ನೂತನ ಜಿಲ್ಲಾಧಿಕಾರಿಗಳಿಗೆ ಸೈಬರ್ ಹ್ಯಾಕರ್ಸ್ ಗಳ ಕಾಟ-Cyber ​​hackers threaten new district magistrate

 SUDDILIVE || SHIVAMOGGA

ನೂತನ ಜಿಲ್ಲಾಧಿಕಾರಿಗಳಿಗೆ ಸೈಬರ್ ಹ್ಯಾಕರ್ಸ್ ಗಳ ಕಾಟ-Cyber ​​hackers threaten new district magistrate     

Cyber, Hackers


ಶಿವಮೊಗ್ಗದ ನೂತನ ಜಿಲಗಲಾಧಿಕಾರಿಗಳಿಗೆ ಸೈಬರ್ ಹ್ಯಾಕರ್ಸ್ ಗಳ ಕಾಟ ಶುರುವಾಗಿದೆ. ಶಿವಮೊಗ್ಗ ಜಿಲ್ಲೆಗೆ  ಪ್ರಭುಲಿಂಗ ಕವಲಕಟ್ಟಿ ಅವರು ನೂತನ ಡಿಸಿಯಾಗಿ ಆಗಮಿಸಿ 13 ದಿನ ಕಳೆದಿದ್ದು, ಅಷ್ಟರೊಳಗೆ ಸೈಬರ್ ಖದೀಮರು ಅವರ ವಾಟ್ಸಪ್ ಸಂದೇಶದ ಮೂಲಕ ಹಣ ವಸೂಲಿಗೆ ಇಳಿದಿದ್ದಾರೆ‌.

ಖುದ್ದು ಡಿಸಿ ಅವರೇ ಈ ಸ್ಪಷ್ಟನೆ ನೀಡುದ್ದು ಯಾರಾದರೂ ಪ್ರಭುಲಿಂಗ ಕವಲಕಟ್ಟಿ ಅವರ ಹೆಸರಿನಲ್ಲಿ ವಾಟ್ಸಪ್ ಸಂದೇಶವನ್ನ ಪಡೆದುಕೊಂಡಲ್ಲಿ ದಯಮಾಡಿ ನಿರ್ಲಕ್ಷಿಸುವಂತೆ ಡಿಸಿ ಅವರು ಕೋರಿಕೊಂಡಿದ್ದಾರೆ. 

ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ ಆದ ನನ್ನ ಹೆಸರು ಮತ್ತು ಭಾವಚಿತ್ರವನ್ನು ಸೈಬರ್ ವಂಚಕರು ಬಳಸಿಕೊಂಡು, ವಿದೇಶಿ ಸಂಖ್ಯೆ +84 56 455 2858 ಹೊಂದಿರುವ ವಾಟ್ಸಾಪ್ ನಂಬರ್ ಮೂಲಕ ಇತ್ತೀಚೆಗೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ನಕಲಿ ಸಂದೇಶ ಕಳುಹಿಸಿದ್ದಾರೆ. 


ಈ ರೀತಿ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರ ಕೃತ್ಯವಾಗಿರುತ್ತದೆ. ಆದ್ದರಿಂದ, ಸಾರ್ವಜನಿಕರು, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ನಕಲಿ ವಾಟ್ಸಾಪ್ ಸಂದೇಶಕ್ಕೆ ದಯವಿಟ್ಟು ಪ್ರತಿಕ್ರಿಯೆ ನೀಡಬಾರದೆಂದು ಸ್ಪಷ್ಟಪಡಿಸಿದೆ. ಇಂತಹ ಸಂಖ್ಯೆಯಿಂದ ಯಾವುದೇ ರೀತಿಯಲ್ಲಿ ಹಣದ ಬೇಡಿಕೆ, ತಪ್ಪು ಸಂದೇಶ ಹಾಗೂ ಸಹಾಯ ಕೋರಿ ನಕಲಿ  (Fake Message) ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ, ಮೊಬೈಲ್ ವಾಟ್ಸ್‌ಆಪ್ ಮುಖಾಂತರ ಸ್ವೀಕರಿಸಿದಲ್ಲಿ, ಅವುಗಳನ್ನು ನಿರ್ಲಕ್ಷಿಸಲು ತಿಳಿಸುತ್ತಾ, ಇಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಲು ಕೋರಿದ್ದಾರೆ. 

Cyber ​​hackers threaten new district magistrate

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close