ಕಾರಾಗೃಹದ ಶಿಕ್ಷಾ ಬಂಧಿ ಸಾವು-Prison inmate dies

 SUDDILIVE || SHIVAMOGGA

ಕಾರಾಗೃಹದ ಶಿಕ್ಷಾ ಬಂಧಿ ಸಾವು-Prison inmate dies     

Prison, inmate

ಈ ಕಾರಾಗೃಹದ ಶಿಕ್ಷಾ ಬಂದಿಯಾಗಿದ್ದ ಉಡುಪಿ ಜಿಲ್ಲೆಯ ಪೆರಡೂರು ಗ್ರಾಮದ ಬಸವ ತಂದೆ ಲೇ| ತೋಮ, (78) ವರ್ಷ, ವಯೋ ಸಹಜದಿಂದ ಸಾವನ್ನಪ್ಪಿದ್ದಾನೆ. 

ಈತನು ದಿನಾಂಕ: 25-09-2019 ರಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 10 ವರ್ಷ ಶಿಕ್ಷೆಗೆ ಗುರಿಯಾಗಿದ್ದರು.  ಕಾರಣ ದಿನಾಂಕ: 30-09-2019 ರಂದು ಜಿಲ್ಲಾ ಕಾರಾಗೃಹ, ಉಡುಪಿಯಿಂದ ವರ್ಗಾವಣೆಗೊಂಡು ಶಿವಮೊಗ್ಗ ಕಾರಾಗೃಹಕ್ಕೆ ದಾಖಲಾಗಿದ್ದನು.  

ಸದರಿ ಬಂದಿಯು ಮಧುಮೇಹ, ರಕ್ತದೊತ್ತಡ ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕಾರಣ, ಈ ಕುರಿತು ಹಲವಾರು ಬಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೂ ಕಳುಹಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಂದಿಯನ್ನು ದಿನಾಂಕ: 12-01-2026 ರಂದು ರಾತ್ರಿ ಸಮಯ 22.20 ಗಂಟೆಗೆ ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಶಿವಮೊಗ್ಗ ಇಲ್ಲಿಗೆ ಕಳುಹಿಸಲಾಗಿತ್ತು.

ಈತನನ್ನು ಪರೀಕ್ಷಿಸಿದ ಅಲ್ಲಿನ ವೈದ್ಯರು ಬಂದಿಯನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡು, ಚಿಕಿತ್ಸೆಯನ್ನು ಮುಂದುವರಿಸಿದ್ದರು. ಆದರೆ, ಬಂದಿಯು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 14-01-2026 ರಂದು ಸಮಯ ಬೆಳಗ್ಗೆ 03.12 ಗಂಟೆಗೆ ಮೃತಪಟ್ಟಿರುವುದಾಗಿ ಮೆಗ್ಗಾನ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮರಣ ದೃಢೀಕರಿಸಿದ್ದಾರೆ. 

Prison inmate dies

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close