ರಿಪ್ಪನ್‌ಪೇಟೆಯ ವಡಗೆರೆ ಬಳಿ ಟ್ರ್ಯಾಕ್ಟರ್–ಬೈಕ್ ಡಿಕ್ಕಿ-ಮಹಿಳೆ ಸ್ಥಳದಲ್ಲೇ ಸಾವು, ಪತಿ–ಮಗು ಗಾಯ-Tractor-bike collision near Vadagere, Rippanpet - Woman dies on the spot, husband and child injured

SUDDILIVE ||SHIVAMOGGA

ರಿಪ್ಪನ್‌ಪೇಟೆಯ ವಡಗೆರೆ ಬಳಿ ಟ್ರ್ಯಾಕ್ಟರ್–ಬೈಕ್ ಡಿಕ್ಕಿ-ಮಹಿಳೆ ಸ್ಥಳದಲ್ಲೇ ಸಾವು, ಪತಿ–ಮಗು ಗಾಯ-Tractor-bike collision near Vadagere, Rippanpet - Woman dies on the spot, husband and child injured     

Bike, Tractor

ರಿಪ್ಪನ್‌ಪೇಟೆಯ ವಡಗೆರೆ ಬಳಿ ಟ್ರ್ಯಾಕ್ಟರ್–ಬೈಕ್ ಡಿಕ್ಕಿ-ಮಹಿಳೆ ಸ್ಥಳದಲ್ಲೇ ಸಾವು ಕಂಡರೆ ಪತಿ–ಮಗು ಗಾಯ ಉಙಟಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಾಗರ ರಸ್ತೆಯ ವಡಗೆರೆ ಸಮೀಪ ಘಟನೆ ನಡೆದಿದೆ. 

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮೃತ ಮಹಿಳೆಯನ್ನು ಶಿಕಾರಿಪುರ ಮೂಲದ ಅಮೃತಾ ಬಿನ್ ನಾಗರಾಜ್ ಎಂದು ಗುರುತಿಸಲಾಗಿದೆ. 

ಅಮೃತಾ ತಮ್ಮ ಪತಿ ನಾಗರಾಜ್ ಹಾಗೂ ಇಬ್ಬರು ಮಕ್ಕಳೊಂದಿಗೆ ಶಿಕಾರಿಪುರದಿಂದ ರಿಪ್ಪನ್‌ಪೇಟೆಗೆ ಕೆಂಚನಾಲ ಜಾತ್ರೆ ಹಿನ್ನೆಲೆಯಲ್ಲಿ ತಂಗಿಯ ಮನೆಗೆ ಪಲ್ಸರ್ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ, ವಡಗೆರೆ ಬಳಿ ಬ್ರೇಕ್ ಹಾಕಿದ ಸಮಯದಲ್ಲಿ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಮೃತಾ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಅಪಘಾತದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ನಾಗರಾಜ್ ಹಾಗೂ ಮಗುಗೆ ಗಾಯವಾಗಿದೆ. ಗಾಯಾಳುಗಳನ್ನ ತಕ್ಷಣ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದೆ. ರಿಪ್ಪನ್‌ಪೇಟೆ ಪಿಎಸ್‌ಐ ರಾಜು ರೆಡ್ಡಿ ನೇತೃತ್ವದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ- ಪರಿಶೀಲನೆ ನಡೆಸಿದ್ದರೆ. 

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ರವಾನಿಸಲಾಗಿದೆ. 

Tractor-bike collision near Vadagere, Rippanpet - Woman dies on the spot, husband and child injured

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close