ಸಕ್ರೆಬೈಲಿನ ಆನೆ ಬಾಲ ಮಾರಾಟದ ಬಗ್ಗೆ ಸಚಿವರ ಹಾರಿಕೆ ಉತ್ತರ-Minister's flying reply on Sakrebail elephant calf sale

 SUDDILIVE || SHIVAMOGGA  

ಸಕ್ರೆಬೈಲಿನ ಆನೆ ಬಾಲ ಮಾರಾಟದ ಬಗ್ಗೆ ಸಚಿವರ ಹಾರಿಕೆ ಉತ್ತರ-Minister's flying reply on Sakrebail elephant calf sale     

Flying, replay

ಅರಣ್ಯ ಜೀವಿಗಳಿಗೆ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಾಗೂ ಸಕ್ರೇಬೈಲಿನಲ್ಲಿನ ಆನೆ ಬಾಲಗಳ ಕಳ್ಳ ಮಾರಾಟ ಕುರಿತಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಆನೆ ಬಾಲ ಮಾರಾಟದ  ಬಗ್ಗೆ ಸಚಿವರ ಹಾರಿಕೆ ಉತ್ತರ ನೀಡಿರುವುದು ಅಚ್ಚರಿ ಮೂಡಿಸಿದೆ.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚವರು, ಅರಣ್ಯ ಜೀವಿಗಳ 15 ಜನ ವೈದ್ಯಾಧಿಕಾರಿಗಳ ನೇಮಕಾತಿಗೆ ಸೂಚನೆ ನೀಡಿದ್ದು ಖಾಯಂ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಬೇಕಿದೆ. ಅಲ್ಲಿಯ ವರೆಗೆ ತಾತ್ಕಾಲಿಕ ನೇಮಕಾತಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. 

ಸಕ್ರೆಬೈಲಿನಲ್ಲಿ ಆನೆ ಬಾಲಗಳ ಕಳ್ಳಮಾರಾಟಕ್ಕೆ ಮಾವುತರೇ ಶಾಮೀಲಾಗಿರವ ಬಗ್ಗೆ ಸಮಗ್ರ ವರದಿ ಬಂದಿದ್ದರೂ ಸಚಿವರು ಯಾವುದೇ ಮಾಹಿತಿ ಇಲ್ಲದೆ ಮಾಧ್ಯಮಗಳ ಮುಂದೆ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಸಕ್ರೆಬೈಲಿನ  ನೇತ್ರಾವತಿಯ ಬಾಲಕ್ಕೆ ಹೊಡೆದ ವಿಷಯವನ್ನ ಮತ್ತು ಆರ್ ಎಫ್ ಒನವರೆ ಎಫ್ಐಆರ್ ಮಾಡಿರುವುದನ್ನ ಮಾಧ್ಯಮಗಳು ಪ್ರಸ್ತಾಪಿಸಿದರೂ ಸಚಿವರು ಉತ್ತರ ನೀಡದೆ ಇರುವುದು ಅನುಮಾನ ಮೂಡಿಸಿದೆ. 

ಆನೆ ಬಾಲಕ್ಕೆ ಕತ್ತರಿಹಾಕಿದ್ದ ಘಟನೆ ನಡೆದು ಎರಡು ವರ್ಷವಾದರೂ ವರದಿ ಬಂದರೂ ವರದಿ ಬಂದಿಲ್ವಾ ಎಂದು ಮಾಧ್ಯಮಗಳು ಕೇಳಿದಾಗ ಸಿಸಿಎಫ್ ಹನುಮಂತಪ್ಪನವರ ಮುಖ ನೋಡಿರುವುದು ಅನುಮಾನ ಹೆಚ್ಚಿಸಿದೆ. 

