ವಿಕ್ಟಿಮ್ ಸೆಂಟ್ರಿಕ್ ಪೊಲೀಸಿಂಗ್ ಎಂದ್ರ ನೂತನ ಎಸ್ಪಿ-New SP for Victim-Centric Policing

 SUDDILIVE || SHIVAMOGGA

ವಿಕ್ಟಿಮ್ ಸೆಂಟ್ರಿಕ್ ಪೊಲೀಸಿಂಗ್ ಎಂದ್ರ ನೂತನ ಎಸ್ಪಿ-New SP for Victim-Centric Policing    

New, sp

ಶಿವಮೊಗ್ಗದಲ್ಲಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸೂಕ್ಷ ಎಲೆಮೆಂಟ್ಸ್ ಗಳ ನಿರ್ಮೂಲನೆ, ಆರಕ್ಷಕ ದಿನಗಳು, ಹೆಲ್ಮೆಟ್ ವಿಚಾರ, ವಿಕ್ಟಿಮ್ ಸೆಂಟ್ರಿಕ್  ಪೊಲೀಸಿಂಗ್,  ಶಿವಮೊಗ್ಗದಲ್ಲಿ ಪಬ್ಲಿಕ್ ಐ ವಾಟ್ಸಪ್ ಗ್ರೂಪ್ ರಚನೆ, ನಶೆ ಮುಕ್ತ ಶಿವಮೊಗ್ಗ ಮೊದಲಾದ ವಿಚಾರದ ಬಗ್ಗೆ ನೂತನ ಎಸ್ಪಿ ಬಿ.ನಿಖಿಲ್ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2017 ನೇ ಬ್ಯಾಚ್ ಭಡ್ಕಳದಿಂದ ಅರಂಭವಾದ ನೂತನ ಎಸ್ಪಿ ಬಿ.ನಿಖಿಲ್ anti national force ನಲ್ಲಿ ಕೆಲಸಮಾಡಿ, ನಂತರ ರಾಯಚೂರು,  ಕೋಲಾರ ಜಿಲ್ಲೆಯ ಜಿಲ್ಲಾರಕ್ಷಣಾಧಿಕಾರಿ ಈಗ ಶಿವಮೊಗ್ಗಕ್ಕೆ ವರ್ಗವಾಗಿರುವುದಾಗಿ ತಿಳಿಸಿದ್ದಾರೆ. 

 ಮಾಧ್ಯಮಗಳ ಸಹಕಾರ ಕೋರಿದ್ದಾರೆ. ಸಾರ್ವಜನಿಕರು ಮತ್ತು ಸರ್ಕಾರದ ನಡುವಿನ ಸೇತುವೆ ಮಾಧ್ಯಮಗಳು ಸೇತುವೆಯಾಗಿ ಕೆಲಸ ಮಾಡುವುದರಿಂದ ಇಲಾಖೆ ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಮುಕ್ತ ಚರ್ಚೆಯಿರಲಿ. ಜನರಿಗೆ ಇಲಾಖೆಯ ಕೆಲಸವನ್ನ ಮುಟ್ಟಿಸಬೇಕು. ಅಭಿವೃದ್ಧಿಗೆ ಮಾಧ್ಯಮಗಳ ಸಹಕಾರ ಬೇಕಿದೆ ಎಂದು ಕೋರಿದರು. 

ವಿಕ್ಟಿಮ್ ಸೆಂಟ್ಟಿಕ್ ಪೊಲಿಸಿಂಗ್ ಕೆಲಸ ಮಾಡಲಾಗುವುದು ಎಂದ ಅವರು ಠಾಣೆ ನೊಂದು ಬಂದ ಸಂತ್ರಸ್ತರಿಗೆ ಗೌರವಪೂರಕ ಮಾತನಾಡಿಸಿ ನ್ಯಾಯಕೊಡಿಸುವ ಬಗ್ಗೆ ಕೆಲಸ ಮಾಡಿಕೊಡುತ್ತೇವೆ. ಮೊದಲ ಬಾರಿಗೆ ಮದ್ಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವೆ.  ಕ್ರೈಂ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿರುವೆ. ತಾಲೂಕುಗಳು ತನ್ನದ ಆದ ಅಸ್ಮಿತೆ ಹೊಂದಿದೆ. ನನಗೆ ಅರ್ಥೈಸಿಕೊಳ್ಳಲು ಸಮಯ ಆಗಬಹುದು. ನಾಳೆಯಿಂದ ಪ್ರತಿ ಠಾಣೆಗೆ ಭೇಟಿ ಕೊಡುವೆ. ಬರ್ನಿಂಗ್ ಇಸ್ಸೂಸ್ ಬಗ್ಗೆ ತಿಳಿದುಕೊಳ್ಳುವೆ ಎಂದರು. 

