ಅರೆಬಿಳಚಿಯ ನೀಲಮ್ಮನ ಜೊತೆ ತಿಪ್ಲಾಪುರದ ಲೀಲಿತಮ್ಮ ಶವ ಪತ್ತೆ- The body of Leelithamma from Tiplapur was found along with Neelamma, who was half-white

 SUDDILIVE || BHADRAVATHI

ಅರೆಬಿಳಚಿಯ ನೀಲಮ್ಮನ ಜೊತೆ ತಿಪ್ಲಾಪುರದ ಲೀಲಿತಮ್ಮ ಶವ ಪತ್ತೆ- The body of Leelithamma from Tiplapur was found along with Neelamma

Lalithamma, tiplapura


ಅರೆಬಿಳಚಿಯ ಮರಾಠರ ಬೀದಿಯ ಒಂದೇ ಕುಟುಂಬದ ನಾಲ್ವರ ಮೃತದೇಹದ ಪತ್ತೆಗಾಗಿ ನಡೆಯುತ್ತಿದ್ದ ಶೋಧಕಾರ್ಯದ ವೇಳೆ ತಿಪ್ಲಾಪುರದ ಲೀಲಿತಮ್ಮನವರ ಶವ ಪತ್ತೆಯಾಗಿದೆ. 

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಇಂದು ಭದ್ರ ಎಡನಾಲೆಗೆ ಬಂದು ಸುಮಾರು 1 ಗಂಟೆಯ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಲಿತಮ್ಮನವರ ಮೃತದೇಹ ಒಂದು ಗಂಟೆ ಅವಧಿ ಅಂತರದಲ್ಲಿ ಮೇಲೆ ಬಂದಿದೆ.  ಇದೇ ವೇಳೆ ಅರಬಿಳಚಿಯ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿದ್ದವರ ಶೋಧದಲ್ಲಿದ್ದ ತಂಡ ಹೋಗಿ ನೋಡಿದಾಗ ತಿಪ್ಲಾಪುರದ ಲಲಿತಮ್ಮನವರ (60) ಶವ ಪತ್ತೆಯಾಗಿದೆ. 

ಶೋಧಕಾರ್ಯದ ವೇಳೆ ವಿಸ್ಮಯಗಳು ಸಂಭವಿಸಿರುವುದು ಇದೇ ಮೊದಲು ಎನ್ನಬಹುದು. ಕಳೆದ ಮೂರು ದಿನಗಳಿಂದ ನೀರುಪಾಲಾದ ನಾಲ್ವರ ಮೃತ ದೇಹದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಉಳಿದವರ ಶೋಧಕಾರ್ಯ ಮುಂದು ವರೆದಿದೆ. ಆದರೆ ಇಂದು ನದಿಗೆ ಹಾರಿದ ಲಲಿತಮ್ಮನವರ ಮೃತದೇಹ ನೀರಿಗೆ ಬಿದ್ದ ಒಂದು ಗಂಟೆಯ ಅಂತರದಲ್ಲಿ ಮೃತದೇಹಪತ್ತೆಯಾಗಿದೆ. 


ಮೊನ್ನೆ ನೀರುಪಾಲಾಗಿದ್ದ ಒಂದೇ ಕುಟುಂಬದ ನಾಲ್ರ ಪೈಕಿಯಲ್ಲಿ ರವಿಯ ಶವ ಪತ್ತೆಯಾಗಿತ್ತು. ಇಂದು ಬೆಳಿಗ್ಗೆ ತಾಯಿ ನೀಲಮ್ಮನವರ ಶವ ಪತ್ತೆಯಾಗಿದೆ. ಇದೇ ಹುಡುಕಾಟದಲ್ಲಿದ್ದ ಶೋಧ ಕಾರ್ಯದ ವೇಳೆ ತಿಪ್ಲಾಪುರದ ಶವ ಪತ್ತೆಯಾಗಿದೆ. 

ಅಳಿಯ ಪರಶುರಾಮ್ ಮಗಳು ಶ್ವೇತಾರ ಹುಟುಕಾಟದಲ್ಲಿ ಈಶ್ವರ ಮಲ್ಪೆ ಮತ್ತು ಅಗ್ನಿಶಾಮಕದಳ ಇಂದು ಘಟನೆ ನಡೆದ ಸ್ಥಳದಿಂದ 10 ಕಿಮಿ ದೂರದ ವರೆಗೆ ಶೋಧಕಾರ್ಯ ನಡೆಸಿದ್ದಾರೆ. ಸಂಜೆ 6 ಗಂಟೆಯ ನಂತರವೂ ಶೋಧಕಾರ್ಯ ಮುಂದುವರೆದಿದೆ. ರವಿ ಪತ್ತೆಯಾದ ಜಾಗದಲ್ಲಿಯೇ ಈ ನೀಲಮ್ಮನವರ ಶವ ಪತ್ತೆಯಾಗಿದೆ. 

The body of Leelithamma from Tiplapur was found along with Neelamma

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close