ಭದ್ರಾವತಿಯಲ್ಲಿ ಮುರ್ರಾ ತಳಿಯ ಕೋಣಗಳ ಮೆರವಣಿಗೆ- Procession of Murrah breed cows in Bhadravati

SUDDILIVE || BHDRAVATHI

ಭದ್ರಾವತಿಯಲ್ಲಿ ಮುರ್ರಾ ತಳಿಯ ಕೋಣಗಳ ಮೆರವಣಿಗೆ- Procession of Murrah breed cows in Bhadravati   

Cows, procession

ಭದ್ರಾವತಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುರ್ರಾ ಜಾತಿಯ ಎರಡು ಕೋಣಗಳನ್ನು ಭರ್ಜರಿಯಾಗಿ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಹಳದಮ್ಮ ದೇವಾಲಯದಿಂದ ರಂಗಪ್ಪ ವೃತ್ತದ ವರೆಗೂ ಮೆರವಣಿಗೆ ನಡೆಸಿದರು.  ಹೈನುಗಾರಿಕೆಗೆ ಒತ್ತು ನೀಡುವ ಸಲುವಾಗಿ ಮೆರವಣಿಗೆ ನಡೆಸಲಾಯಿತು‌. ಕೋಣಗಳಿಗೆ ವಿಶೇಷವಾದ ಅಲಂಕಾರ ಮಾಡಿ, ಹಲಗೆ ಭಾರಿಸುತ್ತಾ ಮೆರವಣಿಗೆ ಮಾಡಲಾಯಿತು. ಕೊಣಗಳನ್ನು ನೋಡಲು ಜನಸಾಗರವೇ ಸೇರಿತ್ತು. ಈ ಮೂಲಕ ಗೆಳೆಯರಿಬ್ಬರು ಜಾನುವಾರುಗಳ ಸಾಕಾಣೆ ಬಗ್ಗೆ ಯುವ ಜನತೆಗೆ ಆಸಕ್ತಿ ಮೂಡುವಂತೆ ಮಾಡಿದ್ದಾರೆ. 

ಇದನ್ನು ಕಳೆದ ಒಂದು  ವರ್ಷದಿಂದ ಈ ಮುರ್ರಾ ತಳಿಯ ಕೋಣವನ್ಜು  ವಿಶ್ವನಾಥ್ ಹಾಗೂ ಸುಜೀತ್ ರವರು ವಿಶೇಷ ಆಸಕ್ತಿಯಿಂದ ಸಾಕುತ್ತಿದ್ದಾರೆ. ಒಂದು‌ ಕೋಣಕ್ಕೆ ಪ್ರತಿನಿತ್ಯ ಎರಡು ಸಾವಿರ ರೂ ಖರ್ಚು ಬರುತ್ತಿದೆ. ಆದರೂ ಸಹ ಜಾನುವಾರುಗಳ ಮೇಲಿನ ಕ್ರೇಜ್ ನಿಂದ ಗೆಳೆಯರಿಬ್ಬರು ಇದನ್ನು ಸಾಕುತ್ತಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರದಿಂದ ಎರಡು ಕುಟುಂಬಗಳನ್ನು ಕರೆತರಲಾಗಿದೆ‌. 

ಜಾನುವಾರುಗಳ ಮೇಲೆ ಇರುವ ವಿಶೇಷ ಆಸಕ್ತಿಯಿಂದ ಕೋಣಗಳನ್ನು ಸಾಕಲಾಗುತ್ತಿದೆ. ಈ ಮೆರವಣಿಗೆಗೆ ಭದ್ರಾವತಿ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಎಸ್.ಗಣೇಶ್, ಬಿ.ಎಸ್.ಬಸವೇಶ್ , ಶ್ರೀನಿವಾಸ್ ಸೇರಿದಂತೆ ಅನೇಕರು ಶುಭಹಾರೈಸಿದ್ದಾರೆ‌. ಸುಜೀತ್ ಹಾಗೂ ವಿಶ್ವನಾಥ್ ರವರ ಜಾನುವಾರು ಪ್ರೇಮಕ್ಕೆ ಷಹಬ್ಬಾಸ್ ನೀಡಿದ್ದಾರೆ.

Procession of Murrah breed cows in Bhadravati

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close