ಹೊಳೆಹೊನ್ನೂರಿನಲ್ಲಿ 11 ಜನರಿಗೆ ಬೀದಿನಾಯಿಕಡಿತ- Stray dog bite 11people in Holehonnuru

 SUDDILIVE || BHADRAVATHI

ಹೊಳೆಹೊನ್ನೂರಿನಲ್ಲಿ 11 ಜನರಿಗೆ ಬೀದಿನಾಯಿಕಡಿತ- Stray dog bite 11people in Holehonnuru 

Stray, dog

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 11 ಜನರು ನಾಯಿಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಚ್ಚಿದ ನಾಯಿಯನ್ನ ಗ್ರಾಮಸ್ಥರು ಒಡೆದು ಸಾಯಿಸಿದ್ದಾರೆ

ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ನೀಡಿರುವ ಮಾಹಿತಿಯಂತೆ, ಒಟ್ಟು 11 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ದಾಳಿ ಮಾಡಿದ ನಾಯಿಯು ಹುಚ್ಚು ನಾಯಿ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಎಲ್ಲರಿಗೂ ತಕ್ಷಣವೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ಲಸಿಕೆ ನೀಡಲಾಗಿದೆ.

ಹೊಳೆಹೊನ್ನೂರಿನ ಹೇಮಾವತಿ, ನಟರಾಜ, ಕವಿತಾ, ನೀಲಮ್ಮ , ಜಬ್ಬಾರ್ ಖಾನ್, ಮದಿಹಾ, ಅರಹತೊಳಲು ಗ್ರಾಮದ ಕೆ. ರಾಜಪ್ಪ, ತರೀಕೆರೆಯ ಗಿರೀಶ್ ಎಂಬುವವರಿಗೆ ನಾಯಿ ಕಚ್ಚಿದೆ ಎಂದು ತಿಳಿದು ಬಂದಿದೆ. ಇನ್ನು, ನಾಯಿ ಕಡಿತ ಸಂಬಂಧ ವೈದ್ಯಾಧಿಕಾರಿಗಳು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ.

ಈ ಹಿಂದೆ ಶಿಕಾರಿಪುರದಲ್ಲೊ ಒಂದೇ ಬೀದಿನಾಯಿ 30 ಜನರಿಗೆ ಕಚ್ಚಿತ್ತು. ಈಗ ಹೊಳೆಹೊನ್ನೂರಿನಲ್ಲಿ ನಡೆದಿದೆ. ಸರ್ಕಾರ ನರಸತ್ತ ಕಾನೂನುಗಳಿಂದ ಗ್ರಾಮಸ್ಥರು ಕಾನೂನು ಕೈಗೊಂಡಿದ್ದಾರೆ.

Stray dog bite 11people in Holehonnuru

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close