸರಿಗೆ ಕಳಂಕ ಬರುತ್ತಿದೆಯಾ ಎಂಬ ಆತಂಕವಿದೆ ಎಂದು ದೂರಿದರು.
ಬರುವ ಆಯ ವ್ಯಯದಲ್ಲಾದರೂ ಇದಕ್ಕೆ ಜಿಲ್ಲ ಉಸ್ತುವರಿ ಸಚಿವರು ಕ್ರಮ ಆಗುವಂತೆ ಮಾಡಿ ಅನುದಾನ ನೀಡುವಂತಾಗಲಿ ಎಂದ ಕೆಬಿಪಿ ರಾಜ್ಯದಲ್ಲಿ ಮೊದಲು ಲಾಟರಿಯ ಹಾವಳಿಯಿತ್ತು. ಈಗ ಓಸಿ ಗಾಂಜಾ ಹಾವಳಿ ಹೆಚ್ಚಾಗಿದೆ. ನೂತನ ಎಸ್ಪಿ ನಿಖಿಲ್ ಇದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಓಸಿ ಬಿಡಿಸುವ ಅಧಿಕಾರ ಯಾರ ಕೈಯಲ್ಲಿದೆ. ಲಾಟರಿ ನಿಲ್ಲಿಸಿದ ಕೈಯಲ್ಲಿ ಓಸಿ ನಿಲ್ಲಿಸಲು ಆಗಲ್ವಾ. ಆನ್ ಲೈನ್ ಫ್ರಾಡ್ ಹೆಚ್ಚಾಗಿದೆ. ಅದನ್ನ ಸೆನ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.
ಕುಮಾರ ಸ್ವಾಮಿ ಅವರೆ ಮುಂದಿನ ಮುಖ್ಯಮಂತ್ರಿ.
ಸಚಿವ ಪ್ರಿಯಾಂಕ್ ಖರ್ಗೆ ಕುಮಾರ ಸ್ವಾಮಿ ರಾಜ್ಯದ ರಾಜಕಾರಣಕ್ಕೆ ಬರುವುದು ಡೌಟ್. ಪಕ್ಷವೇ ಇಲ್ಲ ಹೇಗೆ ಬರ್ತಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಬಿಪಿ ಕುಮಾರ ಸ್ವಾಮಿ ಅವರೆ ಮುಂದಿನ ಮುಖ್ಯಮಂತ್ರಿ. ಬರುವ ಸಂದರ್ಭದಲ್ಲಿ ಅವರು ಬರ್ತಾರೆ. ಪಕ್ಷವೇ ಇಲ್ಲದೆ ಕೇಂದ್ರದಲ್ಲಿ ಕುಮಾರ ಸ್ವಾಮಿ ಸಚಿವರಾದ್ರಾ ಎಂದು ತಿರುಗೇಟು ನೀಡಿದರು.
ಸಚಿವ ಜಮೀರ್ ಅಹಮದ್ ಅವರು ಬಂದಾಗ ಸರ್ಕಾರವೇ ಜನರ ಬಾಕಿ ಉಳಿದ ಹಣ ತುಂಬಿಸಲಿದೆ ಎಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಈ ಕೆಲಸ ಮಾಡಬೇಕು. ಹಳೇ ಕೆಲಸಗಳನ್ನ ಸಚಿವರು ಮಾಡಬೇಕು. ನಗರದಲ್ಲಿ 8 ಇಂದಿರಾ ಕ್ಯಾಂಟೀನ್ ಆಗಬೇಕಿದೆ ನಾಲ್ಕು ಹಳೆದಯರಲ್ಲೇ ಮುಗಿದಿತ್ತು. ಇನ್ನೆರಡಕ್ಕೆ ಜಾಗ ಹುಡುಕಲು ಎರಡು ವರ್ಷ ಕಳೆದಿದೆ. ಇನ್ಬೆರಡು ಯಾವಾಗ ಮಾಡುತ್ತಾರೆ ಕಾದು ನೋಡಬೇಕಿದೆ ಎಂದರು.
ಇದೇ ವೇಳೆ ಮಾದ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದ ಭರತ್ ಸಿಂಗ್ ಗೆ ಸನ್ಮಾನಿಸಲಾಯಿತು.
Kumaraswamy is the next CM-KBP


