ಬಿಬಿ ಸ್ಟ್ರೀಟ್ ನಲ್ಲಿ ಸರಗಳ್ಳತನ-Chain snatching in BB Street

 SUDDILIVE || SHIVAMOGGA

ಬಿಬಿ ಸ್ಟ್ರೀಟ್ ನಲ್ಲಿ ಸರಗಳ್ಳತನ-Chain snatching in BB Street    

Chain, snatching


ಬಿಬಿ ಸ್ಟ್ರೀಟ್ ನಲ್ಲಿ 65 ವರ್ಷದ ವೃದ್ದೆ ಕೊರಳಲ್ಲಿದ್ದ 4-5 ಗ್ರಾಂ ತಾಳಿ ಗುಂಡನ್ನ ಬೈಕ್ ನಲ್ಲಿ ಬಂದಿದ್ದ ಸರಗಳ್ಳರು ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. 

ವಾಕಿಂಗ್ ಮುಗಿಸಿ  ಇನ್ನೇನು 10 ಹೆಜ್ಜೆ ಅಂತರದಲ್ಲಿದ್ದ ಮನೆ ಒಳಗೆ ಪ್ರವೇಶಿಸುತ್ತಿದ್ದ ಮಹಿಳೆಯ ಕೊರಳಿನಿಂದ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಲಾಗಿದೆ. ಜ.20ರಂದು ಬೆಳಗ್ಗೆ 7-30 ರ ಸಮಯದಲ್ಲಿ ಈ ಘಟನೆ ನಡೆದಿದೆ. 

ಘಟನೆ ನಡೆದ ಸ್ಥಳಕ್ಕೆ ಹೆಚ್ಚವರಿ ರಕ್ಷಣಾಧಿಕಾರಿ ಶ್ರೀ ರಮೇಶ್ ಕುಮಾರ್ ಎಸ್, ದೊಡ್ಡಪೇಟೆ ಪೊಲೀಸ್ ಠಾಣೆ ಪಿಐ ರವಿ ಸಂಗನಗೌಡ ಪಾಟೀಲ್  ಭೇಟಿ ನೀಡಿದ್ದಾರೆ.  ಉಮಾಗೋಲ್ಡ್ ಮಾಂಗಲ್ಯ ಸರಕ್ಕೆ ತಾಳಿಗುಂಡನ್ನ ಸೇರಿಸಿ ವೃದ್ಧೆ ಮಾಂಗಲ್ಯ ಸರ ಮಾಡಿಕೊಂಡಿದ್ದರು. 

Chain snatching in BB Street

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close