ಪತ್ರಿಕಾ ವಿತರಕರ ಒಕ್ಕೂಟದ ೨೦೨೬ರ ಕ್ಯಾಲೆಂಡರ್ ಬಿಡುಗಡೆ-Newspaper Distributors' Union releases 2026 calendar

SUDDILIVE || SHIVAMOGGA

ಪತ್ರಿಕಾ ವಿತರಕರ ಒಕ್ಕೂಟದ ೨೦೨೬ರ ಕ್ಯಾಲೆಂಡರ್ ಬಿಡುಗಡೆ-Newspaper Distributors' Union releases 2026 calendar

Newsaper, calender

ಪತ್ರಿಕಾ ವಿತರಕರು ಪತ್ರಿಕಾರಂಗದ ಅವಿಭಾಜ್ಯ ಅಂಗವಾಗಿದ್ದು, ಪತ್ರಿಕೆ ಮುದ್ರಣದ ಶ್ರಮಕ್ಕೆ ಪ್ರತಿಫಲ ಸಿಗಲು ವಿತರಕರ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಿಕಾ ಸಂಘದ ಜಿಲ್ಲಾ ಶಾಖಾ ಅಧ್ಯಕ್ಷ ವೈದ್ಯನಾಥ್ ಹೇಳಿದರು.

ನಗರದ ಬಾಲರಾಜ್ ಅರಸ್ ರಸ್ತೆಯ ಮಥುರ ಪ್ಯಾರಡೈಸ್‌ನಲ್ಲಿ ನಡೆದ ಪತ್ರಿಕಾ ವಿತರಕರ ಒಕ್ಕೂಟದ ೨೦೨೬ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಿಕೆ ವಿತರಕರು ಕಡಿಮೆ ಆದಾಯದಲ್ಲಿ ಬೆಳಗಿನ ಜಾವ ದುಡಿದು ಸಾರ್ವಜನಿಕರಿಗೆ ಸುದ್ದಿ ತಲುಪಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಪತ್ರಿಕಾ ಸಂಸ್ಥೆಗಳು ಸ್ಪಂದಿಸಬೇಕೆಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಹೆಚ್.ಯು.ವೈದ್ಯನಾಥ್ (ವೈದ್ಯ,) ಉಪಾಧ್ಯಕ್ಷರಾದ ಸತ್ಯನಾರಾಯಣ, ಖಜಾಂಚಿಗಳಾದ ರೋಹಿತ್, ಪ್ರಧಾನ ಕಾರ್ಯದರ್ಶಿ ಆರ್.ಎಸ್.ಹಾಲಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ಗಾರಾ, ಶ್ರೀನಿವಾಸ್, ರಾಘವೇಂದ್ರ ಶೆಟ್ಟಿ, ರಾಷ್ಟ್ರೀಯ ಮಂಡಳಿ ಸದಸ್ಯರು ಭಂಡಿಗಡಿ ಆರ್.ನಂಜುಂಡಪ್ಪ, ಹಿರಿಯ ಪತ್ರಕರ್ತರಾದ ಪಾವನ ಕನ್ನಡ ದಿನಪತ್ರಿಕೆ ಸಂಪಾದಕರು ತ್ಯಾಗರಾಜ್‌ಗೆ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾಧ್ಯಕ್ಷರು ಎನ್, ಮಾಲತೇಶ್, ವಹಿಸಿದರು,

ಮುಖ್ಯ ಅತಿಥಿಗಳಾಗಿ ಕರವೇ ಜನಮನ ರಾಜ್ಯ ಸಂಘಟನೆ ರಾಜ್ಯ ಅಧ್ಯಕ್ಷರಾದ ಜನಾರ್ಧನ್ ಸಾಲಿಯನ್ ಹಾಗೂ ಪದಾಧಿಕಾರಿಗಳು ಮಧುರ ಪ್ಯಾರಡೈಸ್ ಗೋಪಿನಾಥ್, ಆ.ನಾ.ವಿಜೇಂದ್ರ, ಪತ್ರಕರ್ತರಾದ ಹೊಸನಗರ ವಿಶ್ವೇಶ್ವರಯ್ಯ, ಶಿಕಾರಿಪುರ ಶಿವಯ್ಯ ಮುಂತಾದ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಒಕ್ಕೂಟ ಗೌರವ ಅಧ್ಯಕ್ಷರು ಶಿಕಾರಿಪುರ ಹುಲಿಗಿ ಕೃಷ್ಣ, ಉಪಾಧ್ಯಕ್ಷರು ರಾಮು ಜಿ, ತೀರ್ಥಹಳ್ಳಿ ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹಮದ್( ನಜೀರ್) ಉಪಾಧ್ಯಕ್ಷರು ವಿನಯ್ ಕುಮಾರ್ ಎಸ್. ವಾಲಿ ತೊಗರ್ಸಿ, ಸಂಘಟನಾ ಕಾರ್ಯದರ್ಶಿ ಶಿಕಾರಿಪುರ ಗಜೇಂದ್ರ, ಭದ್ರಾವತಿ ಪರಶುರಾಮ್ ರಾವ್, ಭದ್ರಾವತಿ ತಾಲೂಕು ಅಧ್ಯಕ್ಷರು ಜಿ,ಐ, ಮಲ್ಲಿಕಾರ್ಜುನ ನಿರ್ದೇಶಕರು ಹರ್ಷ ಎನ್, ಆರ್, ಪಾರ್ತಿಬನ್. ಪಿ, ರಾಜವರ್ಮ ಜೈನ್, ಶಿರಾಳಕೊಪ್ಪ ರಾಘವೇಂದ್ರ, ವಿತರಕರರಾದ ಶ್ರೀನಿವಾಸ್, ಪ್ರಶಾಂತ, ಜಗದೀಶ್, ಅಜಿದ್ ಉಲ್ಲಾ, ಕರವೇ ಜನಮನ ರಾಜ್ಯ ಸಂಘಟನೆಯ ಸದಸ್ಯರಾದ ಸುಮಾ, ವೀಣಾ, ಪುಷ್ಪ ಒಡೆಯರ್, ಶೋಭಾ, ರಾಮಣ್ಣ ರಾಗಿಗುಡ್ಡ, ಅಶೋಕ್, ಪುಷ್ಪ, ಶೋಭಾ, ಉಪಸ್ಥಿತರಿದ್ದರು.

Newspaper Distributors' Union releases 2026 calendar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close