SUDDILIVE || SHIVAMOGGA
ನಾಟಿಕೊಳಿ ಬಿರಿಯಾನಿಗೆ ಮುಗಿಬಿದ್ದ ಜನ- People who are addicted to Natikoli biryani
ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿ ಇಂದಿಗೆ ದೇವರಾಜ್ ಅರಸ್ ಅವರ ದಾಖಲೆಯನ್ನ ಮುರಿದಿದ್ದು ಇಂದು ಅವರ ಅಭಿಮಾನಿಗಳ ಸಂಘ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಾಟಿಕೋಳಿ ಬಿರಿಯಾನಿ ಮತ್ತು ಲಡ್ಡುವನ್ನಹಂಚಿ ಸಂಭ್ರಮಿಸಿದೆ.
ಸಿದ್ದರಾಮಯ್ಯನವರ 30 ಅಡಿ ಫ್ಲೆಕ್ಸ್ ಗೆ ಹೂವನ್ನ ಸಿಂಪಡಿಸಿ ಸಂಭ್ರಮಿಸಲಾಯಿತು. ಕರುನಾಡ ದೊರೆ ಸಿದ್ದರಾಮಯ್ಯನವರ ಅಭಿಮಾನಿಗಳ ಬಳಗದಿಂದ ಈ ಕಾರ್ಯಕ್ರಮ ನಡೆದಿದೆ. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ ಈ ಕಾರ್ಯಕ್ರಮ ಐತಿಹಾಸಿಕ ಕ್ಷಣವಾಗಿದೆ. ಕೇಂದ್ರ ಸರ್ಕಾರ ಮಾಡದ ಕೆಲಸವನ್ನ ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ.
ಗ್ಯಾರೆಂಟಿಯಿಂದ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪಂಚ ಗ್ಯಾರೆಂಟಿ ಇಂದು ಅವರಿಗೆ ಜೀವನ ಹಾಸುಹೊಕ್ಕಾಗಿದೆ. ಬಸ್ ನಿಲ್ದಾಣದಲ್ಲಿ ಬಿರಿಯಾನಿಯನ್ನ ಸಿದ್ದರಾಮಯ್ಯನವರ ಭಾವಚಿತ್ರ ಇದ್ದ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಂಚಲಾಗುತ್ತಿದೆ. ಈ ಬಿರಿಯಾನಿ ಪಡೆಯಲು ಜನ ಅಕ್ಷರಶಃ ಮುಗಿಬಿದ್ದಿದ್ದಾರೆ.
People who are addicted to Natikoli biryani


