SUDDILIVE || SHIVAMOGGA
ಸಂದರ್ಶಕರೆ ಗಾಂಜಾ ಆರೋಪಿಗಳು, ಅಂದರ್-Visitors are accused of marijuana, Andar
ಕೇಂದ್ರ ಕಾರಾಗೃಹಕ್ಕೆ ಕೈದಿಯನ್ನು ಭೇಟಿಯಾಗಲು ಬಂದಿದ್ದ ವೇಳೆ ಪ್ಯಾಂಟ್ ಒಳಗಡೆ ಗಾಂಜಾ ಮರೆಮಾಚಿಕೊಂಡು ಸಾಗಿಸಲು ಯತ್ನಿಸಿದ ಘಟನೆ ನಿನ್ನೆ ಸಂಜೆ ಬೆಳಕಿಗೆ ಬಂದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮಹಮ್ಮದ್ ಅಕ್ಬರ್ ಅಲಿಯಾಸ್ ಕಣ್ಣಪ್ಪ (22), ಮದರಿ ಪಾಳ್ಯ ಹಾಗೂ ಅಜ್ಗರ್ ಅಲಿ ಅಲಿಯಾಸ್ ಅಜ್ಜು (21), ಮದರಿ ಪಾಳ್ಯ ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಕೇಂದ್ರ ಕಾರಾಗೃಹದಲ್ಲಿ ಕೈದಿಯನ್ನು ಭೇಟಿಯಾಗಲು ಈ ಇಬ್ಬರು ಆಗಮಿಸಿದ್ದರು. ಈ ವೇಳೆ ಜೈಲು ಅಧಿಕಾರಿಗಳು ರೂಢಿಯಂತೆ ತಪಾಸಣೆ ನಡೆಸಿದಾಗ, ಅವರ ಪ್ಯಾಂಟ್ ಒಳಗಡೆ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಜೈಲು ಅಧಿಕಾರಿಗಳು ತುಂಗಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಪತ್ತೆಯಾದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಮುಂದುವರಿದಿದೆ.
ಜೈಲು ಒಳಗೆ ಮಾದಕ ವಸ್ತು ಸಾಗಣೆ ಮಾಡುವ ಯತ್ನವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಹಿಂದೆ ಯಾವುದೇ ಸಂಪರ್ಕ ಅಥವಾ ಜಾಲವಿದೆಯೇ ಎಂಬ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.
Visitors are accused of marijuana, Andar