ಕರುನಾಡಿನ ಗಡಿನಾಡಿನಲ್ಲಿ ಕೆಲಸ ಮಾಡಿರುವೆ ಈಗ ಮಧ್ಯ ಕರ್ನಾಟಕದಲ್ಲಿ ಕೆಲಸ ಮಾಡಿರುವೆ. ಯಾವುದೇ ವಿಚಾರದಲ್ಲಿ ಕಂಟ್ರೋಲ್ ರೂಂ ಮತ್ತು ಪಬ್ಲಿಕ್ ಐ ಎಂಬ ವಾಟ್ಸಪ್ ಗ್ರೂಪ್ ನಿರ್ಮಿಸುತ್ತೇವೆ. ಸಾರ್ವಜನಿಕರಿಗೆ ನಾವು ಸಿಗುವಂತಾದರೆ ಅರ್ಧಕ್ಕೆರ್ಧ ಸಮಸ್ಯೆ ಬಗೆಹರಿದಂತೆ. ಅದಕ್ಕಾಗಿ ಪಬ್ಲಿಷಿಂಗ್ ಕ್ ಐ ವಾಟ್ಸಪ್ ನಿರ್ಮಿಸಲಾಗುವುದು ಎಂದರು. 

ನಶೆ ಮುಕ್ತ ಕರ್ನಾಟಕ ಶಪಥ ಮಾಡಲಾಗಿದೆ ಅದರಂತೆ ನಶೆ ಮುಕ್ತ ಶಿವಮೊಗ್ಗ ಮಾಡಲಾಗುವುದು. ದೂರುಗಳು ಮತ್ತು ದಾಳಿಗಳ ಜೊತೆ ಶಾಲಾ ಮಕ್ಕಳಿಗೆ ಡ್ರಗ್ಸ್  ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಪೋಷಕರು ಮಕ್ಕಳ ಬಗ್ಗೆ ಕ್ಲೋಸ್ ವಾಚ್ ಮಾಡುವ ಬಗ್ಗೆ ಔಟರೀಚ್ ಕಾರ್ಯಕ್ರಮ‌ನಡೆಸಲಾಗುವುದು ಎಂದರು. 

ಹಳೆ ಎಸ್ಪಿಯನ್ನ ನೆನಪಿಸಿಕೊಂಡ ನೂತನ ಎಸ್ಪಿ ವಾರ್ ಎಗನೈಸ್ಟ್ ಡ್ರಗ್ಸ್ ಎಂದಿದ್ದಾರೆ. ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಆರಕ್ಷಕ ದಿನ ಶುರು ಮಾಡಲಾಗುತ್ತಿದೆ. ಆರಕ್ಷಕ ದಿನಗಳಲ್ಲಿ ಸೈಬರ್ ಕ್ರೈಂ, ಮಹಿಳೆ ವಿರುದ್ಧ ದೌರ್ಜನ್ಯ, ಗಾಂಜಾ ಡ್ರಗ್ಸ್ ಬಗ್ಗೆ ಮಾಹಿತಿ ನೀಡಲಾಗುವುದು. ರಸ್ತೆ ಅಪಘಾತದ ಬಗ್ಗೆ ಕಾಳಜಿ ವಹಿಸಲಾಗುವುದು. ಪಿಡಬ್ಲೂಡಿ, ಎನ್ ಹೆಚ್ ಮತ್ತು ಪೊಲೀಸ್ ಇಲಾಖೆಯು ಪ್ರಾಣ ಉಳಿಸುವ ಕೆಲಸ ಮಾಡಬೇಕಿದೆ. ಕೋಲಾರದಲ್ಲಿ ಹೆಲ್ಮೆಟ್ ಹಾಕುವುದನ್ನ ಕಲಿಸಲಾಗಿದೆ. ಇಲ್ಲೂ ಹೆಲ್ಮೆಟ್ ಹಾಕ್ತಾರೆ ಆದರೆ 100% ಹೆಲ್ಮೆಟ್ ಇಲ್ಲ. ಪೊಲೀಸರಿಗಾಗಿ ಹೆಲ್ಮೆಟ್ ಹಾಕಬೇಡಿ. ನಿಮ್ಮ ರಕ್ಷಣೆಗಾಗಿ ಹಾಕಿಕೊಳ್ಳಿ ಎಂದರು. 

ಪೊಲೀಸ್ ಎಂದರೆ ಭಯವಲ್ಲ ಪೊಲೀಸ್ ಎಂದರೆ ಭರವಸೆಯಾಗಬೇಕಿದೆ. ಅದಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮದವರ ಸಹಕಾರ ಬೇಕಿದೆ. ಶಿವಮೊಗ್ಗ ಸೂಕ್ಷ್ಮ ಪ್ರದೇಶ ಎಂಬುದು ಗೊತ್ತಿದೆ ಆ ಎಲೆಮೆಂಟ್ಸ್ ಗೆ ಕಡಿವಾಣ ಮತ್ತು ನಿಗವಹಿಸಲಾಗುವುದು. ಚಿತ್ರದುರ್ಗದವನಾಗಿರುವ ನಸನು ಇಂಜಿನಿಯರ್ ಮುಗಿಸಲಾಗುವುದು.

New SP for Victim-Centric Policing

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close