ನವುಲೆ ರಸ್ತೆಯ ದುರವಸ್ಥೆ- ರಸ್ತೆ ದುರಸ್ತಿಗಿಳಿದ ಶಾಲಾ ವಿದ್ಯಾರ್ಥಿಗಳು!-The poor condition of Navule Road - School students who have been waiting for the road to be repaired!

SUDDILIVE || SHIVAMOGGA

ನವುಲೆ ರಸ್ತೆಯ ದುರವಸ್ಥೆ- ರಸ್ತೆ ದುರಸ್ತಿಗಿಳಿದ ಶಾಲಾ ವಿದ್ಯಾರ್ಥಿಗಳು!-The poor condition of Navule Road - School students who have been waiting for the road to be repaired!   

School, Road


ನಗರದ ನವುಲೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇಂದು ಶಾಲಾ ಮಕ್ಕಳೇ ಸ್ವಯಂ ಪ್ರೇರಿತರಾಗಿ ಹೊಂಡ ತಗ್ಗು ಮುಚ್ಚಿದ ಘಟನೆ ನಡೆದಿದೆ.

ನವುಲೆಯ ಅರುಣೋದಯ ಶಾಲೆ ಎದುರು ಕೇವಲ 50-ಅಡಿ ಉದ್ದದ ಡಾಂಬರ್  ರಸ್ತೆ ಕಳೆದ 2-3 ವರ್ಷಗಳಿಂದಲೂ ಸಂಪೂರ್ಣ ಕಿತ್ತು ಹೋಗಿದ್ದು ಬರೇ ಹೊಂಡ ತಗ್ಗುಗಳಿಂದಲೇ ತುಂಬಿಕೊಂಡಿದೆ. ರಸ್ತೆ ಎಲ್ಲಿದೆ ಅಂತ ಹುಡುಕಬೇಕಾದ ದುಸ್ಥಿತಿ ಸ್ಥಳೀಯರದ್ದಾಗಿದೆ.

ಕಳೆದ ವರ್ಷವೂ ಆ ರಸ್ತೆಯಲ್ಲಿದ್ದ ಹೊಂಡ ತಗ್ಗುಗಳನ್ನು  ಶಾಲೆಯವರೇ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು. 

ನವುಲೆ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಬಡಾವಣೆಯಿಂದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವರೆಗಿನ ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಮಹಾನಗರ ಪಾಲಿಕೆಯ ಅಸಯುಕ್ತರಿಗೆ, ಜನಪ್ರತಿನಿಧಿಗಳಿಗೆ ಸ್ಥಳೀಯ ಸಂಘ, ಸಂಸ್ಥೆಗಳು ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಈ ಶಾಲೆ ಎದುರಿನ ರಸ್ತೆಯಲ್ಲಿರುವ ಹೊಂಡ ತಗ್ಗುಗಳಲ್ಲಿ 3-4ಮಕ್ಕಳು ಎಡವಿ ಬಿದ್ದು ಮೈ ಕೈಗೆ ಗಾಯ ಮಾಡಿಕೊಂಡಿದ್ದರಿಂದ ಈ ತೊಂದರೆ ಬೇರೆಯವರಿಗೆ ಆಗಬಾರದು ಎಂದು ಯೋಚಿಸಿ ಇಂದು ಮಕ್ಕಳೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನಾದರೂ ಮಹಾನಗರ ಪಾಲಿಕೆ ನವುಲೆ ರಸ್ತೆ ದುರಸ್ಥಿಗೆ ಮುಂದಾಗುವುದೇ ಎಂಬುದನ್ನು ಕಾಲವೇ ಉತ್ತರಿಸಬೇಕು.

The poor condition of Navule Road - School students who have been waiting for the road to be repaired

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close