ಮಣ್ಣು ತೆಗೆಯುವ ನೆಪದಲ್ಲಿ ಕೆರೆಯ ನೀರು ಖಾಲಿ-ಮಣ್ಣು ಮಾಫೀಯದ ಜೊತೆ ಅಧಿಕಾರಿಗಳ ಶಾಮೀಲಾದ್ರಾ? The lake's water is being emptied under the pretext of removing soil

SUDDILIVE || SHIVAMOGGA

ಮಣ್ಣು ತೆಗೆಯುವ ನೆಪದಲ್ಲಿ ಕೆರೆಯ ನೀರು ಖಾಲಿ-ಮಣ್ಣು ಮಾಫೀಯದ ಜೊತೆ ಅಧಿಕಾರಿಗಳ ಶಾಮೀಲಾದ್ರಾ?The lake's water is being emptied under the pretext of removing soil - are the authorities colluding with the soil mafia?

Lake, water

ನಗರದ ಹೊರಭಾಗದಲ್ಲಿರುವ ಪುರ್ಲೆ ಗ್ರಾಮದ ಅಂಬರಗಟ್ಟೆ ಕೆರೆ.. ಒಂದು ತಿಂಗಳಿಂದ ಕೆರೆ ಮಣ್ಣು ತೆಗಿತಿದ್ದು.. ಸುಮಾರು 10 ರಿಂದ 15 ಅಡಿ ಆಳ ತೆಗೆಯಲಾಗಿದ್ದು ಕೆರೆಯ ನೀರನ್ನ ಮಣ್ಣು ತೆಗೆಯುವರು ಖಾಲಿ ಮಾಡಿದ್ದು ಸಂಬಂಧ ಪಟ್ಟ ಇಲಾಖೆ ನಿದ್ದೆಗೆ ಜಾರಿದೆ ಎಂದು ಆಗ್ರಹಿಸಿ  ಸ್ಥಳೀಯರು ಕೆರೆಯ ಅಂಗಳದಲ್ಲಿ ಪ್ರತಿಭಟಿಸಿದ್ದಾರೆ.  

ಪುರಲೆ ಗ್ರಾಮದ ಸರ್ವೆನಂಬರ್ 65 ರಲ್ಲಿರುವ 19 ಎಕರೆಯ ಕೆರೆಯಲ್ಲಿ ಹೂಳೆತ್ತುವ ನೆಪದಲ್ಲಿ ಮಣ್ಣು ಖಾಲಿ ಮಾಡಲಾಗಿದೆ. ಭದ್ರ ಚಾನೆಲ್ ನಿಂದ ಬರುವ ನೀರಿಗೆ ಗೇಟ್ ಏರಿಸಿ ನೀರನ್ನ ತಡೆಯಲಾಗುತ್ತಿದ್ದು ಕೆರೆಯ ಮಣ್ಣನ್ನ ಎತ್ತಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  

ರೈತರಿಗೆ ಹಾರೈಕೆ ಉತ್ತರ ಕೊಟ್ಟು ನಾವು ಪರ್ಮಿಷನ್ ತೆಗೆದುಕೊಂಡಿದ್ದೇವೆ.. ಗ್ರಾಮಸ್ಥರಿಗೆ ರೈತರಿಗೆ ಒಂದು ಹಿಡಿ ಮಣ್ಣನು ಕೊಡದೆ ನ್ಯಾಷನಲ್ ಹೈವೇಗೆ ಮಣ್ಣು ಹೊಡಿತಿದ್ದೇವೆ ಅಂತ ಹೇಳಿ ರಾತ್ರಿ ಹಗಲು ಎಗ್ ಇಲ್ಲದೆ ಮಣ್ಣು ಹೊಡೆಯುತ್ತಿದ್ದಾರೆ.. ಯಾವುದೇ ರಯಾಲಿಟಿ ಕಟ್ಟುತ್ತಿಲ್ಲ. ಜಿಪಿಎಸ್ ವಿತೌಟ್ ಲೈಸೆನ್ಸ್ ನಲ್ಲಿ ರಾಜರೋಷವಾಗಿ ಮಣ್ಣು ಹೊಡೆಯಲಾಗುತ್ಯಿದೆ. ಗಣಿ ಮತ್ತು ನೀರಾವರಿ ಇಲಾಖೆಯವರು ಸ್ಥಳದಲ್ಲಿ ಇಲ್ಲದೆ ಲೂಟಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ದೂರಲಾಗಿದೆ. 


ನೀರಾವರಿ ಇಲಾಖೆ ಅಧಿಕಾರಿಗಳು ಶಾಮಿಲಾಗಿದ್ದು.. ಗದ್ದೆ ತೋಟಗಳಿಗೆ ನೀರು ಹೋಗುವ ಚಾನೆಲ್ ಗಳಿಗೆ ಗೇಟ್ಗಳನ್ನು ಹಾಕಿ ನೀರು ಕೆರೆಗಳಿಗೆ ಹೋಗದೆ.. ಮೌನವಾಗಿ ಮಣ್ಣು ಮಾಫಿಯಾ ಜೊತೆಗೆ ಶಾಮೀಲಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಸಗಿದೆ.  ರೈತರು. ನೀರು ಇಲ್ಲದೆ ದನ ಕರುಗಳಿಗೆ ತೋಟಕ್ಕೆ ದಾರಿ ತೋರದೆ ರೈತರು ಕಂಗಾಲಾಗಿದ್ದಾರೆ. ಭತ್ತದ ನಾಟಿ ಮಾಡಬೇಕಾಗಿ ಸಸಿ ನಡೆಲಾಗಿದ್ದು ಸಸಿಗೆ ನೀರಿಲ್ಲದೆ ಪರದಾಡುವಂತಾಗಿದೆ.  

ಎಲ್ಲಾ ಅರಿತ ಅಧಿಕಾರಿಗಳು. ಎನ್‌ಹೆಚ್ ಅಧಿಕಾರಿಗಳ ಜೊತೆ ಶಾಮೀಲಾಗಿ ರೈತರ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿ ನುಣಚಿಕೊಳ್ಳುತ್ತಿದ್ದಾರೆ. ತಾಲೂಕ್ ಅಧಿಕಾರಿ ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸುತ್ತಾರ ಅಥವಾ ಅವರು ಮಣ್ಣು ಮಾಫಿಯಾ ಜೊತೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮುಂದಾದರೂ ಅಧಿಕಾರಿಗಳು ರೈತರಿಗೆ ನ್ಯಾಯ ಕೊಡಿಸುತ್ತಾರ ಅಥವಾ ಮಣ್ಣು ಮಾಫಿಯಾ ಜೊತೆ ಶಾಮೀಲಾಗುತ್ತಾರ ಕಾದು ನೋಡಬೇಕಿದೆ. 

The lake's water is being emptied under the pretext of removing soil       

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close