ತೀರ್ಥಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ, ಇಬ್ಬರು ಸಾವು- Two dead in horrific road accident in Thirthahalli

SUDDILIVE || THIRTHAHALLI

ತೀರ್ಥಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ, ಇಬ್ಬರು ಸಾವು- Two dead in horrific road accident in Thirthahalli   

Thirthahalli, Accudent

ತೀರ್ಥಹಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ ಉಂಟಾಗಿದೆ. ಅಪಘಾತದಿಂದ ಸ್ಥಳದಲ್ಲೇ ಇಬ್ಬರ ಸಾವು ಸಂಭವಿಸಿದೆ. 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ ಘಟನೆ ನಡೆದಿದೆ. ಕಾರಿನಲ್ಲಿ ಮಕ್ಕಳು ಸೇರಿದಂತೆ ಆರು ಮಂದಿ ಪ್ರಯಾಣಮಾಡುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಚಾಲಕ ಮತ್ತು ಪಕ್ಕದ ಸೀಟಿನಲ್ಲಿದ್ದ ಮಹಿಳೆ ಸಾವು ಕಂಡಿರುವುದಾಗಿ ಹೇಳಲಾಗುತ್ತಿದೆ. 

ಸ್ವಿಫ್ಟ್‌ ಡಿಸೈರ್‌ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿದ್ದು ಬಸ್ ನ್ನ ಓವರ್ ಟೇಕ್ ಮಾಡಲು ಯತ್ನಿಸಿದ ವೇಳೆ ಈ ಅವಘಡ ಸಂಭವಿಸಿದೆ. ಬಸ್ಸು ಶಿವಮಗ್ಗ ಹೊಸಪೇಟೆ ಮೇಲೆ  ರಾಯಚೂರು ತಲುಪಬೇಕಿತ್ತು ಎಂದು ತಿಳಿದು ಬಂದಿದೆ. 

ಕಾರಿನಲ್ಲಿದ್ದ ಉಳಿದವರಿಗೆ ಗಂಭೀರ ಗಾಯಾಗಿದೆ. ಕಾರಿನಲ್ಲಿದ್ದವರ ಬಗ್ಗೆ ಇನ್ನಷ್ಟು  ಮಾಹಿತಿ ಬರಬೇಕಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ತೀರ್ಥಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. 

Two dead in horrific road accident in Thirthahalli

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close