ಶಿವಸಂಕಲ್ಪದಲ್ಲಿ ಈಶ್ವರಪ್ಪನವರ ಸಂಕಲ್ಪವೇನು? ಜ್ಯೋತಿ ಪ್ರಕಾಶ್ ಅವರು ಗುಡುಗಿದ್ದೇಕೆ? What is the resolution of Eshwarappa in Shiva Sankalpa, and what is Jyothi Prakash's thunder?

 SUDDILIVE || SHIVAMOGGA 

ಶಿವಸಂಕಲ್ಪದಲ್ಲಿ ಈಶ್ವರಪ್ಪನವರ ಸಂಕಲ್ಪ, ಜ್ಯೋತಿ ಪ್ರಕಾಶ್ ಶಿವಸಂಕಲ್ಪದಲ್ಲಿ ಈಶ್ವರಪ್ಪನವರ ಸಂಕಲ್ಪವೇನು? ಜ್ಯೋತಿ ಪ್ರಕಾಶ್ ಅವರು ಗುಡುಗಿದ್ದೇಕೆ?  What is the resolution of Eshwarappa in Shiva Sankalpa, and what is Jyothi Prakash's thunder? 

Eshwarappa, shivasankalpa



ನಾನು ಕುರುಬ ಅನ್ನೋದು ಗೊತ್ತಿಲ್ಲ, ಆದರೆ  ನಾನು ಹಿಂದೂ. ಲಿಂಗಾಯಿತರ ಸಭೆಯಲ್ಲಿ ಈಶ್ವರಪ್ಪನವರ ಭಾಗಿಯಾಕೆ ಎಂದು ಪ್ರಶ್ನಿಸುವವರಿದ್ದಾರೆ ಆದರೆ ಅವರು ಲಿಂಗಾಯಿತರೇ  ಅಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದ್ದಾರೆ. 

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ರಾಷ್ಡ್ರಭಕ್ತರ ಬಳಗದ ವತಿಯಿಂದ ಶಿವಸಂಕಲ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ರಾಜ್ಯದಲ್ಲಿ ಕಷ್ಟಪಟ್ಟು ಬಿಜೆಪಿ ಕಟ್ಟಲಾಗಿದೆ. ಹಾಗಾಗಿ ಒಬ್ಬರ ಕೈಗೆ ಬಿಜೆಪಿ ಸೇರಬಾರದು ಎಂಬುದು ನನ್ನ ಹೋರಾಟ ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪನವರ ಕಾಲೆಳೆಯಲು ಅವರು ಮರೆಯಲಿಲ್ಲ. 

ವೀರಶೈವ ಮತ್ತು ಲಿಂಗಾಯಿತರೆಲ್ಲಾ ಒಂದೇ,  ಅವರು ಸಹ ಹಿಂದೂಗಳು. ಬಸವಣ್ಣನವರ ರೀತಿ ಅನುಭವ ಮಂಟಪ ನಡೆದುಕೊಂಡು ಹೋದಂತೆ ಶಿವಸಂಕಲ್ಪ ನಡೆದುಕೊಂಡು ಹೋಗಲಿದೆ. ಇದರ ಮೂಲಕ  ಬಸವೇಶ್ವರರ ಸಿದ್ದಾಂತವನ್ನ ಒಂದು ಗೂಡಿಸೋಣ ಎಂದುಕರೆನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೂರಶೈವ ಲಿಂಗಾಯಿತ ಸಮುದಾಯದ ಮುಖಂಡರಾದ ಹೆಚ್ ವಿ ಮಹೇಶ್ವರಪ್ಪ ಮಾತನಾಡಿ, ಮಾಜಿ ಡಿಸಿಎಂ  ಈಶ್ವರಪ್ಪನವರು ಹಾಲುಮತಸ್ಥರಾಗಿದ್ದರೂ ಅವರು ವೀರಶೈವರೇ, ಈ ಹಿಂದೆ ಶಿವಮೊಗ್ಗದ ವೀರಶೈವ ಸೇರಿ ಒಂದು ಸಂಘಟನೆ ಮಾಡಿದರು ಒಡೆದು ಹೋಯಿತು. ಹಾಗೆ ಆಗಬಾರದು 

