ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ತಪಾಸಣೆ-ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಸೂಚನೆ- Railway Level Crossing Gate Inspection - Traffic Advisory to Ushe Alternate Route

 SUDDILIVE || SHIVAMOGGA

ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ತಪಾಸಣೆ-ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಸೂಚನೆ-  Railway Level Crossing Gate Inspection - Traffic Advisory to Ushe Alternate Route

Railway, crossing

ಭದ್ರಾವತಿ-ಶಿವಮೊಗ್ಗ ನಡುವೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್  ಗೇಟ್ ಎಲ್‌'ಸಿ ನಂ 46 ಮತ್ತು ಎಲ್‌'ಸಿ ನಂ 42 ಗಳ  ತಪಾಸಣೆ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಆದೇಶ ಹೊರಡಿಸಿದ್ದು, ಎರಡು ದಿನಗಳ ಕಾಲ ಬದಲಿ ಮಾರ್ಗದಲ್ಲಿ ಚಲಿಸುವಂತೆ ಸೂಚಿಸಿದ್ದಾರೆ.

ಜ.21 ರ ಬೆಳಗ್ಗೆ 8 ಗಂಟೆಯಿಂದ ಜ.22ರ ಸಂಜೆ 6 ಗಂಟೆಯವರೆಗೂ ಎಲ್ಸಿ 46 ಚಿತ್ರದುರ್ಗ  ರಸ್ತೆಯ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ  ಚಿತ್ರದುರ್ಗ ರಸ್ತೆ ಸಂಪರ್ಕಿಸುವ ಹೊಸದಾಗಿ ನಿರ್ಮಾಣವಾದ ಮೇಲ್ವೇತುವೆ(ಹೊಳೆಹೊನ್ನೂರು ಫ್ಲೈ ಓವ‌ರ್ ರಸ್ತೆ) ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ಕಲ್ಪಿಸಲಾಗಿದೆ.

ಇನ್ನು ಜ.23ರ ಬೆಳಗ್ಗೆ 8ರಿಂದ ಜ.24ರ ಬೆಳಗ್ಗೆ 6 ಗಂಟೆಯರೆಗೆ ಎಲ್‌'ಸಿ 42 ರ ಯಲವಟ್ಟಿ ರಸ್ತೆಯ ರೈಲ್ವೇ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಯಾ ಎಲ್ಸಿ ನಂ. 46 ಚಿತ್ರದುರ್ಗ ರಸ್ತೆ-ಹೊಸೂಡಿ ರಸ್ತೆ-ಯಲವಟ್ಟಿ ರಸ್ತೆ ಸಂಪರ್ಕ(ಹೊಳೆಹೊನ್ನೂರು ಫ್ಲೈ ಓವರ್‌ ರಸ್ತೆ) ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ಕಲ್ಪಿಸಲಾಗಿದೆ.

ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌'ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ಕಲಂ 115 ರನ್ವಯ ಮೇಲ್ಕಂಡಂತೆ ತಾತ್ಕಾಲಿಕ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

Railway Level Crossing Gate Inspection - Traffic Advisory to Ushe Alternate Route

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close