ದ್ವಿತೀಯ ಪಿಯುಸಿ ಪ್ರಿಪ್ರೇಟರಿ ಪ್ರಶ್ನೆ ಪತ್ರಿಕೆ ಲೀಕ್ ಔಟ್-ಡಿಡಿಪಿಯುನಿಂದ ದೂರು-Second PUC Preparatory Question Paper Leaked - Complaint from DDPU

SUDDILIVE || SHIVAMOGGA

ದ್ವಿತೀಯ ಪಿಯುಸಿ ಪ್ರಿಪ್ರೇಟರಿ ಪ್ರಶ್ನೆ ಪತ್ರಿಕೆ ಲೀಕ್ ಔಟ್-ಡಿಡಿಪಿಯುನಿಂದ ದೂರು-Second PUC Preparatory Question Paper Leaked - Complaint from DDPU   



Prepratory, question


ದ್ವಿತೀಯ ಪಿಯುಸಿ ಪೂರ್ವ ಸಿದ್ದತಾ  ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಆಗಿದ್ದು ಶಿವಮೊಗ್ಗದಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಡಿಡಿಪಿಓ ಚಂದ್ರಪ್ಪರಿಂದ ದೂರು ದಾಖಲಾಗಿದೆ. 

ಶಿವಮೊಗ್ಗದ ಕೆಲ ವ್ಯಕ್ತಿಗಳಿಂದ ಲೀಕ್ ಆಗಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿದ ಉಪನಿರ್ದೇಶಕ ಚಂದ್ರಪ್ಪ, ಬೆಳಗ್ಗೆ ೧೦:೪೫ ಕ್ಕೆ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಗಮನಕ್ಕೆ ಬಂದಿರುವುದಾಗಿ ಉಪನಿರ್ದೇಶಕರು ಮಾಧ್ಯಮಕ್ಕೆ ನೀಡಿದ್ದಾರೆ. 

ಶಿವಮೊಗ್ಗದ ಒಂದು ಸ್ಟ್ರಾಂಗ್ ರೂಮ್ ಹಾಗೂ ಎಂಟು ನೋಡಲ್ ಕೇಂದ್ರಗಳಲ್ಲಿ ಒಂದರಲ್ಲಿ ಪತ್ರಿಕೆ ಸೋರಿಕೆ ಆಗಿರುವ ಬಗ್ಗೆ ಅನುಮಾನ ವ್ಯಕ್ತ ಪಡಿದ ಚಂದ್ರಪ್ಪ, ಸ್ಟ್ರಾಂಗ್ ರೂಂ ನ ಸಿಸಿಟಿವಿ ಪರೀಶೀಲನೆ ಮಾಡುದಾಗಿ ತಿಳಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆ ಹೊರಗೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪ್ರಶ್ನೆ ಪತ್ರಿಕೆ ಸಾಗಿಸುವ ವೇಳೆಗೆ ಲೀಕ್ ಆಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.  ಶಿವಮೊಗ್ಗ ವಿದ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಿಕ್ಕಿಲ್ಲ ಎಂದು ಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ. ಬೇರೆ ಜಿಲ್ಲೆಯಲ್ಲಿ ಶಿವಮೊಗ್ಗದ ಪತ್ರಿಕೆ ಹರಿದಾಡುತ್ತಿರುವುದರಿಂದ ದೂರು ದಾಖಲಾಗಿದೆ. 

ಗಣಿತ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ನಿನ್ನೆ ನಡೆದಿರುವ ದ್ವಿತೀಯ  ಪಿಯು ಪ್ರಿಪರೇಟರಿ ಪರೀಕ್ಷೆಗೆ ಪರೀಕ್ಷಾ ಪ್ರಶ್ನೆ ಪತ್ರಿಕೆ ನಿನ್ನೆಯೇ ಲೀಕ್ ಆಗಿರೋ ಮಾಹಿತಿ ಅನುಮಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ವ್ಯಾಟ್ಸಾಪ್ ಗಳಲ್ಲಿ ಶೇರ್ ಆಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. 80 ಅಂಕಗಳ ಗಣಿತ ಪ್ರಶ್ನೆ ಪತ್ರಿಕೆಯನ್ನ ತುಮಕೂರಿನ ಡಿಡಿಪಿಯು ಶಿವಮೊಗ್ಗದ ಡಿಡಿಪಿಯುಗೆ ವಾಟ್ಸಪ್ ನಲ್ಲಿ ಪ್ರಶ್ನೆ ಪತ್ರಿಕೆ ಹಾಕಿ ನಿಮ್ಮ ಶಿವಮೊಗ್ಗದ್ದು ಎಂದು ತಿಳಿಸಿದ್ದರು. 

ಶಿವಮೊಗ್ಗದ ಡಿಡಿಪಿಯು ನಗರದ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿರುವ ಪರೀಕ್ಷ ಕೇಂದ್ರಕ್ಕೆ ಹೋಗಿ ವಾಟ್ಸಪ್ ನಲ್ಲಿ ಬಂದ ಪ್ರಶ್ನೆ ಪತ್ರಿಕೆ ಹಾಗೂ ಪರೀಕ್ಷ ಕೇಂದ್ರದಲ್ಲಿರುವ ಪ್ರಶ್ನೆ ಪತ್ರಿಕೆ ಎರಡೂ ತಾಳೆಯಾಗಿದೆ. ಹಾಗಾಗಿ 17 ರವರೆಗೆ ನಡೆಯುವ ಪರೀಕ್ಷೆಗಳಿಗೆ ಸೂಕ್ತ ಭದ್ರತೆ ನೀಡುವಂತೆ ಡಿಸಿಪಿಐ ಕೋಟೆ ಠಾಣೆಗೆ ದೂರು ನೀಡಿದ್ದಾರೆ.

Second PUC Preparatory Question Paper Leaked - Complaint from DDPU

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close