ಗರ್ತಿಕೆರೆ ಬಳಿ ಸ್ಕೂಟಿ ಅಪಘಾತ - ಎಮ್ಮೆಗೆ ಡಿಕ್ಕಿಯಾಗಿ ಸ್ಕೂಟಿ ಪಲ್ಟಿ, ಓರ್ವ ಗಂಭೀರ-Scooty accident near Garthikere - Scooty overturns after hitting buffalo, one seriously injured

SUDDILIVE || Ripponp

ಗರ್ತಿಕೆರೆ ಬಳಿ ಸ್ಕೂಟಿ ಅಪಘಾತ - ಎಮ್ಮೆಗೆ ಡಿಕ್ಕಿಯಾಗಿ ಸ್ಕೂಟಿ ಪಲ್ಟಿ, ಓರ್ವ ಗಂಭೀರ-Scooty accident near Garthikere - Scooty overturns after hitting buffalo, one seriously injured   

Buffalo, accident


ಇಲ್ಲಿನ ಗರ್ತಿಕೆರೆ ಪಟ್ಟಣದ ಅವುಕ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುವನ್ನು ಹುಂಚ ಸಮೀಪದ ಶಂಕ್ರಹಳ್ಳಿ ಗ್ರಾಮದ ಭಾಸ್ಕರ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಅವುಕ ಸರ್ಕಲ್ ಬಳಿ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಭಾಸ್ಕರ್ ಶೆಟ್ಟಿ, ಅಚಾನಕ್ ರಸ್ತೆ ದಾಟುತ್ತಿದ್ದ ಎಮ್ಮೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ವೇಳೆ ಭಾಸ್ಕರ್ ಶೆಟ್ಟಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಆಂಬುಲೆನ್ಸ್‌ಗೆ ಕರೆ ಮಾಡಿದರೂ, ಅದು ತಡವಾಗಿ ಬರುವ ಹಿನ್ನಲೆಯಲ್ಲಿ ಗರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚಿನ್ ಗೌಡ ಹಾಗೂ ಅವರ ಸ್ನೇಹಿತರು ಮಾನವೀಯತೆ ಮೆರೆದಿದ್ದಾರೆ. ಗಾಯಾಳುವನ್ನು ತಕ್ಷಣ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದ ಅವರು, ಮಾರ್ಗಮಧ್ಯೆ ಮೂಗೂಡ್ತಿ ಬಳಿ ಆಗಮಿಸಿದ ಆಂಬುಲೆನ್ಸ್‌ಗೆ ಭಾಸ್ಕರ್ ಶೆಟ್ಟಿಯನ್ನು ಶಿಫ್ಟ್ ಮಾಡಿದ್ದಾರೆ.

ಗಾಯಾಳುವಿಗೆ ಮೊದಲು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Scooty accident near Garthikere - Scooty overturns after hitting buffalo, one seriously injured

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close