ಮೂರು ಲಾರಿ ಲೊಡಿನಷ್ಟು ಅವಧಿ ಮುಗಿದ ಆಹಾರ ಪೊಟ್ಟಣ ಪತ್ತೆ- Three lorry loads of expired food packets were found

SUDDILIVE || SHIVAMOGGA

ಮೂರು ಲಾರಿ ಲೊಡಿನಷ್ಟು ಅವಧಿ ಮುಗಿದ ಆಹಾರ ಪೊಟ್ಟಣ ಪತ್ತೆ- Three lorry loads of expired food packets were found     

Expired, food


ಅವಧಿ ಮುಗಿದಿದ್ದ ಪ್ಯಾಕ್ಡ್ ಆಹಾರ ಪೊಟ್ಟಣಗಳ ಮೇಲಿನ ದಾಳಿ ಮುಂದುವರೆದಿದೆ. ಅಪರ ಜಿಲ್ಲಾಧಿಕಾರಿ ಅಭಿಷೇಕ್ ನೇತೃತ್ವದ ದಾಳಿಯಲ್ಲಿ  ಮೂರು ಲಾರಿ ಲೋಡು ಅವಧಿ ಮುಗಿದಿದ್ದ ಪ್ಯಾಕ್ಡ್ ಆಹಾರದ ಪೊಟ್ಟಣಗಳು ಪತ್ತೆಯಾಗಿದ್ದು, ಮೊದಲ ಬಾರಿಯ ದಾಳಿಯ ಹಿನ್ನಲೆಯಲ್ಲಿ ಹೋಂ ಅಪ್ಲೇಯನ್ಸ್ ಗೆ ಎಚ್ಚರಿಕೆ ನೀಡಲಾಗಿದೆ. 

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಲ್  ಗುಡ್ಡೇಕಲ್ ವಾರ್ಡ್ ಸಂಖ್ಯೆ 14 ರಲ್ಲಿ ಹೋಂ ಅಪ್ಲೈಯನ್ಸಸ್ ನಲ್ಲಿ ಅವಧಿ ಮುಗಿದ ಆಹಾರದ ಪೊಟ್ಟಣಗಳನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಇಂದು ಗಣರಾಜ್ಯೋತ್ಸವದ ದಿನದಂದೆ ಅಪರ ಜಿಲ್ಲಾಧಿಕಾರಿಗಳು,  ಉಪ ವಿಭಾಗಾಧಿಕಾರಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 


ಅಂಕಿತ ಅಧಿಕಾರಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ , ತಹಶೀಲ್ದಾರ್ ರವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕ್ ಆರೋಗ್ಯ ಅಧಿಕಾರಿ ರವರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ  ಶ್ರೀಮತಿ ಪುಷ್ಪಾವತಿ ರವರು ಹಾಗೂ ಆರೋಗ್ಯ ನಿರೀಕ್ಷಕರು  ಸದರಿ  ಹೋಂ ಅಪ್ಲೈಯನ್ಸಸ್ ಉದ್ದಿಮೆಯ ಸ್ಥಳ ಪರಿಶೀಲನೆ ನಡೆಸಲಾಗಿ ಪರಿವೀಕ್ಷಣೆಯ ವೇಳೆಯಲ್ಲಿ ಅವಧಿ ಮುಗಿದಿರುವಂತಹ ಸಾಕಷ್ಟು ಆಹಾರ ಪದಾರ್ಥಗಳು ಕಂಡುಬಂದಿದ್ದು ಮಾನ್ಯರ ಸೂಚನೆ ಮೇರೆಗೆ ಪದಾರ್ಥಗಳನ್ನು  ವಶಪಡಿಸಿಕೊಳ್ಳಲಾಗಿದೆ. ಮೂರು ಲಾರಿ ಲೋಡು ಅವಧಿ ಮುಗಿದ ಆಹಾರ ಪೊಟ್ಟಣ ಪತ್ತೆಯಾಗಿದೆ. 

ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಅವಧಿ ಮುಗಿದಿರುವಂತಹ ಘನ ಮತ್ತು ದ್ರವ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ನಾಶಪಡಿಸಲಾಯಿತು. ಆರೋಗ್ಯ ನಿರೀಕ್ಷಕರಾದ ವಿಕಾಸ್, ಲಕ್ಕಣ್ಣನವರ್ ರ ಮುಂದಾಳತ್ವದಲ್ಲಿ, ಲೋಹಿತ್ ಯಾದವ್ ಹಾಗೂ ಸುರೇಶ್ ಕುಮಾರ್ ರವರ ಸಹಯೋಗದೊಂದಿಗೆ ದಾಳಿ ನಡೆದಿದೆ. 

Three lorry loads of expired food packets were found

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close