ಶಿವಮೊಗ್ಗದ 'ಸ್ಪಾ'ವೊಂದರಲ್ಲಿ ಬಲವಂತದ ವೇಶ್ಯವಾಟಿಕೆಯ ಆರೋಪ, ಎಸ್ಪಿ ಕಚೇರಿಯ ಬಾಗಿಲು ತಟ್ಟಿದ ಸಂತ್ರಸ್ತೆ- Victim, accused of forced prostitution at a 'spa' in Shimoga, knocks on the door of the SP's office

 SUDDILIVE || SHIVAMOGGA

ಶಿವಮೊಗ್ಗದ 'ಸ್ಪಾ'ವೊಂದರಲ್ಲಿ ಬಲವಂತದ ವೇಶ್ಯವಾಟಿಕೆಯ ಆರೋಪ, ಎಸ್ಪಿ ಕಚೇರಿಯ ಬಾಗಿಲು ತಟ್ಟಿದ ಸಂತ್ರಸ್ತೆ- Victim, accused of forced prostitution at a 'spa' in Shimoga, knocks on the door of the SP's office 

Prostitute, forced



ಶಿವಮೊಗ್ಗದಲ್ಲಿ ಸ್ಪಾಗಳ ಹೆಸರಿನಲ್ಲಿ ಅಧಿಕ ವೇಶ್ಯವಾಟಿಕೆ ನಡೆಸಲಾಗುತ್ತಿದೆಯಾ ಎಂಬ ಆತಂಕದ ಸುದ್ದಿಯೊಂದು ಹೊರಬಿದ್ದಿದೆ. ಸ್ಪಾಗಳಲ್ಲಿ ನ್ಯೂ ಥೆರೆಪಿಸ್ಟ್ ಅವೆಲಬಲ್ ಎಂಬ ಸ್ಟೇಟಸ್ ಹಾಕಿಕೊಂಡು ಗಿರಾಕಿಗಳನ್ನ ಸೆಳೆಯುವ ಚರ್ಮದ ದಂಧೆಗೆ ಇಲಾಖೆ ಬ್ರೇಕ್ ಹಾಕಬೇಕಿದೆ.  ಈ ಘಟನೆ ಅಕ್ರಮ ವೇಶ್ಯವಾಟಿಕೆಗೆ ಪುಷ್ಠಿ ನೀಡುತ್ತಿದೆ. 

ವಿದ್ಯಾನಗರದ ಎವರ್ ಗ್ರೀನ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ವರು ತಮ್ಮನ್ನ ಸ್ಪಾದ ಮಾಲೀಕರು ಮತ್ತು ಆತನ ಸಹಚರೆಯೊಬ್ಬರು ವೈಷ್ಯವಾಟಿಕೆ ಮಾಡುವಂತೆ ಬಲವಂತಿಸುತ್ತಿದ್ದಾರೆ ಎಂದು ಆರೋಪಿಸಿ ಇಂದು ಎಸ್ಪಿ ಕಚೇರಿಯ ಬಾಗಿಲು ತಟ್ಟಿದ್ದಾರೆ. 

ಈ ಹಿಂದೆ ಸುದ್ದಿಲೈವ್ ಬ್ಯೂಟಿಪಾರ್ಲರ್ ಗಳಲ್ಲಿ ವೈಶ್ಯವಾಟಿಕೆ ನಡೆಸುತ್ತಿದೆ. ಅದನ್ನ ಆನ್ ಲೈನ್ ನಲ್ಲಿ ಮಾಡುವ ಮೂಲಕ ಶಿವಮೊಗ್ಗದಲ್ಲಿ ಅನೈತಿಕ ಚಟುವಟಿಕೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ವರದಿ ಮಾಡಲಾಗಿತ್ತು. ಈ ಹಿಂದಿನ ಎಸ್ಪಿ ಮಿಥುನ್ ಕುಮಾರ್ ಗೆ ಈ ಎವರ್ ಗ್ರೀನ್ ಸ್ಪಾ ಸೇರಿ ನಗರದ ಹಲವು ಬ್ಯೂಟಿ ಪಾರ್ಲರ್ ವಿರುದ್ಧವೂ ಮಹಿಳೆಯೊಬ್ಬರು ದೂರು ನೀಡಿದ್ದರು. ಆದರೆ ಯಾವ‌ಪ್ರಯೋಜನವೂ ಆಗಲಿಲ್ಲ. 

ಈಗ ಎವರ್ ಗ್ರೀನ್ ಸ್ಪಾದ ಮಾಲೀಕ ನಂದ ಕುಮಾರ್ ಮತ್ತು ದೀಪು ಯಾನೆ ಮುಸ್ಕಾನ್ ವಿರುದ್ಧ ಅಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಮಹಿಳೆಯನ್ನ ವೇಶ್ಯವಾಟಿಕೆಗೆ ನೂಕಲು ಪ್ರಯತ್ನಿಸುತ್ತಿದ್ದಾರೆ. ಈ ಸ್ಪಾದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನ ಕರೆತಂದು ಚರ್ಚದ ದಂಧೆಗೆ ನೂಕಲಾಗುತ್ತಿದೆ ಎಂದು ದೂರು ನೀಡಲು ಬಂದಿದ್ದಾರೆ. ವೈಶ್ಯವಾಟಿಕೆಗೆ ಎಳೆಯುವ ಮಾಲೀಕರ ಯೋಚನೆಗೆ ಸಂತ್ರಸ್ತ ಮಹಿಳೆಯ ಪತಿ ಕೆಲಸಕ್ಕೆ ಹೋಗೋದೆ ಬೇಡ ಎಂದಾಗ ಸಿದ್ದೇಶ್ವರ ನಗರದಲ್ಲಿರುವ ಸಂತ್ರಸ್ತ ಮಹಿಳೆಯ ಮನೆಗೆ ನುಗ್ಗಿ ಪತಿಯನ್ನ ಥಳಿಸಿ ಮಹಿಳೆಯನ್ನ ಕಾರಲ್ಲಿ ಕರೆದೊಯ್ದುಬಲವಂತವಾಗಿ  ಕೂರಿಸಿಕೊಂಡು ವೇಶ್ಯವಾಟಿಕೆಗೆ ಒಪ್ಪದಿದ್ದರೆ ಪ್ರಾಣ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿದ್ದಾರೆ.

ಪೊಲೀಸರು ಈ ಮಹಿಳೆಗೆ ರಕ್ಷಣೆ ನೀಡುತ್ತಾರಾ? ಕಂಟಕವಾಗಿರುವ ವೇಶ್ಯವಾಟಿಕೆಗೆ ಬ್ರೇಕ್ ಹಾಕುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ. 

Victim, accused of forced prostitution at a 'spa' in Shimoga, knocks on the door of the SP's office

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close