ರಾಜಕಾರಣ ಮಾತನಾಡೊಲ್ಲ. ಜಾತಿ ಹೊಡೆದಾಟವಿದೆ. ಮುಸ್ಲೀಂರು ದೇಶವನ್ನ ಹೊಡೆಯಲು ನೋಡುತ್ತಿದ್ದಾರೆ. ಹಿಂದೂ ರಾಷ್ಟ್ರವೆಂದು ಭಾರತ ಮಾತ್ರವಿದೆ. ಸಮಾಜವನ್ನ ಒಡೆಯೊದು ಬೇಡ. ಶಿವಸಂಕಲ್ಪದಿಂದ ನಾವೆಲ್ಲರೂ ಒಂದು ಆಗೋಣ. ಬರುವ ದಿನಗಳಲ್ಲಿ ನಿರುದ್ಯೋಗ ಕಡಿಮೆಯಾಗಲಿ, ಆರೋಗ್ಯ, ವಿದ್ಯೆ ಈಸಂಘಟನೆಯಿಂದ ನಡೆಯಲಿ ಎಂದು  ರಾಷ್ಟ್ರಭಕ್ತರ ಬಳಗದ ಕಾಂತೇಶ್ ತಿಳಿಸಿದರು. 

ಎಸ್ ಎಸ್ ಜ್ಯೋತಿ ಪ್ರಕಾಶ್ ಗುಡುಗು

ಶಿವ ಸಂಕಲ್ಪದಲ್ಲಿ ಗರಿ ಬಿಚ್ಚಿ ಮಾತನಾಡಿದ್ದು ಮಾಜಿ ಸೂಡ ಅಧ್ಯಕ್ಷ ಎಸ್ ಎಸ್ ಜ್ಯೋತಿಪ್ರಕಾಶ್ ಅವರು, ಲಿಂಗಾಯಿತರು ಮತ್ತು ವೀರಶೈವರನ್ನ ಒಡೆದಿದ್ದು ನಾಯಕರಾಗಲಿ, ಸಾಮಾನ್ಯರಾಗಲಿ ಅಲ್ಲ, ಅದು ಗುರುಗಳೆ ಎಂದು ಗುಡುಗಿದ್ದಾರೆ. 

ಅಖಿಲ ಭಾರತೀಯ ವೀರಶೈವ ಲಿಂಗಾಯಿತ ಸಮಾಜದ ಶಾಮನೂರು ಶಿವಶಂಕರಪ್ಪ, ಸಚಿವ ಈಶ್ವರ್ ಖಂಡ್ರೆ ಮತ್ತು ಬಿ.ಎಸ್ ಯಡಿಯೂರಪ್ಪನವರು ಲಿಂಗಾಯಿತ ಮತ್ತು ವೀರಶೈವರು ಒಂದೇ ಎಂದು ಹೇಳಿದರೂ ಗುರುಗಳು ಬಿಡುತ್ತಿಲ್ಲ. ಯಡಿಯೂರಪ್ಪನವರು ಸಿಎಂ ಆಗುವಾಗ ಶೇ.90 ರಷ್ಟು ವೀರಶೈವ ಲಿಂಗಾಯಿತರು ಮತಹಾಕಿದರು. ಅದನ್ನ ಒಡೆಯುವ ಹುನ್ನಾರ ನಡೆಯಿತು ಎಂದು ಎಂದು ಗುಡುಗಿದರು.

ಹುಬ್ಬಳ್ಳಿಯ ಗವಿಸಿದ್ದೇಶ್ವರ ರಾಜಯೋಗೀಂದ್ರ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. 

What is the resolution of Eshwarappa in Shiva Sankalpa, and what is Jyothi Prakash's thunder?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close