ಮಾಚೇನಹಳ್ಳಿಯ ಕೈಗಾರಿಕ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತ, ಇಬ್ಬರು ಹೊರರಾಜ್ಯ ಕಾರ್ಮಿಕರು ಸಾವು- Two out-of-state workers killed in horrific road accident in Machenahalli industrial area

 SUDDILIVE || SHIVAMOGGA

ಮಾಚೇನಹಳ್ಳಿಯ ಕೈಗಾರಿಕ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತ,  ಇಬ್ಬರು ಹೊರರಾಜ್ಯ ಕಾರ್ಮಿಕರು ಸಾವು- Two out-of-state workers killed in horrific road accident in Machenahalli industrial area    

Road, accident


ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಭಾನುವಾರ ಮಧ್ಯಾಹ್ನದ ವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಹೊರ ರಾಜ್ಯದ ಕಾರ್ಮಿಕರು ಸಾವನಪ್ಪಿದ್ದು ಮತ್ತೋರ್ವ ತೀವ್ರ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶ ರಾಜ್ಯದ ಡಿಯರ್ ಜಿಲ್ಲೆ ಲಂಗರ ಬಜಾರ್ ಪೋಸ್ಟಿನ ಬೆಂಕಿ ಸಿಂಗ್ ವಿ ಗ್ರಾಮದ ಮನೋಜ್ ಚೌರಾಸಿಯ (33) ಮತ್ತು ಬಿಹಾರದ ಪೂರ್ವ ಚಂಪರಣ್ ಜಿಲ್ಲೆಯ ಅರವಿಂದ ಶರ್ಮ (32) ಅಪಘಾತದಲ್ಲಿ ಸಾವನಪ್ಪಿದರೆ ಉತ್ತರ ಪ್ರದೇಶದ ಮತ್ತೋರ್ವ ಕಾರ್ಮಿಕ ದಿನನಾಥ್ ಕುಮಾರ್ ಯಾದವ್ ತೀವ್ರವಾಗಿ ಗಾಯಗೊಂಡಿದ್ದಾನೆ.

ಮನೋಜ್ ಚೌರಾಸಿಯ ಅರವಿಂದ ಶರ್ಮಾ ಮತ್ತು ದೀನಾನಾಥ್ ಕುಮಾರ್ ಯಾದವ್ ಮೂವರು ಜಯಂತಿ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ನೆಲೆಸಿದ್ದು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಮಲ್ನಾಡ್ ಅಲಾಯ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಮಾಚೇನಹಳ್ಳಿಯ ಫ್ಯಾಕ್ಟರಿಗೆ ಭಾನುವಾರ ಬೆಳಿಗ್ಗೆ ಅರಬಿಂದು ಶರ್ಮಾ ಸಿಯ ಮತ್ತು ದೀನನಾಥ್ ಕುಮಾರ್ ಯಾದವ್ ಟಿ ಎನ್:37 ಸಿ ಕ್ಯೂ 2360 ನೋಂದಣಿಯ ಹೀರೋ ಪ್ಯಾಶನ್ ಪ್ರೊ ಬೈಕ್ ನಲ್ಲಿ ಕೂರಿಸಿಕೊಂಡು ಹೋಗುವಾಗ ಇಂಡಸ್ಟ್ರಿಯಲ್ ಏರಿಯಾದಿಂದ ಮಾಚೇನಹಳ್ಳಿ ಡೈರಿ ಕಡೆಗೆ ಹೋಗುವಾಗ ಎಂಆರ್ ಇಂಡಸ್ಟ್ರಿ ಎದುರುಗಡೆ ಎದುರಿನಿಂದ ಬಂದ ಕೆ 14 ಎಂಬಿ 3565 ನೋಂದಣಿಯ ಇನ್ನೊಬ್ಬ ಕಾರ್ ಡಿಕ್ಕಿ ಹೊಡೆದಿದೆ.

ಅರಬಿಂದು ಶರ್ಮಾ ಮತ್ತು ಮನೋ ಚೌರಾಸಿಯ ಇವರನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ನಗನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವಿನ ಪಿಡುತ್ತಾರೆ ಆದರೆ ದೀನನಾಥ್ ಕುಮಾರ್ ಯಾದವ್ ಕೈ ಕಾಲು ಮುರಿದುಕೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ದಿನ ರಾತ್ರಿ ಡೈರಿ ಮುಂದಿನ ಹೈವೆ ರಸ್ತೆ ಭೂಕುಸಿತವಾಗಿತ್ತು. ಅಪಘಾತ ನಡೆಸಿದವರೂ ಸಹ ಮಾಚೇನಹಳ್ಳಿಯ ಕೈಗಾರಿಕ ಪ್ರದೇಶದಲ್ಲಿ ಕಾರ್ಖಾನೆ ನಡೆಸುತ್ತಿಧದವರು ಎಂದು ತಿಳಿದು ಬಂದಿದೆ. 

Two out-of-state workers killed in horrific road accident in Machenahalli industrial area

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close