ಇದುವರೆಗೂ ಇಂತಹ ಕೃತ್ಯಗಳು ಸರ್ಕಾರದ ಗಮನಕ್ಕೆ ಬರುತ್ತಿರಲಿಲ್ಲ‌. ಈಗ ಬಂದಿದೆ. ಆರೋಪಿಗಳಿಗೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು. ವರದಿ ನಾನಿನ್ನೂ ಓದಿಲ್ಲ. ಓದಿ ಮತ್ತೆ ನಿಮ್ಮ ಮುಂದೆ ಬರುವೆ ಎನ್ನುವ ಸಚಿವರಿಗೆ ಆರ್ ಎಫ್ ಒ ಬಾಲಕ್ಕೆ ಕೊಡಲಿಹಾಕಿದ ಮಾವುತರನ್ನ ಹಿಡಿದರೂ ಯಾವುದೇ ಕ್ರಮ ಆಗದೆ ಇರುವುದು ಮತ್ತು ಸಚಿವರ ಈ ಹಾರಿಕೆ ಉತ್ತರ ಅನುಮಾನ ಹುಟ್ಟಿಸಿದೆ. 

ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಸರ್ಕಾರಿ ಕಟ್ಟಡಗಳು ಸೇರಿಕೊಂಡಿವೆ. ಇವುಗಳನ್ನ ಹೊರತುಪಡಿಸಿ ಅಭಯಾರಣ್ಯಗಳನ್ನ ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸರ್ವೆ ಮಾಡಲಾಗುವುದು. ಅದನ್ನ ಖುದ್ದಾಗಿ ನೋಡಲೆಂದು ಶಿವಮೊಗ್ಗಕ್ಕೆ ಬಂದಿರುವೆ. ಇದನ್ನ ಬೆಂಗಳೂರಿನಲ್ಲಿ ತೀರ್ಮಾನ ಮಾಡಲಾಗುವುದು  ಎಂದರು.

ಶರಾವತಿ ಸಂತ್ರಸ್ತರ ಪ್ರಕರಣ ಅಂತಿಮ ಘಟ್ಟಕ್ಕೆ ಬಂದಿದೆ. ಅವರಿಗೆ ಹಕ್ಕುಪತ್ರ ನೀಡುವ ಸೂಚನೆಗಳು ಕಾಣಿಸುತ್ತಿವೆ. ಇದನ್ನ ಸುಖಾಂತ್ಯಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರಬದ್ಧವಿದೆ. ಜೀವನ ಮತ್ತು ಜೀವನೋಪಾಯ ಎರಡೂ ಮುಖ್ಯವಾದುದರಿಂದ ಮುಂದಿನ ಪೀಳಿಗೆಯನ್ನ‌ಸಂರಕ್ಷಸಿಉವ ಜವಬ್ದಾರಿ ನಮ್ಮ ಸರ್ಕಾರದ್ದು ಇದೆ ಎಂದರು. 

ಅರಣ್ಯ ವಿದ್ಯಾರ್ಥಿಗಳ ಕೆಲ ಬೇಡಿಕೆಯನ್ನ ಗಣನೆಗೆ ತೆಗೆದುಕೊಳ್ಳಲಾಗುವುದು. ಅವರಿಗೆ ಸೂಕ್ತ ವ್ಯವಸ್ಥೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ತಪ್ಪಿಸಲು ಅನೇಕ ಕ್ರಮಗಳನ್ನ ಕೈಗೊಳ್ಳಲಾಗಿದೆ. ಆನೆ ಕಾರ್ಯಪಡೆ ಚಿರತೆ ಕಾರ್ಯಪಡೆ ಮಾಡಿ ಸುಬ್ಬಂದಿಗಳ ನೇಮಕಾತಿಯನ್ನ ಹೆಚ್ಚಿನ ರೀತಿಯಲ್ಲಿ ಮಾಡಿ ಸೂಕ್ತ ತರಬೇತಿ ನೀಡಲಾಗಿದೆ. ಟ್ರಂಚ್ ಹೊಡೆಯಲಾಗಿದೆ.‌ ಸೋಲಾರ್ ಫೆನ್ಸಿಂಗ್ ಮಾಡಲಾಗಿದೆ. ಕಮಾನ್ಡ್ ಸೆಂಟರ್ ತೆರಯಲಾಗಿದೆ. NTC ಕ್ಯಾಂಪ್ ಮಾಡಿದ್ದೇವೆ ಎಂದರು. 

Minister's flying reply on Sakrebail elephant calf sale     

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close